ಚಿಕ್ಕಮಗಳೂರು: ಕೇಂದ್ರ ಸರ್ಕಾರದ CEIR (Central Equipment Identity Register) ಪೋರ್ಟಲ್ ಬಳಸಿ ಪತ್ತೆ ಮಾಡಲಾದ ಮೊಬೈಲ್ ಫೋನ್ಗಳನ್ನು ಚಿಕ್ಕಮಗಳೂರು ನಗರ ಮತ್ತು ಲಕ್ಕವಳ್ಳಿ ಪೊಲೀಸ್ ಠಾಣೆಗಳಲ್ಲಿ ಆಯಾ ವಾರಸುದಾರರಿಗೆ ಅಧಿಕೃತವಾಗಿ ಹಿಂದಿರುಗಿಸಲಾಗಿದೆ.
ಮೊಬೈಲ್ ಕಳೆದುಕೊಂಡಿದ್ದ ಸಾರ್ವಜನಿಕರಿಗೆ ಈ ತಂತ್ರಜ್ಞಾನವು ದೊಡ್ಡ ಮಟ್ಟದ ನೆರವು ನೀಡುತ್ತಿದ್ದು, ಪೊಲೀಸರು ಯಶಸ್ವಿಯಾಗಿ ಮೊಬೈಲ್ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದಾರೆ.
ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡ ಸಂದರ್ಭದಲ್ಲಿ ತಕ್ಷಣವೇ ಎಚ್ಚೆತ್ತುಕೊಂಡು ಮೊಬೈಲ್ ದಾಖಲಾತಿಗಳು, ವೈಯಕ್ತಿಕ ಗುರುತಿನ ಚೀಟಿ ಮತ್ತು ಕೆ.ಎಸ್.ಪಿ ಮೊಬೈಲ್ ಆ್ಯಪ್ ಮೂಲಕ ಪಡೆದ ದೂರಿನ ಪ್ರತಿಯೊಂದಿಗೆ CEIR ವೆಬ್ ಪೋರ್ಟಲ್ನಲ್ಲಿ (https://www.ceir.gov.in) ಕಡ್ಡಾಯವಾಗಿ ವರದಿ ದಾಖಲಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಈ ಪೋರ್ಟಲ್ನಲ್ಲಿ ದೂರು ನೀಡುವುದರಿಂದ ಕಳೆದುಹೋದ ಮೊಬೈಲ್ಗಳನ್ನು ಬ್ಲಾಕ್ ಮಾಡಲು ಮತ್ತು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Police find lost mobile phone – hand over phone to heirs
Leave a comment