Home namma chikmagalur chikamagalur ಬ್ಯಾಂಕ್ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
chikamagalurHomeLatest Newsnamma chikmagalur

ಬ್ಯಾಂಕ್ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Share
Share

ಚಿಕ್ಕಮಗಳೂರು:  ಬ್ಯಾಂಕಿಂಗ್ ಉದ್ಯಮದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಪ್ರತಿ ವಾರವು ಐದು ದಿನಗಳ ಕೆಲಸ ನಿರ್ವಹಿಸಲು ಸರ್ಕಾರ ಅನುಮೋದಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬ್ಯಾಂ ಕ್ ನೌಕರರ ಸಂಘದ ಮುಖಂಡರುಗಳು ನಗರದ ಕೆನರಾ ಬ್ಯಾಂಕ್ ಮುಖ್ಯಕಚೇರಿ ಆವರಣದಲ್ಲಿ ಮಂಗಳ ವಾರ ಪ್ರತಿಭಟನೆ ನಡೆಸಿದರು.

ಈ ಕುರಿತು ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಬಸವರಾಜ್ ಪ್ರಸ್ತುತ ತಿಂಗಳಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ಈಗಾಗಲೇ ಬ್ಯಾಂಕ್‌ಗಳಿಗೆ ರಜಾದಿನವಾಗಿದೆ. ಅದರಂತೆ ಪ್ರತಿ ವಾರ ವು ನೌಕರರು ಐದು ಕೆಲಸ ನಿರ್ವಹಿಸಿ, ಉಳಿದ ಎರಡು ದಿನಗಳಿಗೆ ರಜೆ ಘೋಷಿಸಬೇಕು ಎಂದು ಒತ್ತಾಯಿ ಸಿದರು.

ಬ್ಯಾಂಕಿಂಗ್ ವಲಯದಲ್ಲಿ ವಾರಕ್ಕೆ ಐದು ಕೆಲಸದ ದಿನಗಳನ್ನು ಪರಿಚಯಿಸಬೇಕು ಎಂದು ಯುನೈಟೆ ಡ್ ಪೋರಮ್ ಆಫ್ ಬ್ಯಾಂಕ್ ಯೂನಿಯನ್ಸ್‌ನಿಂದ ಒತ್ತಾಯಿಸಿದ್ದು ೨೦೧೫ರಲ್ಲಿ ಸಹಿ ಮಾಡಿದ ೧೦ನೇ ದ್ವಿ ಪಕ್ಷೀಯ ಒಪ್ಪಂದ, ೭ನೇ ಜಂಟಿ ಟಿಪ್ಪಣಿಯಲ್ಲಿ ಇದನ್ನು ಐಬಿಎ ಮತ್ತು ಸರ್ಕಾರ ಒಪ್ಪಿಕೊಂಡು ಪ್ರತಿ ೨ನೇ ಮತ್ತು ೪ನೇ ಶನಿವಾರ ರಜಾದಿನವಾಗಿ ಘೋಷಿಸಿದೆ ಎಂದರು.

ಹಣಕಾಸು ವಲಯದಲ್ಲಿ ಆರ್‌ಬಿಐ, ಎಲ್‌ಐಸಿಗಳಲ್ಲಿ ಪ್ರತಿ ವಾರ ಐದು ದಿನಗಳ ಕೆಲಸ ಜಾರಿಗೆ ತರಲಾ ಗಿದೆ. ಕೇಂದ್ರ ಮತ್ತು ರಾಜ್ಯಸರ್ಕಾರ ಅವರ ಎಲ್ಲಾ ಕಚೇರಿಗಳೂ ಸೋಮವಾರ, ಶುಕ್ರವಾದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಆದರೆ ಸಾರ್ವಜನಿಕ ಸೇವೆಯಲ್ಲಿ ಕೆಲಸ ನಿರ್ವಹಿಸುವ ರಾಷ್ಟ್ರಿಕೃತ ಮತ್ತು ಖಾಸಗೀ ಬ್ಯಾಂಕ್ ನೌಕರರಿಗೆ ಈ ಸೌಲಭ್ಯ ನೀಡುತ್ತಿಲ್ಲ ಎಂದು ಹೇಳಿದರು.

ಬ್ಯಾಂಕ್‌ಗಳಲ್ಲಿ ಎರಡು ಮತ್ತು ನಾಲ್ಕನೇ ಶನಿವಾರಗಳು ರಜಾದಿನವಾಗಿವೆ. ಆದ್ದರಿಂದ ಸೋಮವಾರ ಮತ್ತು ಶುಕ್ರದವರೆಗೆ ಕೆಲಸದ ಸಮಯವನ್ನು ಹೆಚ್ಚಿಸಿ, ಉಳಿದ ಶನಿವಾರ ರಜಾ ದಿನಗಳಾಗಿ ಘೋಷಿಸಲಾಗು ವುದರಿಂದ ಬ್ಯಾಂಕಿಂಗ್ ಸೇವೆಗಳನ್ನು ಪ್ರವೇಶಿಸಲು ವಿವಿಧ ಪರ್ಯಾಯ ವಿತರಣಾ ಮಾರ್ಗಗಳು ಲಭ್ಯವಿ ರುವ ಕಾರಣ ಬ್ಯಾಂಕ್ ಗ್ರಾಹಕರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ಸರ್ಕಾರ ಕೂಡಲೇ ಬ್ಯಾಂಕ್ ನೌಕರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವಾರದಲ್ಲಿ ಐದು ದಿ ನ ಕೆಲಸ ನಿರ್ವಹಿಸಲು ಅನುಮೋದನೆ ನೀಡಬೇಕು. ಆ ನಿಟ್ಟಿನಲ್ಲಿ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ, ಸದಸ್ಯರಾದ ಕೆ.ಹೆಚ್.ಗಣೇಶ್, ಸಿ.ಎಂ .ಪ್ರದೀಪ್‌ಕುಮಾರ್, ಎಂ.ಟಿ.ಪ್ರಕಾಶ್, ಎನ್.ನಾಗರಾಜ್, ಚಂದನ್, ಅಧಿಕಾರಿಗಳ ಸಂಘದ ವಿ.ಗಂಗಾಧರ್, ನಿವೃತ್ತ ಬ್ಯಾಮಖ್ ನೌಕರ ಎಸ್.ಟಿ.ಹಾಲಪ್ಪ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

Protest demanding fulfillment of bank employees’ demands

Share

Leave a comment

Leave a Reply

Your email address will not be published. Required fields are marked *

Don't Miss

ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

ಚಿಕ್ಕಮಗಳೂರು:  ಸಂಗೊಳ್ಳಿ ರಾಯಣ್ಣ ನಾಡು ಅಪ್ರತಿಮೆ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ಕಪಿಮುಷ್ಠಿಯಿಂದ ನಲುಗುತ್ತಿದ್ಧ ಭಾರತೀಯರಿಗೆ ನ್ಯಾಯ ಒದಗಿಸಲು ಪ್ರಾಣವನ್ನೆ ಅರ್ಪಿಸಿದ ಧೀ ಮಂತ ಮಹಾಪುರುಷ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು....

ವಿಬಿ-ಜಿ ರಾಮ್‌ಜೀ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಕುತಂತ್ರ

ಚಿಕ್ಕಮಗಳೂರು:  ಕೇಂದ್ರ ಸರ್ಕಾರದ ಹೊಸ ಕಾಯ್ದೆ ನೆಲಕಚ್ಚಿಸಲು ಕಾಂಗ್ರೆಸ್ ಪಕ್ಷ ಹ ಲವಾರು ಕುತಂತ್ರ ನಡೆಸಿ ಅಪಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರದ ಸತ್ಯ ದರ್ಶನ ಮಾಡಿಸಲು ರಾಜ್ಯಾ ದ್ಯಂತ ಜನಜಾಗೃತಿ ನಡೆಸಿ...

Related Articles

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

ಚಿಕ್ಕಮಗಳೂರು :ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವಪ್ಪಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್...

ಸಾಮಾಜಿಕ ಪರಿವರ್ತನೆಗೆ ಮಾಚಿದೇವರ ಕೊಡುಗೆ ಅಪಾರ

ಚಿಕ್ಕಮಗಳೂರು: ಸಾಮಾಜಿಕ ಪರಿವರ್ತನೆ ಮತ್ತು ಸಾಹಿತ್ಯ ಪರಿವರ್ತನೆಗೆ ಮಡಿವಾಳ ಮಾಚಿದೇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ...

ಇತಿಹಾಸ ಸೃಷ್ಠಿಸಿದ ವ್ಯಕ್ತಿಗಳ ಜೀವನ ಚರಿತ್ರೆ ಓದಬೇಕು

ಚಿಕ್ಕಮಗಳೂರು: ನಾಡಪ್ರಭು ಕೆಂಪೇಗೌಡರು ತಮ್ಮ ಬದುಕನ್ನು ಓದಿಸಿಕೊಳ್ಳಲು ಯೋಗ್ಯವಾದ ರೀತಿಯಲ್ಲಿ ಬದುಕಿ ಹೋದವರು ಎಂದು ಆದಿಚುಂಚನಗಿರಿ...