Home namma chikmagalur ಸೆ.22 ರಿಂದ ನಗರದಲ್ಲಿ ಪ್ರೊ ಸಾಕರ್‌ಲೀಗ್‌ ಫುಟ್‌ಬಾಲ್ ಪಂದ್ಯಾವಳಿ
namma chikmagalurchikamagalurHomeLatest News

ಸೆ.22 ರಿಂದ ನಗರದಲ್ಲಿ ಪ್ರೊ ಸಾಕರ್‌ಲೀಗ್‌ ಫುಟ್‌ಬಾಲ್ ಪಂದ್ಯಾವಳಿ

Share
Share

ಚಿಕ್ಕಮಗಳೂರು:  ಫುಟ್‌ಬಾಲ್ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಾಫಿಲ್ಯಾಂಡ್ ಎಫ್‌ಸಿ ಸೆ.೨೨ ರಿಂದ ಅ.೫ ರವರೆಗೆ ಪ್ರೊ ಸಾಕರ್‌ಲೀಗ್‌ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಲಾಯೆಸ್ಟೆನ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ ಫುಟ್‌ಬಾಲ್ ಪ್ರತಿಭೆಗಳನ್ನು ಬೆಳೆಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶದಿಂದ ನಡೆಸುತ್ತಿರುವ ಫುಟ್‌ಬಾಲ್ ಪ್ರಾಂಚೈಸಿ ಪಂದ್ಯಾವಳಿ ಇದಾಗಿದೆ. ಸೀನಿಯರ್ ಜತೆಗೆ ಜ್ಯೂನಿಯರ್ ಪಂದ್ಯಾವಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸೆ.೨೦ ಮತ್ತು ೨೧, ಸೆ.೨೭ ಮತ್ತು ೨೮ ಹಾಗೂ ಅ.೪ ಮತ್ತು ೫ ರಂದು ಮಧ್ಯಾಹ್ನ ೨ ರಿಂದ ರಾತ್ರಿ ೧೦ ರವರೆಗೆ ನಗರದ ಉಂಡೆದಾಸರಹಳ್ಳಿಯಲ್ಲಿರುವ ಟರ್ಫ್‌ಕ್ಲಬ್‌ನಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು ೮ ಪ್ರಾಂಚೈಸಿಗಳು ಪಂದ್ಯದಲ್ಲಿ ಭಾಗವಹಿಸಲಿದ್ದು, ಪ್ರತಿ ಪ್ರಾಂಚೈಸಿ ರೌಂಡ್‌ರಾಬಿನ್ ಸ್ವರೂಪದಲ್ಲಿ ೭ ಪಂದ್ಯಗಳನ್ನು ಆಡುತ್ತವೆ. ಅಗ್ರ ತಂಡಗಳು ಫೈನಲ್ ತಲುಪುತ್ತವೆ. ಜ್ಯೂನಿಯರ್ ಪಂದ್ಯಗಳು ಸೀನಿಯರ್ ಪಂದ್ಯಗಳ ಸಮನಾಂತರವಾಗಿ ನಡೆಯುತ್ತವೆ ಎಂದರು.

ಜಿಲ್ಲಾಮಟ್ಟದ ಫುಟ್‌ಬಾಲ್ ಪಂದ್ಯಾವಳಿಯು ಚಿಕ್ಕಮಗಳೂರಿನ ಫುಟ್‌ಬಾಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಪಿಎಸ್‌ಎಲ್ ಸೀಸನ್ ೩ ಹೊಂದಿದೆ. ಕೆಲಚಂದ್ರ ಕಾಫಿ ಸಂಸ್ಥೆ ಪ್ರಾಯೋಜಕತ್ವ ನೀಡಿದೆ ಎಂದರು.

ಪ್ರತಿ ಪಂದ್ಯಕ್ಕೂ ಮ್ಯಾನ್ ಆಫ್‌ದಿ ಮ್ಯಾಚ್ ಪ್ರಶಸ್ತಿ, ಲೀಗ್ ಚಾಂಪಿಯನ್‌ಗಾಗಿ ಟ್ರೋಫಿ, ಆಟಗಾರರು ಮತ್ತು ತಂಡಗಳನ್ನು ಪ್ರೇರೇಪಿಸಲು ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಫಿಲ್ಯಾಂಡ್ ಎಫ್‌ಸಿ ಮತ್ತು ಲೀಗ್ ಕಾರ್ಯದರ್ಶಿ ಲೆಕ್ಸಿ, ವಿಷಯ ಮುಖ್ಯಸ್ಥ ಅದ್ವಿತ್, ಆಟಗಾರ ಬಸವರಾಜ್, ಸಿಡಿಎಫ್‌ಎ ಅಧ್ಯಕ್ಷ ವಿಕಾಸ್ ಮತ್ತಿತರರಿದ್ದರು.

Pro Soccer League football tournament in the city from September 22

Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸ್ಥಾಪನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ...

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ...

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...