ಚಿಕ್ಕಮಗಳೂರು : ಕರುನಾಡಿನ ಜೀವನದಿಗಳಾದ ತುಂಗಾ-ಭದ್ರಾ ಉಳಿಸಿ ಅಭಿಯಾನ ಆರಂಭಗೊಂಡಿದೆ. ಶೃಂಗೇರಿಯಿಂದ ಆರಂಭಗೊಂಡು 400 ಕಿ.ಮೀ. ಈ ಅಭಿಯಾನ ಸಾಗಲಿದೆ. ಶೃಂಗೇರಿ ತಾಲೂಕಿನಿಂದ ಕಿಷ್ಕಿಂದೆವರೆಗೂ ನದಿ ಉಳಿಸಿ ಅಭಿಯಾನ ನಡೆಯಲಿದೆ. ಅಭಿಯಾನಕ್ಕೆಶೃಂಗೇರಿ ಶ್ರೀಮಠದ ಹಿರಿಯ ಶ್ರೀಗಳಾದ ಭಾರತೀ ತೀರ್ಥ ಶ್ರೀಗಳಿಂದ ಚಾಲನೆ ದೊರೆತಿದ್ದು ಶೃಂಗೇರಿ ತಾಲೂಕಿನ ಗಂಗಡಿ ಕಲ್ಲುವಿನಲ್ಲಿ ಹುಟ್ಟುವ ತುಂಗಾ-ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಸಂಗಮವಾಗಿ ನಾಡಿನ ಜೀವನದಿಗಳಾಗಿವೆ.
ಕೋಟಿಗೂ ಹೆಚ್ಚು ಜನರ ಜೀವನಾಡಿ ಯಾಗಿರುವ ತುಂಗಾಭದ್ರ ನದಿಗಳು ಇತ್ತೀಚಿನ ವರ್ಷಗಳಲ್ಲಿ ಕಲ್ಮಶ ಗೊಂಡಿವೆ ಎಂದು ಹೇಳಲಾಗುತ್ತಿದೆ. ಅಲ್ಲದೇ ತುಂಗಾಭದ್ರಾ ನೀರಿನಲ್ಲಿ ಯತೇಚ್ಛವಾಗಿ ಅಲ್ಯೂಮಿನಿಯಂ ಅಂಶ ಕೂಡಾ ಪತ್ತೆಯಾಗಿತ್ತು ಆದ್ದರಿಂದ ಕುಡಿಯಲು ಯೋಗ್ಯ ಅಲ್ಲದ ಮಟ್ಟಕ್ಕೆ ಬಂದಿರುವ ನದಿ ನೀರು ನಗರ-ಪಟ್ಟಣಗಳ ತ್ಯಾಜ್ಯ ನೀರಿನಿಂದ ಕಲುಷಿತಗೊಳ್ಳುತ್ತಿರೋ ಹಂತ ತಲುಪಿದೆ.
ಇದೇ ಕಾರಣಕ್ಕೆ ನದಿಗಳನ್ನ ಉಳಿಸುವಂತೆ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದಿಂದ ಈ ಆಂದೋಲನ ಆರಂಭಿಸಿದೆ. ಇಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಮೊದಲ ಬಾರಿಗೆ ನದಿಗಳ ಉಳಿವಿಗೆ ದೊಡ್ಡ ಹೋರಾಟ ಶುರುವಾಗಿದೆ
Leave a comment