ಚಿಕ್ಕಮಗಳೂರು : ಜಿಲ್ಲೆಗೆ ನಾಲ್ಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ಜಿಲ್ಲೆಯ ಜನರಿಗೆ ಖುಷಿ ತಂದಿದೆ. ಜಾನಪದ ಕಲಾವಿದೆ ಮುಗಳಿ ಲಕ್ಷ್ಮೀದೇವಮ್ಮ ಮತ್ತು ಸಾಹಿತಿ, ಪತ್ರಕರ್ತರು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಲಲಿತಾ ನಾಯಕ್ ಕಡೂರಿನ ತಂಗಲಿ ತಾಂಡ್ಯದವರು ಇವರುಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿವೆ. ಸುವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಅಜ್ಜಂಪುರ ತಾಲ್ಲೂಕಿನ ಗಡಿಹಳ್ಳಿಯ ಭಾಗ್ಯಮ್ಮ ಮತ್ತು ಮೂಡಿಗೆರೆ ತಾಲೂಕಿನ ಮಡ್ಡಿಕೆರೆ ಗೋಪಾಲ್ ರವರಿಗೆ ದೊರೆತಿವೆ.
ಲಕ್ಷ್ಮೀದೇವಮ್ಮರ ಸೇವೆಯನ್ನು ಗುರುತಿಸಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಕೊಡಲೆಬೇಕು ಎಂದು ನ್ಯೂಸ್ ಕಿಂಗ್ ನಲ್ಲಿ ಬರೆದು ಆಗ್ರಹಿಸಲಾಗಿತ್ತು. ಕಳೆದ ಐವತ್ತು ವರ್ಷಗಳಿಂದ ಎಡಬಿಡದೆ ಜನಪದ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಲಕ್ಷ್ಮಕ್ಕನಿಗೆ ಪ್ರಶಸ್ತಿ ನೀಡಿರುವುದು ಪ್ರಶಸ್ತಿ ಮೌಲ್ಯ ಹೆಚ್ಚಿದಂತಾಗಿದೆ.
ಬಿ.ಟಿ.ಲಲಿತಾ ನಾಯಕ್ ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯದವರು. ವಿದ್ಯಾರ್ಥಿ ದಿಸೆಯಿಂದಲ್ಲೆ ಚುರುಕಾಗಿದ್ದ ಲಲಿತಾ ನಾಯಕ್ ಲಂಕೇಶ್ ಪತ್ರಿಕೆಯಲ್ಲಿ ಬರಹದ ಮೂಲಕ ಗುರುತಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದವರನ್ನು ಗುರುತಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ವಿಧಾನ ಪರಿಷತ್ ಗೆ ನೇಮಕ ಮಾಡಿ ನಂತರ ದೇವದುರ್ಗ ಕ್ಷೇತ್ರದಿಂದ ವಿಧಾನ ಸಭೆಗೆ ಅಯ್ಕೆ ಆಗಿ ಇಂದು ಕೂಡ ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ ಇವರಿಗೆ ಪ್ರಶಸ್ತಿ ದೊರಕಿರುವುದು ಸಹಾ ಪ್ರಶಸ್ತಿಯ ಗೌರವ ಹೆಚ್ಚಿದೆ.
ಇನ್ನು ಜಿಲ್ಲೆಯ ಗಡಿಹಳ್ಳಿ ಗ್ರಾಮದ ಭಾಗಮ್ಮ ಗೀ,ಗೀ ಪದ, ಜಾನಪದ ಮತ್ತು ಸೋಬಾನೆ ಹಾಡುಗಳನ್ನು ಲೀಲಾಜಾಲವಾಗಿ ಹಾಡುವ ಕಲೆಯನ್ನು ಕರತಲಾಮಲಕ ಮಾಡಿಕೊಂಡವರು ಇವರಿಗೆ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ನೀಡಲು ಗುರ್ತಿಸಿದ ಸರ್ಕಾರವನ್ನು ಅಭಿನಂದಿಸಬೇಕು.
ಮಡ್ಡಿಕೆರೆ ಗೋಪಾಲ್ ಮೈಸೂರಿನಲ್ಲಿ ವಕೀಲರಾಗಿ ಸಾಹಿತ್ಯ ಕ್ಷೇತ್ರದಲ್ಲೂ ಅಸಕ್ತಿ ಹೊಂದಿ ನಾಡ ನುಡಿಯ ಹೋರಾಟದಲ್ಲಿ ತೊಡಗಿಸಿಕೊಂಡಿರವ ಇವರು ಮೈಸೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎರಡನೇ ಬಾರಿ ಅಯ್ಕೆಯಾಗಿ ಜನಾನುರಾಗಿಯಾಗಿರುವ ಗೋಪಾಲ್ ಗೆ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಅಯ್ಕೆಮಾಡಿದ ಸರ್ಕಾರ ಕ್ರಮವನ್ನು ಜಿಲ್ಲೆಯ ಜನ ಶ್ಲಾಘಿಸಿದ್ದಾರೆ. ಮೂವರು ಮಹಿಳೆಯರನ್ನು ಅಯ್ಕೆಮಾಡಿರುವುದು ದಾಖಲೆಯೂ ಆಗಿದೆ.
Leave a comment