Home ಲೋಕಾಯುಕ್ತ ಬಲೆಗೆ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ
HomeKadurLatest Newsnamma chikmagalur

ಲೋಕಾಯುಕ್ತ ಬಲೆಗೆ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ

Share
Share

ಕಡೂರು : ಸೈಟ್ ಗೆ ಎನ್.ಒ.ಸಿ (NOC) ನೀಡಲು ಲಂಚದ ಬೇಡಿಕೆಯಿಟ್ಟಿದ್ದ ಕಡೂರು ತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಿಮ್ಮಶೆಟ್ಟಿ ಎಂಬುವವರಿಗೆ ಸೇರಿದ ನಿವೇಶನಕ್ಕೆ ಸಂಬಂಧಿಸಿದಂತೆ ಎನ್.ಒ.ಸಿ ನೀಡಲು ಮಹಿಳಾ ಪಿಡಿಒ ನಂಜುಡಮ್ಮ 3,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.ಲಂಚ ನೀಡಲು ಇಚ್ಛಿಸದ ವ್ಯಕ್ತಿಯು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ರೆಡ್ ಹ್ಯಾಂಡ್ ಕಾರ್ಯಾಚರಣೆ: ದೂರಿನ ಅನ್ವಯ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಅವರ ನೇತೃತ್ವದ ತಂಡವು ತಂಗಲಿ ಗ್ರಾಮ ಪಂಚಾಯಿತಿ ಕಚೇರಿಯ ಮೇಲೆ ದಾಳಿ ನಡೆಸಿತು. ಈ ವೇಳೆ ದೂರುದಾರರಿಂದ 3,000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಪಿಡಿಒ ನಂಜುಂಡರಮ್ಮರನ್ನು ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಪೊಲೀಸರು ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ಆರೋಪಿ ಪಿಡಿಒ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

PDO of Thangal Gram Panchayat gets caught in Lokayukta trap

Share

Leave a comment

Leave a Reply

Your email address will not be published. Required fields are marked *

Don't Miss

ವಿಮಾ ಪರಿಹಾರ ಬಡ್ಡಿ ಸಹಿತ ನೀಡಲು ಆದೇಶ

ಚಿಕ್ಕಮಗಳೂರು: ಶಿಕ್ಷಕರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದ ಸರ್ಕಾರಿ ಶಿಕ್ಷಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗೆ ವಿಮಾ ಹಣವನ್ನು ಭರಿಸದ ವಿಮಾ ಕಂಪನಿಯ ವಿರುದ್ಧ ತೀರ್ಪು ನೀಡಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ...

ನನ್ನ ಆಟ ನನ್ನದು ಎನ್ನುತ್ತಲೇ ಶಾಸಕ ತಮ್ಮಯ್ಯ ವಿದೇಶಿ ಟೂರ್

ಚಿಕ್ಕಮಗಳೂರು: ಶಾಸಕ ಹೆಚ್.ಡಿ.ತಮ್ಮಯ್ಯ ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ.ಅದರಲ್ಲೂ ಅಲ್ಲಿನ ರೈತರ ಬದುಕು,ವ್ಯವಸಾಯದ ವಿಧಾನ ತಿಳಿದುಕೊಂಡು ಬಂದು ಕ್ಷೇತ್ರದ ರೈತರ ಬದುಕನ್ನು ಕಟ್ಟಿಕೊಡುವುದು ಖಚಿತ. ಇಂತಹ ಒಳ್ಳೆಯ ಕೆಲಸಕ್ಕೆ ಬಿಜೆಪಿಯವರು ಅಪಸ್ವರ ತೆಗೆಯುವುದು...

Related Articles

ಶೃಂಗೇರಿ ಕ್ಷೇತ್ರದಲ್ಲಿ “ಆನೆಗಳ” ಪೊಲಿ”ಟ್ರಿಕ್ಸ್”

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ಕಾದಾಟ,ಕಿತ್ತಾಟ ನಡೆಯುತ್ತಿದೆ...

ಕಳಪೆ ಕಾಮಗಾರಿ ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ

ಚಿಕ್ಕಮಗಳೂರು: ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಕಾಲುವೆಯ (ಚಾನಲ್) ಕಳಪೆ ಕಾಮಗಾರಿಯನ್ನು ತಡೆಗಟ್ಟುವಂತೆ ಕರ್ನಾಟಕ...

ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಶ್ರಮಿಸಬೇಕು

ಚಿಕ್ಕಮಗಳೂರು:  ಪ್ರಸ್ತುತ ಸಾಕಷ್ಟು ತೊಂದರೆ, ಸವಾಲುಗಳ ಮಧ್ಯೆ ಕೈಗಾರಿಕೆಗಳನ್ನು ನಡೆಸಬೇಕಾಗಿದ್ದು, ಎಂಎಸ್‌ಎಂಇಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು,...

ಜನತೆಗೆ ಸತ್ಯದ ಅರಿವು ಮೂಡಿಸಲು ಕಾರ್ಯಾಗಾರ

ಚಿಕ್ಕಮಗಳೂರು: ಭಾರತ ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ, ಬಿಜೆಪಿ ನೇತೃತ್ವದ ಕೇಂ ದ್ರ ಸರ್ಕಾರ ವೈಫಲ್ಯತೆ...