Home namma chikmagalur chikamagalur ಗ್ರಾಮಠಾಣಾ ಜಾಗ ಒತ್ತುವರಿ ವಿರೋಧಿಸಿ ಪ್ರತಿಭಟನೆ
chikamagalurHomeLatest Newsnamma chikmagalur

ಗ್ರಾಮಠಾಣಾ ಜಾಗ ಒತ್ತುವರಿ ವಿರೋಧಿಸಿ ಪ್ರತಿಭಟನೆ

Share
Share

ಚಿಕ್ಕಮಗಳೂರು: ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಾಗರಹಳ್ಳಿ ಗ್ರಾಮದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಲುದಾರಿ ಜಾಗವನ್ನು ಸಿ.ವಿ ವಿಜೇಂದ್ರ ಅವರು ಒತ್ತವರಿ ಮಾಡಿಕೊಂಡಿದ್ದು, ಕೂಡಲೇ ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ರೈತ ಸಂಘದ ಮುಖಂಡರು ಸೋಮವಾರ ಜಿಪಂ ಎದುರು ಪ್ರತಿಭಟನೆ ನಡೆಸಿ ಜಿಪಂ ಉಪಕಾರ್ಯದರ್ಶಿ ಗೌರವ್ ಕುಮಾರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಸಿ.ಎಂ ಪ್ರೇಮ ಮತ್ತು ವಿಜೇಂದ್ರ ಎಂ.ಕೆ ಅವರ ಮನೆಯ ಮುಂಭಾಗದಲ್ಲಿ ಇದ್ದ ಕಾಲುದಾರಿ ಸೇರಿದಂತೆ ಏಳು ಕುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಂಪೌಡ್ ನಿರ್ಮಿಸಿರುವುದರಿಂದ ಅಲ್ಲಿಯೇ ೯ ಮನೆಗಳಲ್ಲಿ ವಾಸವಾಗಿರುವ ಜನರಿಗೆ ಓಡಾಡಲು ರಸ್ತೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಈ ಬಗ್ಗೆ ಸಂಬAದಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಅರ್ಜಿ ವಿಚಾರಣೆಯಲ್ಲೂ ಗ್ರಾಮ ಪಂಚಾಯಿತಿ ಜಾಗವೆಂದು ತಿಳಿದುಬಂದಿದೆ. ಆಲ್ದೂರು ಗ್ರಾಮ ಪಂಚಾಯಿತಿಗೆ ಮೇಲಧಿಕಾರಿಗಳು ಒತ್ತವರಿಯನ್ನು ತೆರುವುಗೊಳಿಸುವಂತೆ ನೋಟಿಸ್ ನೀಡಿದ್ದರೂ ಸಹ ಅಧಿಕಾರಿಗಳ ಆದೇಶವನ್ನು ಧಿಕ್ಕರಿಸಲಾಗಿದೆ ಎಂದು ಆರೋಪಿಸಿದರು.

ಮನೆಯಲ್ಲಿ ತುರ್ತು ಸಂದರ್ಭ ಸೇರಿದಂತೆ ಯಾವುದೇ ಸಮಾರಂಭ ಹಾಗೂ ಚಿಕಿತ್ಸೆಗಾಗಲಿ ಓಡಾಡಲು ತೊಂದರೆಯಾಗುತ್ತದೆ ಎಂದು ಕೇಳಿಕೊಂಡರೂ ಅಧಿಕಾರಿಗಳು ಹೇಮಂತ್ ಅವರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸದೇ ಇರುವುದು ಸಂದೇಹವನ್ನುAಟು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಜಿಲ್ಲಾ ಉಪಾಧ್ಯಕ್ಷ ಕುಮಾರ ಸ್ವಾಮಿ. ಗೌರವಾಧ್ಯಕ್ಷ ಎಂ.ಸಿ ಬಸವರಾಜ್, ಜಿಲ್ಲಾ ವಕ್ತಾರ ಶಿವಣ್ಣ, ಯುವ ಘಟಕ ಜಿಲ್ಲಾಧ್ಯಕ್ಷ ಯುವರಾಜ್, ಸಂಘಟನಾ ಕಾರ್ಯದರ್ಶಿ ಜೀವನ್, ಪ್ರಮುಖರಾದ ಹೇಮಂತ್ ಮತ್ತಿತರರಿದ್ದರು.

Protest against encroachment of village police station land

Share

Leave a comment

Leave a Reply

Your email address will not be published. Required fields are marked *

Don't Miss

ಸಮಾಜ ಪರಿವರ್ತನೆಗೆ ಶರಣ ಚಳುವಳಿಯೇ ಪರಿಹಾರ

ಚಿಕ್ಕಮಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ತನ್ನ ೪೦ ರ ಸಂಭ್ರಮದ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಿಗೆ ನಗರದ...

ಉದ್ಯೋಗ ಭರವಸೆ: ೨ ಲಕ್ಷ ರೂ ವಂಚನೆ

ಚಿಕ್ಕಮಗಳೂರು : ಉನ್ನತ ವಿದ್ಯಾಭ್ಯಾಸ ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಯುವಕನ ಆಸೆಯನ್ನೇ ಬಂಡವಾಳ ಮಾಡಿಕೊಂಡ ವಂಚಕನೊಬ್ಬ ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ನಡೆದಿದೆ. ಎಂ.ಎಸ್ಸಿ ಪದವೀಧರ...

Related Articles

ಶಾಲಾ ಮಕ್ಕಳ ಕರ್ನಾಟಕ ದರ್ಶನಕ್ಕೆ ಚಾಲನೆ

ಚಿಕ್ಕಮಗಳೂರು: ಪ್ರವಾಸೋದ್ಯಮ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ೧೩೩ ಮಕ್ಕಳಿಗೆ ಉಚಿತವಾಗಿ...

ಬೆಂಬಲ ಬೆಲೆಯಲ್ಲಿ ೪,೮೮೬ ರೂ.ಗೆ ಪ್ರತಿ ಕ್ವಿಂಟಾಲ್ ರಾಗಿ ಖರೀದಿ

ಚಿಕ್ಕಮಗಳೂರು: ರಾಗಿಯನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚು ದರ ನೀಡಿ ಬೆಂಬಲ ಬೆಲೆಗೆ ಖರೀದಿಸಿದಾಗ ರೈತರಿಗೆ ಆರ್ಥಿಕ...

ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ಚಿಕ್ಕಮಗಳೂರು, ಫೆ.೧೬: ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು....

ಕೆ.ಎಸ್.ಆರ್.ಟಿ.ಸಿಯ ದುಸ್ಥಿತಿ ಕೆಟ್ಟು-ಕೆಟ್ಟು ನಿಲ್ಲುತ್ತಿರುವ ಬಸ್ಸುಗಳು

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಅತ್ಯಂತ ದುಸ್ಥಿತಿಯಲ್ಲಿ ಇದೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು...