ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಇಂದಿನಿಂದ ದತ್ತ ಮಾಲಾ ದತ್ತಜಯಂತಿ ಆಚರಣೆ ಹಿನ್ನೆಲೆಯಲ್ಲಿ 9 ದಿನಗಳ ಕಾಲ ಕಾಫಿನಾಡು ಬೂದಿಮುಚ್ಚಿದ ಕೆಂಡ ಆಗಿರಲಿದೆ, ಚಿಕ್ಕಮಗಳೂರು ನಗರ ಖಾಕಿ-ಕೇಸರಿ ನಾಡಾಗಿ ಪರಿವರ್ತನೆ ಹೊಂದಲಿದೆ, ಇಂದಿನಿಂದ ಕಾಫಿನಾಡಲ್ಲಿ ಖಾಕಿ ಫುಲ್ ಅಲರ್ಟ್ ಆಗಿರಲಿದೆ, ನಗರದಲ್ಲಿ ಪೊಲೀಸರು ಹಾಗೂ ವಿಶೇಷ ತುಕಡಿಗಳ ಪಥ ಸಂಚಲನ ನಡೆಯಿತು ಆರ್.ಎ.ಎಫ್ ಪಡೆಯಿಂದ ಸೂಕ್ಷ್ಮಪ್ರದೇಶಗಳಲ್ಲಿ ರೂಟ್ ಮಾರ್ಚ್ ನಡೆಯಿತು,
ಆಧುನಿಕ ಶಸಾಸ್ತ್ರಗಳೊಂದಿಗೆ ಪೊಲೀಸರು ಪಥ ಸಂಚಲನ ನಡೆಯಿತು, ಇಂದಿನಿಂದ ಡಿಸೆಂಬರ್ 14 ರವರೆಗೆ ದತ್ತಜಯಂತಿ ನಡೆಯಲಿದೆ, ಜಿಲ್ಲಾಡಳಿತ ಕೂಡ ಸಕಲ ಸಿದ್ದತೆ ಮಾಡಿಕೊಂಡಿದೆ. ಪೊಲೀಸರು ವ್ಯಾಪಕ ಬಂದೋಬಸ್ತ್
ನಗರದ ಬಸವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರ್ ಎಎಫ್ ರೂಟ್ ಮಾರ್ಚ್ ನಡೆಸಿದ್ದು ಶಸ್ತ್ರ ಸಜ್ಜಿತ ಪೊಲೀಸ್ ತುಕಡಿಗಳು ಕೂಡಾ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು . ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಬಾಬುದ್ದೀನ್ ಎಎಸ್ಐ ನವೀನ್ ಕುಮಾರ್ ಸೇರಿದಂತೆ ಅಧಿಕಾರಿಗಳು ನೇತೃತ್ವ ವಹಿಸಿದ್ದರು. ಸಾರ್ವಜನಿಕರಲ್ಲಿ ನಿರ್ಭೀತಿ ಮೂಡಿಸಲು ಅಶಾಂತಿ ಸೃಷ್ಟಿಸುವ ಸಮಾಜ ಘಾತುಕರಿಗೆ ಎಚ್ಚರಿಕೆ ನೀಡಲು ಪಥ ಸಂಚಲನ ನಡೆಸಲಾಗಿದ್ದು ನಗರದ ವಿಜಯಪುರ ಬಡಾವಣೆಯ ಮುಖ್ಯ ರಸ್ತೆಗಳಲ್ಲಿ ರೂಟ್ ಮಾರ್ಚ್ ಸಾಗಿ ಬಂತು.
Leave a comment