ಚಿಕ್ಕಮಗಳೂರು :2023 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಾಕ್ ಪಾಟ್ ರೀತಿ ಗೆದ್ದು ಬೀಗಿದರು. 2024 ರಲ್ಲಿ ಕಾಂಗ್ರೆಸ್ ಹಲವರಿಗೆ ಅದೃಷ್ಟದ ವರ್ಷ ಏಕೆಂದರೆ ಐದು ಜನರಿಗೆ ಅಧಿಕಾರ ಭಾಗ್ಯ ದೊರಕಿತು.
ಎ.ಎನ್.ಮಹೇಶ್ ರವರಿಗೆ ದೊರೆತ ಸ್ಥಾನ ಅವರ ಪಕ್ಷದ ಕೆಲವರಿಗೆ ಹೊಟ್ಟೆ ಕಿವುಚಿಕೊಳ್ಳುವಂತಾಯಿತು. ಅಂತಹ ಮಹತ್ವದ ಸ್ಥಾನ. ರಾಜ್ಯದ ಪರಿಸರ ತಜ್ಞರ ಮೌಲ್ಯ ಮಾಪನ ಸಮಿತಿ ಅಧ್ಯಕ್ಷರಾಗಿ ನೆಮಕವಾಗಿದ್ದು ಮಹೇಶ್ ತಂದೆ ಎ.ಎಮ್. ನಿಂಗೇಗೌಡರು ಕಾಂಗ್ರೆಸ್ ನೀಡಿದ ಕೊಡುಗೆ ಮತ್ತು ಮಹೇಶ್ ರವರ ಬದ್ದತೆ ಮತ್ತು ತಾಳ್ಮೆಗೆ ದೊರೆತಿದೆ.
ಶೃಂಗೇರಿ ಕ್ಷೇತ್ರದಿಂದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಟಿ.ಡಿ.ರಾಜೇಗೌಡ ಸಚಿವರು ಆಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಸಚಿವ ಸ್ಥಾನದಷ್ಟೇ ತೂಕದ ವಿದ್ಯುಚ್ಛಕ್ತಿ ನಿಗಮದ ಅಧ್ಯಕ್ಷರಾಗಿದ್ದಾರೆ. ಇನ್ನು ಎನ್.ಅರ್.ಪುರ ಮೂಲದ ಶ್ರೀನಿವಾಸ್ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದವರು ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾಗಿದ್ದಾರೆ. ಬಿ.ಹೆಚ್.ಹರೀಶ್ ಕಳೆದ ಬಾರಿ ಜನತಾದಳದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಸೇರಿದ ಬಿಎಚ್ ಹರೀಶ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ತಮ್ಮಯ್ಯಗೆ ಟಿಕೆಟ್ ದೊರೆತಿದ್ದರಿಂದ ಡಿ.ಕೆ.ಶಿವಕುಮಾರ್ ರವರ ಭರವಸೆಯಂತೆ ಕೃಷಿ ಮಾರುಕಟ್ಟೆಗೆ ಸಂಭಂದಿಸಿದ ನಿಗಮದ ಅಧ್ಯಕ್ಷರಾಗಿದ್ದಾರೆ. ಡಾ// ಅಂಶುಮಂತ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇವರ ಐದು ವರ್ಷದ ಸಬ್ ಮಿಷನ್ ಜೊತೆಗೆ ಲೋಕಸಭಾ ಟಿಕೆಟ್ ಆಕಾಂಕ್ಷಿ ಆಗಿದ್ದರಿಂದ ಸಮಾಧಾನ ಮಾಡಲು ಭದ್ರಾ ಕಾಡ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇವರಿಗೆ ಜಾಕ್ ಪಾಟ್ ಹೊಡೆದರೆ ಕಾಂಗ್ರೆಸ್ ನ ಎಂ.ಎಲ್.ಮೂರ್ತಿ,ಗಾಯತ್ರಿ ಶಾಂತೇಗೌಡ ಬಿ.ಬಿ.ನಿಂಗಯ್ಯ ಮಂಜೇಗೌಡ ವಕೀಲರಾದ ಪುಟ್ಟೇಗೌಡರು 2025ರ ಕೊನೆ ದಿನಗಳವರೆಗೆ ನಿರೀಕ್ಷೆಯಲ್ಲಿ ಇದ್ದಾರೆ. ಬಿಜೆಪಿಯ ಸಿ.ಟಿ.ರವಿ ನಾಲ್ಕು ಸಾರಿ ಗೆದ್ದು ಶಾಸಕರಾದವರು ಸೋಲಿನ ರುಚಿ ರಾಜಕೀಯವಾಗಿ ಘಾಸಿಗೊಳಿಸಿತ್ತು. ಸಂಘಟನೆಯಲ್ಲಿ ಗಟ್ಟಿಯಾದಷ್ಟೇ ವಿವಾದ ಮೈಮೇಲೆ ಎಳೆದುಕೊಳ್ಳುವುದರಲ್ಲೂ ಗಟ್ಟಿಗ ವಿಧಾನ ಪರಿಷತ್ ಗೆ ಎಂಟ್ರಿ ಕೊಟ್ಟಿದ್ದು ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿತು.
ಇನ್ನು ಜನತಾದಳದ ಎಸ್ ಎಲ್. ಭೋಜೇಗೌಡರು ಕಳೆದ ಬಾರಿ ಏಕಾಂಗಿಯಾಗಿ ಹೋರಾಡಿ ವಿಧಾನ ಪರಿಷತ್ ಪ್ರವೇಶ ಪಡೆದವರು ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ರವರಿಗೆ ಬಹಿರಂಗವಾಗಿ ಬೆಂಬಲಿಸಿ ಹಾಲಿನ ಅಭಿಷೇಕ ಮಾಡಿಸಿಕೊಂಡು ಮೈ ಒಣಗುವ ಮುಂಚೆ ರಾಜಕೀಯ ಬದಲಾವಣೆಯಲ್ಲಿ ಈ ಬಾರಿ ಬಿಜೆಪಿ ದಳದ ಮೈತ್ರಿ ಅಭ್ಯರ್ಥಿಯಾಗಿ ಭರ್ಜರಿ ಗೆಲುವು ದಾಖಲಿಸಿ ಎರಡನೇ ಬಾರಿ ವಿಧಾನ ಪರಿಷತ್ ಪ್ರವೇಶ ಮಾಡಿದ್ದಾರೆ.ಇದು 2024ರಲ್ಲಿ ಜಿಲ್ಲಾ ರಾಜಕಾರಣದ ಝಲಕ್.
Leave a comment