Home namma chikmagalur chikamagalur ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಶಿಫಾರಸ್ ಪತ್ರ
chikamagalurHomeLatest Newsnamma chikmagalur

ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಶಿಫಾರಸ್ ಪತ್ರ

Share
Share

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಭಜರಂಗದಳದ ಮುಖಂಡ ಶ್ಯಾಮ್ ವಿ ಗೌಡ, ಮುಸ್ಲಿಂ ಸಮುದಾಯದ 10 ಮಂದಿ ಸೇರಿ ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಜಿಲ್ಲಾ ಪೊಲೀಸ್ ಇಲಾಖೆಯು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗೆ ಶಿಫಾರಸ್ ಪತ್ರ ರವಾನೆಯಾಗಿದೆ.

15 ಮಂದಿಯ ಪೈಕಿ ಚಿಕ್ಕಮಗಳೂರು ನಗರದ 12 ಮಂದಿ ಇದ್ದಾರೆ, ಉಳಿದ ಮೂರು ಮಂದಿ ಚಿಕ್ಕಮಗಳೂರು ಗ್ರಾಮಾಂತರ ಭಾಗದವರಾಗಿದ್ದಾರೆ ಎಂದು ತಿಳಿದು ಬಂದಿದೆ. 10 ಮಂದಿ ಮುಸ್ಲಿಂ ಸಮುದಾಯದವರು, 5 ಮಂದಿ ಹಿಂದೂಗಳಾಗಿದ್ದಾರೆ. ಎಲ್ಲರಿಗೂ ನೋಟಿಸ್ ಜಾರಿ‌ ಮಾಡಲಾಗಿದೆ.

ಗಡಿಪಾರಿಗೆ ಶಿಫಾರಸ್ಸು ಹೆಸರುಗಳು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ,ಹಾಸನ ವಿಭಾಗದ ಸಹ ಸಂಯೋಜಕ ಶ್ಯಾಮ್, ನೂರ್ ಅಹಮದ್
ಫಾರೂಕ್, ಇಬ್ರಾಹಿಂ (ಇಬ್ಬು), ಇಮ್ರಾನ್, ಚಾಂದ್ ಪಾಷಾ, ಜೋಹಾರ್ ಅಂಜುಮ್, ಮೊಹಮ್ಮದ್ ಇದ್ರಿಶ್,
ಫಾಜಿಲ್ ಅಹಮದ್, ಜಾವೀದ್ ಖುರೇಶಿ, ಮೊಹಮ್ಮದ್ ಫಾಜಿಲ್, ಮೂಡಿಗೆರೆಯ ಕೌಶಿಕ್, ಬಣಕಲ್ ರುದ್ರೇಶ್‌ ಹಾಗೂ ಗೋಣಿಬೀಡು ಪೊಲೀಸ್ ಠಾಣೆ ಸೇರಿದಂತೆ ಹಲವಾರು ಕ್ರೈಮ್ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರ್ತಿಕ್‌ಗೆ ನೋಟಿಸ್‌ ಜಾರಿಗೆ ಎಂದು ಮೂಲಗಳು ತಿಳಿಸಿವೆ.

ಎಲ್ಲರಿಗೂ ಮಾ.25 ರಂದು ಎಸಿ ಕಚೇರಿಯಲ್ಲಿ ವಿಚಾರಣೆ ಹಾಜರಾಗುವಂತೆ ಸೂಚಿಸಲಾಗಿದೆ.

Recommendation letter for deportation of a total of 15 people from the district

Share

Leave a comment

Leave a Reply

Your email address will not be published. Required fields are marked *

Don't Miss

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ-ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ ೧೮ ರಿಂದ ಪ್ರಾರಂಭವಾಗಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು. ಜಿ.ಪಂ.ನ ಅಬ್ದುಲ್...

ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಕೊರತೆ ಇಲ್ಲ

ಚಿಕ್ಕಮಗಳೂರು, ಮಾ.೧೩: ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ ವಿತರಕರು ಗ್ರಾಹಕರ ಮನೆಬಾಗಿಲಿಗೆ ಸರಬರಾಜು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ...

Related Articles

ವಿದ್ಯುತ್ ಸ್ಪರ್ಶಕ್ಕೆ ಯುವಕನ ಧಾರುಣ ಸಾವು

ಅಜ್ಜಂಪುರ: ವಿದ್ಯುತ್ ಸ್ಪರ್ಶದಿಂದ ಪ್ರವೀಣ್ ಎಂಬ ಯುವಕ ಮೃತಪಟ್ಟಿದ್ದಾನೆ ಸೊಕ್ಕೆ ಪರಮೇಶಣ್ಣ ಅವರ ಮಗ. ಹೆಬ್ಬೂರು...

ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಹಲ್ಲೆ

ಮೂಡಿಗೆರೆ:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ...

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 25ಕ್ಕೂ ಹೆಚ್ಚುಕಡೆ ಬೆಂಕಿ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು  ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ...

3.50 ಕೋಟಿ ರೂ ವೆಚ್ಚದ ವಿವಿಧ ರಸ್ತೆಗಳ ಲೋಕಾರ್ಪಣೆ

ಚಿಕ್ಕಮಗಳೂರು:  ಬಡವರ ಬಗ್ಗೆ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ...