Home namma chikmagalur chikamagalur ಶೃಂಗೇರಿ ಕ್ಷೇತ್ರದಲ್ಲಿ “ಆನೆಗಳ” ಪೊಲಿ”ಟ್ರಿಕ್ಸ್”
chikamagalurHomeLatest Newsnamma chikmagalur

ಶೃಂಗೇರಿ ಕ್ಷೇತ್ರದಲ್ಲಿ “ಆನೆಗಳ” ಪೊಲಿ”ಟ್ರಿಕ್ಸ್”

Share
Share

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ಕಾದಾಟ,ಕಿತ್ತಾಟ ನಡೆಯುತ್ತಿದೆ ಎಂದು ಭಾವಿಸುವುದು ತಪ್ಪು. ಆನೆಗಳ ನೆಪದಲ್ಲಿ ಮೃತದೇಹ ಇಟ್ಟುಕೊಂಡು ಬಿಜೆಪಿಯ ಜೀವರಾಜ್ V/S ಕಾಂಗ್ರೆಸ್ ನ ರಾಜೇಗೌಡರ ಮಧ್ಯೆ ಆಗಾಗ ಬೀದಿ ಕಿತ್ತಾಟ ನಡೆದು ಸುದ್ದಿಯಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ನ್ಯೂಸ್ ಕಿಂಗ್ ಈ ಹಿಂದೆ ಶೃಂಗೇರಿ ಕ್ಷೇತ್ರ ಬಯಲು ಸೀಮೆಯ ರಾಜಕಾರಣ ಮೀರಿ ಕಿತ್ತಾಟ ನಡೆಯುತ್ತಿರುವುದನ್ನು ವಿವರಿಸಿತ್ತು. ‌ನಾಲ್ಕು ದಿನಗಳಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ಉತ್ತರ ಕರ್ನಾಟಕದ ಇಬ್ಬರು ಒಂದೇ ಸ್ಥಳದಲ್ಲಿ ಆನೆ ತುಳಿತಕ್ಕೆ ಸಿಕ್ಕಿ ಸಾವನ್ನು ಅಪ್ಪಿರುವುದು ಮಾಜಿ ಶಾಸಕ ಜೀವರಾಜ್ ರಾಜಕೀಯವಾಗಿ ಬಳಸಿಕೊಂಡರು ಎನ್ನುತ್ತಲೇ ಹಾಲಿ ಶಾಸಕ ರಾಜೇಗೌಡರ ತಾತ್ಸರ ಮನೋಭಾವ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜೇಗೌಡರಿಗಿಂತ ಜೀವರಾಜ್ ಹೆಚ್ಚು ಕ್ರಿಮಿನಲ್ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದಕ್ಕೆ ಮೃತದೇಹವನ್ನು ಎತ್ತಲು ಬಿಡದಿರುವುದು ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದಂತೆ ಆಯಿತು ಎನ್ನುವವರು ಇದ್ದಾರೆ.ಸೋಲಿನಿಂದ ಎರಡು ಬಾರಿ ಮನೆ ಸೇರಿದರು ಆನೆಗಳು ರಾಜಕೀಯ ಕಿಚ್ಚು ಹೆಚ್ಚುತ್ತಿರುವುದರಿಂದ ಶೃಂಗೇರಿ ಕ್ಷೇತ್ರದ ಬಗ್ಗೆ ಇದ್ದ ಉತ್ತಮ ಅಭಿಪ್ರಾಯ ಹಲವು ಸಂಶಯಗಳಿಂದ ನೋಡುವಂತಾಗಿದೆ.ಇದಕ್ಕೆ ಶೃಂಗೇರಿ ಬಂದ್ ಠುಸ್ ಆಗಿದ್ದು ಮತ್ತು ಕ್ಷೇತ್ರದ ಜನರಿಗಿಂತ ಹೊರಗಿನ ಮುಖಗಳು ಹೆಚ್ಚು ಠಳಾಯಿಸಿದ್ದು ಮಾತ್ರ ಸತ್ಯ ಎಂದು ಹೇಳುವವರು ಇದ್ದಾರೆ.

ಶಾಸಕ ರಾಜೇಗೌಡರು ಕ್ರಿಮಿನಲ್ ರಾಜಕೀಯ ಬಳಸಿದ್ದರೆ .ಹಲವರು ಜೈಲಿನಲ್ಲಿ ಇರಬೇಕಿತ್ತು ಸ್ಥಳದಲ್ಲಿ ಮರೆತು ಹೋಗುವ ಸ್ವಭಾವದಿಂದಾಗಿ ಜೀವರಾಜ್ ಸಣ್ಣ,ಸಣ್ಣ,ವಿಷಯಕ್ಕೆ ಕತ್ತಿ ಮಸೆಯುವುದನ್ನು ರಾಜಕೀಯ ಎಂದು ತಿಳಿದಂತೆ ಕಾಣುತ್ತಿರುವುದು ನೋಡಿದರೆ ಶಾಶ್ವತ ರಾಜಕೀಯ ನಿರಾಸೆ ಖಚಿತ. ರಾಜೇಗೌಡರು ಮರೆವು ಮತ್ತು ‌ಹೆಂಗರಳಿನ ರಾಜಕೀಯ ಬಿಟ್ಟರೆ ಶೃಂಗೇರಿ ಕ್ರಿಮಿನಲ್ ಪೊಲಿಟಿಕ್ಸ್ ಮರೆಯಾಗುತ್ತದೆ ಅದಕ್ಕೆ ಇನ್ನೊಂದು ಸುತ್ತಿನ ವಿಧಾನ ಸಭೆ ಚುನಾವಣೆ ನಡೆಯಬೇಕು ಮತದಾರರ ನಿರ್ಧಾರ ಕೆಲವರನ್ನು ಶಾಶ್ವತವಾಗಿ ಮನೆ ಸೇರುವಂತೆ ಮಾಡುವುದು ಖಚಿತ.

ನಾಶವಾಗುತ್ತಿರುವ ಕಾಡು ಸಂರಕ್ಷಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನವರು ಮುಂದಾಗಬೇಕು ಆದರೆ ಅವರವರ ಹಿಂಬಾಲಕರಿಗೆ ಕಾಡು ಕಡಿಸಿ ವ್ಯವಹಾರ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಮತ್ತು ಯಾರು ಸತ್ತರೇನಂತೆ ನಮ್ಮ ತೋಟದ ಕೆಲಸ ಮುಖ್ಯ ಎನ್ನುವ ಪ್ಲಾಂಟೇಷನ್ ವರ ಉದಾಸೀನ ಮನೋಭಾವನೆ ಅಮಾಯಕ ಕೂಲಿ ಕಾರ್ಮಿಕರ ಸಾವಿಗೆ ಕಾರಣ ಈ ಬಗ್ಗೆ ಲೂಟಿ ಮಾಡುವುದನ್ನು ಕರಗತ ಮಾಡಿಕೊಂಡಿರುವ ಅರಣ್ಯ ಇಲಾಖೆಯ ಖದೀಮರ ಬಗ್ಗೆ ಎಚ್ಚರಿಕೆ ವಹಿಸಬೇಕು.

ಕಾಡು ನಾಶ ಒಂದು ಕಡೆಯಾದರೆ ಪ್ರಾಣಿಗಳು ಸಹಜವಾಗಿ ನಾಡಿಗೆ ನುಗ್ಗುತ್ತವೆ ಆದರೆ ಬಡವರು ಮಾತ್ರ ಬಲಿಯಾಗುತ್ತಿರುವುದು ಯಕ್ಷ ಪ್ರಶ್ನೆಯಾಗಿದೆ ಎನ್ನುವುದಕ್ಕಿಂತ ರಾಜಕಾರಣಿಗಳು ಅಧಿಕಾರಿಗಳು ಹೇಗೆ ಶ್ರೀಮಂತ ರಿಗೆ ಮಣಿಯಾಕಿ ಬಡವರನ್ನು ಶೋಷಣೆ ಮಾಡುವುದನ್ನು ಕಾಡಾನೆಗಳು ಕಲಿತಿರುವುದು ನೋಡಿದರೆ ಯಾವ ಮಠದವರು ತರಭೇತಿ ನೀಡಿರಬಹುದು ಎಂಬ ತನಿಖೆ ನಡೆಸುವುದು ಒಳ್ಳೆಯದು.

Polly “tricks” of “elephants” in the Sringeri field

Share

Leave a comment

Leave a Reply

Your email address will not be published. Required fields are marked *

Don't Miss

ವಿಮಾ ಪರಿಹಾರ ಬಡ್ಡಿ ಸಹಿತ ನೀಡಲು ಆದೇಶ

ಚಿಕ್ಕಮಗಳೂರು: ಶಿಕ್ಷಕರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದ ಸರ್ಕಾರಿ ಶಿಕ್ಷಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗೆ ವಿಮಾ ಹಣವನ್ನು ಭರಿಸದ ವಿಮಾ ಕಂಪನಿಯ ವಿರುದ್ಧ ತೀರ್ಪು ನೀಡಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ...

ನನ್ನ ಆಟ ನನ್ನದು ಎನ್ನುತ್ತಲೇ ಶಾಸಕ ತಮ್ಮಯ್ಯ ವಿದೇಶಿ ಟೂರ್

ಚಿಕ್ಕಮಗಳೂರು: ಶಾಸಕ ಹೆಚ್.ಡಿ.ತಮ್ಮಯ್ಯ ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ.ಅದರಲ್ಲೂ ಅಲ್ಲಿನ ರೈತರ ಬದುಕು,ವ್ಯವಸಾಯದ ವಿಧಾನ ತಿಳಿದುಕೊಂಡು ಬಂದು ಕ್ಷೇತ್ರದ ರೈತರ ಬದುಕನ್ನು ಕಟ್ಟಿಕೊಡುವುದು ಖಚಿತ. ಇಂತಹ ಒಳ್ಳೆಯ ಕೆಲಸಕ್ಕೆ ಬಿಜೆಪಿಯವರು ಅಪಸ್ವರ ತೆಗೆಯುವುದು...

Related Articles

ಲೋಕಾಯುಕ್ತ ಬಲೆಗೆ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ

ಕಡೂರು : ಸೈಟ್ ಗೆ ಎನ್.ಒ.ಸಿ (NOC) ನೀಡಲು ಲಂಚದ ಬೇಡಿಕೆಯಿಟ್ಟಿದ್ದ ಕಡೂರು ತಾಲೂಕಿನ ತಂಗಲಿ...

ಕಳಪೆ ಕಾಮಗಾರಿ ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ

ಚಿಕ್ಕಮಗಳೂರು: ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಕಾಲುವೆಯ (ಚಾನಲ್) ಕಳಪೆ ಕಾಮಗಾರಿಯನ್ನು ತಡೆಗಟ್ಟುವಂತೆ ಕರ್ನಾಟಕ...

ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಶ್ರಮಿಸಬೇಕು

ಚಿಕ್ಕಮಗಳೂರು:  ಪ್ರಸ್ತುತ ಸಾಕಷ್ಟು ತೊಂದರೆ, ಸವಾಲುಗಳ ಮಧ್ಯೆ ಕೈಗಾರಿಕೆಗಳನ್ನು ನಡೆಸಬೇಕಾಗಿದ್ದು, ಎಂಎಸ್‌ಎಂಇಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು,...

ಜನತೆಗೆ ಸತ್ಯದ ಅರಿವು ಮೂಡಿಸಲು ಕಾರ್ಯಾಗಾರ

ಚಿಕ್ಕಮಗಳೂರು: ಭಾರತ ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ, ಬಿಜೆಪಿ ನೇತೃತ್ವದ ಕೇಂ ದ್ರ ಸರ್ಕಾರ ವೈಫಲ್ಯತೆ...