ಬೀರೂರು: ಮಕ್ಕಳ ಜ್ಞಾನರ್ಜನೆಗೆ ಪಠ್ಯದ ಶಿಕ್ಷಣದ ಜೊತೆಗೆ ವಾಸ್ತವ ಬದುಕಿನ ಶಿಕ್ಷಣವನ್ನು ಹೇಳಿಕೊಡುವುದು ಇಂದಿನ ಅನಿವಾರ್ಯತೆ ಇದೆ ಎಂದು ಕರ್ನಾಟಕ ಅಗ್ನಿಶಾಮಕ ದಳ ಡಿಐಜಿಪಿ ರವಿ ಡಿ.ಚನ್ನಣ್ಣನವರ್ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದಲ್ಲಿ ಮಂಗಳವಾರ ನಡೆದ ಡಾ.ಸರ್ವಪಲ್ಲಿ ರಾಧಕೃಷ್ಣನ್ ರವರ ಜನ್ಮದಿನೋತ್ಸವದ ಅಂಗವಾಗಿ ಬೀರೂರು ಶೈಕ್ಷಣಿಕ ತಾಲ್ಲೂಕು ಮಟ್ಟದ ೬೪ನೇ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು.
ಪ್ರಸ್ತುತ ಸರಕಾರ ಮಕ್ಕಳ ಶಿಕ್ಷಣಕ್ಕೆ ಎಲಾ ರೀತಿಯಲ್ಲೂ ಒತ್ತು ಕೊಡುತ್ತಿದೆ. ಅದಕ್ಕೆ ಪೂರಕವಾಗಿ ಶಿಕ್ಷಣವನ್ನು ನೀಡಬೇಕಿದೆ. ಈ ಹಿಂದೆ ಗುರುಪರಂಪರೆ ವಿಧಾನದಲ್ಲಿ ಕಲಿಕೆಯ ಶಿಕ್ಷಣ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದು, ಬಳಿಕ ಹಂತ ಹಂತದ ಶಿಕ್ಷಣದ ಪರಿಪಾಠ ಬದಲಾದಂತೆ ಮಕ್ಕಳ ಕಲಿಕೆಯ ಮಟ್ಟ ವೃದ್ದಿಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ನಕಾರಾತ್ಮಕ ಚಿಂತನೆಗಳಿಂದ ದೂರವಿರಿಸಲು ಬದುಕಿನ ಶಿಕ್ಷಣ ಭವಿ?ದ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದಾದ ಯೋಜನೆಗಳನ್ನು ಹಾಕಿಕೊಟ್ಟು ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಜೀವನದಲ್ಲಿ ಶಿಸ್ತು ಸಂಯಮವನ್ನು ಕಾಪಾಡಿಕೊಂಡರೆ ಉತ್ತಮ ವ್ಯಕ್ತಿತ್ವ ಹೊರಹೊಮ್ಮುತ್ತದೆ. ಇದರ ಹಿಂದಿನ ಪರಿಶ್ರಮ ಕಲಿಕೆಯ ಶಿಕ್ಷಣಕ್ಕೆ ಶಿಕ್ಷಕ ಪ್ರಮುಖ ಪಾತ್ರವಹಿಸುತ್ತಾನೆ ಎಂಬುದನ್ನು ನಾವೆಲ್ಲರೂ ಮನಗಾಣಬೇಕು ಎಂದರು.
ಮಾನವೀಯ ಶಿಕ್ಷಣವು ಮಾನವೀಯ ಮತ್ತು ನೈತಿಕವಾಗಿ ಜವಾಬ್ದಾರಿಯುತ ಸಮಾಜದ ನಿರ್ಮಾಣ ಘಟಕವಾಗಿದೆ. ಶಿಕ್ಷಕರು ಯಶಸ್ವಿಯಾಗಿ ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ವಿಧಾನಗಳನ್ನು ಬಳಸಿಕೊಂಡು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ತಿಳಿ ಹೇಳುವ ಪ್ರಯತ್ನಗಳು ನಡೆದಾಗ ಭವಿ?ದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಈ ಪ್ರಕ್ರಿಯೆಯನ್ನು ನಿರ್ವಹಿಸಿದಾಗ ಮಾನವೀಯ ಶಿಕ್ಷಣವು ಮಾನವೀಯ ಮತ್ತು ನೈತಿಕವಾಗಿ ಜವಾಬ್ದಾರಿಯುತ ಸಮಾಜದ ನಿರ್ಮಾಣ ಘಟಕವಾಗಿದೆ. ಶಿಕ್ಷಕರು ಯಶಸ್ವಿಯಾಗಿ ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ವಿಧಾನಗಳನ್ನು ಬಳಸಿಕೊಂಡು ಈ ಪ್ರಕ್ರಿಯೆಯನ್ನು ನಿರ್ವಹಿಸಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹೋರಾಡಿ ಪಡೆಯುವುದೇ ಹೆಚ್ಚು. ಜ್ಞಾನ ಕಡಿಮೆಯದರೂ ಪರವಾಗಿಲ್ಲ ಆದರೆ ಮಾನವೀಯತೆ ಹೆಚ್ಚಿರುವಂತಹ ವ್ಯಕ್ತಿಯನ್ನು ಶಿಕ್ಷಕರು ಹುಟ್ಟು ಹಾಕಬೇಕು. ನಿಮ್ಮ ಸೇವಾ ಅವಧಿ ಯಲ್ಲಿ ಸಮಾಜದಲ್ಲಿ ಆಗುವ-ಹೋಗುವ ಅನ್ಯಾಯಗಳನ್ನು ಪ್ರಶ್ನೆ ಮಾಡುವಂತಹ ಗುಣಗಳನ್ನು ಬೆಳಸಿ, ಅಂತಹ ರೆಬೆಲ್ ನಾಯಕರನ್ನು ನೀಡಿದಾಗ ಮಾತ್ರ ನಿಮ್ಮ ಶ್ರಮ ಸಾರ್ಥಕವಾಗಿ ಅನೇಕ ಸಮಸ್ಯೆಗಳಿಗೆ ಅವರೇ ಪರಿಹಾರ ದೊರಕಿಸಿಕೊಳ್ಳುತ್ತಾರೆ. ಯಾರಿಗೆ ಯಾರು ಇಲ್ಲವೋ ಅಂತವರ ಪರವಾಗಿ ದ್ವನಿಯಾಗಿ ನಿಲ್ಲಬೇಕು ಎಂದರು.
ಈ ರಾಜ್ಯದಲ್ಲಿ ಪ್ರಾಥಮಿಕ , ಪ್ರೌಢ ಶಾಲೆ ಸೇರಿದಂತೆ ಒಟ್ಟು ೨.೫ಲಕ್ಷ ಜನ ಶಿಕ್ಷಕರಿದ್ದು, ೨೮ಕೋಟಿ ಮಕ್ಕಳು ವಿದ್ಯಾಭೈಆಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ೨.೫ಲಕ್ಷ ಶಿಕ್ಷಕರ ಸೈನ್ಯ ತಾತ್ಸಾರ ಮಾಡಿದರೆ ಭವಿಷ್ಯದ ಒಂದು ಜನಾಂಗದ ಭವಿಷ್ಯ ಹಾಳಾಗುತ್ತದೆ. ರಾಧಕೃಷ್ಣನ್ ಮತ್ತು ಜ್ಯೋತಿ ಬಾ ಪುಲೆ ಬರಿ ಸರ್ಕಾರಿ ನೌಕರರನ್ನು ತಯಾರು ಮಾಡದೆ ಜನನಾಯಕರು, ರೈತರು, ಡಾಕ್ಟರ್‍ಸ್ ತಯಾರು ಮಾಡಲು ಅಡಿಗಲ್ಲು ಹಾಕಿದ್ದರು.ಇದರಿಂದ ದೇ ಶ ಸುಭಿಕ್ಷವಾಗಿ ಹೊರ ಹೊಮ್ಮುತ್ತದೆ ಎಂದರು.
ಶಿಕ್ಷಕರಿಗೆ ಆಲೋಚನ ಲಹರಿ ಸರಿಯಾಗಿದ್ದರೇ ಈ ದೇ ಶದ ಅತೀ ಹೆಚ್ಚು ಮಾನವ ಸಂಪನ್ಮೂಲ ಹೊಂದಿರುವ ಯುವಕರನ್ನು ದೇ ಶ ಕಟ್ಟು ಕಾಯಕ ಮಾಡುವಂತೆ ಮಾಡಿದರೆ ಈ ದೇ ಶ ಉದ್ದರಾವಾಗುವುದರಲ್ಲಿ ಸಂಶಯವಿಲ್ಲ. ಸರಿ-ತಪ್ಪುಗಳ ಬಗ್ಗೆ ಪ್ರಾಥಮಿಕ ಹಂತದಲ್ಲೇ ತಿಳಿಸಿಕೊಟ್ಟರೆ ಅಪರಾಧ ಪ್ರಕರಣಗಳು ಸಹ ಕಡಿಮೆಯಾಗುತ್ತವೆ.
ಶಿಕ್ಷಕರು ಭವಿಷ್ಯ ಭಾರತ ನಿರ್ಮಾಣ ಮಾಡುವ ಕಾರ್ಖಾನೆಗಳಾಗಬೇಕು. ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎನ್ನುವ ಆಲೋಚನೆ ಹೊಂದಿದ ವ್ಯಕ್ತಿಗಳ ಅನಿರ್ವಾಯಕ್ಕೆ ಇದ್ದು, ಅಂತಹ ವ್ಯಕ್ತಿಗಳನ್ನು ಉತ್ತಮ ಸಮಾಜಕ್ಕೆ ನೀಡಿ ಎಂದರು.
ಕಾರ್ಯಕ್ರವನ್ನು ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು.ಕಲಿತು,ಸಾಧಿಸಿದ ವಿದ್ಯೆಯನ್ನು ಮತ್ತೊಬ್ಬರಿಗೆ ಧಾರೆಯೆರೆಯುವ ಪುಣ್ಯ ಕೆಲಸ. ವೇದ ಪುರಾಣದ ಕಾಲದಿಂದಲೂ ಭಾರತದಲ್ಲಿ ಗುರುವಿಗೆ ಪರಮೋನ್ನತ ಸ್ಥಾನವನ್ನು ಕೊಡಲಾಗಿದೆ.
ಆಚಾರ್‍ಯ ದೇವೋಭವ ಎಂಬ ಉಕ್ತಿ ಗುರುವಿನ ಘನತೆಯನ್ನು ಎತ್ತಿ ಹಿಡಿಯುವಂತದ್ದು. ಸಂಸ್ಕೃತಿ, ಪರಂಪರೆ ಮತ್ತು ದೇಶವನ್ನು ಕಟ್ಟುವಲ್ಲಿ ಗುರುವಿನ ಪಾತ್ರ ಪ್ರಮುಖವಾದುದು. ಪ್ರಜೆಗಳಲ್ಲಿ ಸತ್ ಚಾರಿತ್ರ್ಯವನ್ನು ಉಂಟುಮಾಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಅಪೂರ್ವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ.
ಪ್ರತಿಯೊಬ್ಬರು ಸಹ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರ ವಾರ್ಷಿಕ ಪ್ರತಿ ಮಗುವಿಗೆ ೭೭ಸಾವಿರ ಖರ್ಚು ಮಾಡಿ ಓದಿಸುತ್ತಿದೆ.ಆದರೆ ಇಂಗ್ಲೀಷ್ ವ್ಯಾಮೋಹಕ್ಕೆ ಒಳಪಟ್ಟು ಪೋಷಕರು ಸ್ವಂತ ಕೈಯಿಂದ ೩೦ಸಾವಿರ ಶಾಲಾ ಶುಲ್ಕ ಕಟ್ಟಿ ಖಾಸಗಿ ಶಾಲೆಗೆ ಕಳಿಸುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಯಾವುದೇ ಒಬ್ಬ ಉನ್ನತ ಹುದ್ದೆಯಲ್ಲಿರುವರ ವಿದ್ಯಾರ್ಜನೆ ಗಮನಿಸಿದರೆ ಅದು ಸರ್ಕಾರಿ ಶಾಲೆ ನೀಡಿದ್ದಾಗಿರುತ್ತದೆ. ಮತ್ತೆ ಮುಚ್ಚುವ ಸರ್ಕಾರಿ ಶಾಲೆಗಳನ್ನು ಮುಂದುವರೆಸಲು ಪ್ರಜ್ಞಾವಂತರಾಬೇಕು ಎಂದರು.
ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಬಿಇಒ ಚೋಪ್ದಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎನ್.ಶೇಖರಪ್ಪ ಮಾತನಾಡಿದರು. ವೇದಿಕೆಯಲ್ಲಿ ಬೀರೂರು ಶೈಕ್ಷಣಿಕ ವಲಯದ ಅಧ್ಯಕ್ಷ ಬಸಪ್ಪ, ಪ್ರಧಾನ ಕಾರ್ಯದರ್ಶಿ ಆರ್.ಟಿ.ಅಶೋಕ್, ಜಿಲ್ಲಾ ಉಪಾಧ್ಯಕ್ಷ ಬಿ.ಜೆ.ಜಗದೀಶ್, ಪುರಸಭಾ ಮಾಜಿ ಅಧ್ಯಕ್ಷೆ ವನಿತಮಧು, ಸದಸ್ಯರಾದ ಮಾನಿಕ್ ಭಾಷ, ಶಿಕ್ಷಕರ ಸಂಘದ ನಾಗರಾಜ್, ಹಿದಾಯತ್ ಉಲ್ಲಾ, ಮಾದಯ್ಯ, ಯಮುನಾ ಮೋಹನ್, ವಿ.ಗೀತಾ, ಎನ್.ಮಹೇಶ್, ಮೈಲಾರಪ್ಪ, ಮೋಹನ್ ರಾಜ್, ಕವಿತಾ ಹೆಚ್ಚ, ಬಿ.ಆರ್.ಗಂಗಪ್ಪ, ಸೇರಿದಂತೆ ಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳು ಮತ್ತು ವಲಯದ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು.
Real-life education is necessary today.
Leave a comment