Home namma chikmagalur chikamagalur ಎ.ಆರ್. ಫರ್ನಿಚರ್ ಅಂಗಡಿ ಅಗ್ನಿ ಅವಘಡ : ತನಿಖೆಯಲ್ಲಿ ವ್ಯವಸ್ಥಿತ ಕೃತ್ಯ ಸಾಬೀತು
chikamagalurCrime NewsLatest Newsnamma chikmagalur

ಎ.ಆರ್. ಫರ್ನಿಚರ್ ಅಂಗಡಿ ಅಗ್ನಿ ಅವಘಡ : ತನಿಖೆಯಲ್ಲಿ ವ್ಯವಸ್ಥಿತ ಕೃತ್ಯ ಸಾಬೀತು

Share
Share

ಚಿಕ್ಕಮಗಳೂರು: ನಗರದ ಐ.ಜಿ. ರಸ್ತೆಯಲ್ಲಿ ನಡೆದ ಎ.ಆರ್. ಫರ್ನಿಚರ್ ಅಂಗಡಿ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅನಿರೀಕ್ಷಿತ ಸತ್ಯವನ್ನ ಹೊರಹಾಕಿದ್ದಾರೆ.

ಈ ಬೆಂಕಿ ಆಕಸ್ಮಿಕವಾಗಿ ಸಂಭವಿಸಿದ್ದಲ್ಲ, ಬದಲಿಗೆ ವ್ಯಾಪಾರ ದ್ವೇಷದ ಹಿನ್ನೆಲೆಯಲ್ಲಿ ನಡೆದ ವ್ಯವಸ್ಥಿತ ಕೃತ್ಯ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಕಳೆದ ಭಾನುವಾರ ನಡೆದ ಈ ದುರ್ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿಯಾಗಿದ್ದವು.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಎ.ಆರ್. ಫರ್ನಿಚರ್ ಪಕ್ಕದಲ್ಲೇ ಇರುವ ಮತ್ತೊಂದು ಫರ್ನಿಚರ್ ಅಂಗಡಿ ಮಾಲೀಕ ಸಂಚು ರೂಪಿಸಿರುವುದು ಕಂಡುಬಂದಿದೆ. ತನ್ನ ಅಂಗಡಿಗಿಂತ ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂಬ ಅಸೂಯೆಯಿಂದ ಈ ಕೃತ್ಯ ಎಸಗಿದ್ದಾನೆ.

ಇದಕ್ಕಾಗಿ ಇಬ್ಬರಿಗೆ 20 ಸಾವಿರ ರೂಪಾಯಿ ಸುಪಾರಿ ನೀಡಿ ಬೆಂಕಿ ಹಚ್ಚಿಸಿದ್ದಾನೆ. ಪ್ರಸ್ತುತ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಕೃತ್ಯದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Police investigation proves systematic crime

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರ ಅಭಯಾರಣ್ಯದ ಬಳಿ ಕಾನೂನು ಬಾಹಿರ ರೆಸಾರ್ಟ್ ನಿರ್ಮಾಣ ?

ಚಿಕ್ಕಮಗಳೂರು: “ಪ್ರಾಣಿಗಳ ಮೇಲೆ ದಯೆ” ಇರಲಿ”ಕಾಡು ಮಾತ್ರ ನಾಶ”ವಾಗಲಿ”ಹಣ ಮಾತ್ರ ಝಣ,ಝಣ “ನಮಗೆ ಬರಲಿ ಎಂಬುದು ಅರಣ್ಯ ಇಲಾಖೆಯ ಘೋಷ ವಾಕ್ಯವಾದರೆ ಒಳ್ಳೆಯದು ಎಂಬುದಕ್ಕೆ ಇಂಬು ಕೊಡುತ್ತದೆ ಆಕ್ರಮವಾಗಿ ರೆಸಾರ್ಟ್ ನಿರ್ಮಾಣವಾಗುತ್ತಿರುವುದು...

ರಾಷ್ಟ್ರ ಮೊದಲೆಂಬ ಧ್ಯೇಯದೊಂದಿಗೆ ಭಾಜಪ ಕೆಲಸ

ಚಿಕ್ಕಮಗಳೂರು: ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಸ್ಥಾಪಿತಗೊಂಡಿರುವ ಏಕೈಕ ರಾಜಕೀಯ ಪಕ್ಷ ಭಾಜಪ. ರಾಷ್ಟ್ರೀಯ ಹಿತಚಿಂತನೆ ಹಾಗೂ ದೇಶಸೇವೆಯೇ, ಜನಾರ್ಧನ ಸೇವೆ ಎಂಬ ನಂಬಿಕೆ ಮತ್ತು ವಿಶ್ವಾಸದಡಿ ಸಾಗುತ್ತಿದೆ ಎಂದು ವಿಧಾನ...

Related Articles

ಮೂಡಿಗೆರೆ ಚುನಾವಣಾ ಶಾಖೆಯಲ್ಲಿ ಸಿಬ್ಬಂದಿ ಕೊರತೆ

ಮೂಡಿಗೆರೆ: ಜಿಲ್ಲೆಯ ಮೂಡಿಗೆರೆ ಸೇರಿದಂತೆ ಹಲವು ತಾಲೂಕು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚುನಾವಣಾ ಶಾಖೆಗಳು ಸಿಬ್ಬಂದಿಗಳ...

ಕಂದಾಯ ವಸೂಲಾತಿ ಸಾಧನೆಯಲ್ಲಿ ಜಿಲ್ಲೆಗೆ ರಾಜ್ಯದಲ್ಲಿ 3ನೇ ಸ್ಥಾನ

ಚಿಕ್ಕಮಗಳೂರು: ೨೦೨೫-೨೬ನೇ ಆರ್ಥಿಕ ವರ್ಷದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಬೇಡಿಕೆಗೆ ಎದುರಾಗಿ ಜಿಲ್ಲೆಯ ಎಲ್ಲ್ಲ ೯...

ಶಾಲೆಗಳ ವಿಲೀನ ವಿರೋಧಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ಪತ್ರಿಭಟನೆ

ಚಿಕ್ಕಮಗಳೂರು: ತಾಲೂಕಿನ ಬೊಂಬೈಲು ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಬೇರೊಂದು ಶಾಲೆಗೆ ವಿಲೀನಗೊಳಿಸದಿರಲು ಒತ್ತಾಯಿಸಿ ಎಐಡಿಎಸ್‌ಓ ನೇತೃತ್ವದಲ್ಲಿ...

ಚಿಕ್ಕಮಗಳೂರು ನಗರದಲ್ಲಿ ಆಟೋ ಎಲ್‌ಪಿಜಿ ಗ್ಯಾಸ್ ಹಾಹಾಕಾರ

ಚಿಕ್ಕಮಗಳೂರು: ನಗರದಲ್ಲಿ ಕಳೆದ ಆರು ದಿನಗಳಿಂದ ಎಲ್‌ಪಿಜಿ ಗ್ಯಾಸ್ ಲಭ್ಯವಾಗದ ಕಾರಣ ಆಟೋ ಚಾಲಕರ ಜೀವನ...