ಚಿಕ್ಕಮಗಳೂರು: ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗೆ ಈ ಬಾರಿ ಬಂಪರ್ ಬೆಲೆ ಬಂದಿದೆ, ಇದರಿಂದಾಗಿ ರೈತರ ಕಣ್ಣಲ್ಲಿ ಪನ್ನೀರು ಬರಬೇಕಿತ್ತು ಆದರೆ ಬರುತ್ತಿರುವುದು ಕಣ್ಣೀರು.
ಈರುಳ್ಳಿ ಬೆಳೆಗೆ ಹವಮಾನ ಬಹಳ ಮುಖ್ಯ ಮತ್ತು ಶ್ರಮ ಕೂಡ ಅಷ್ಟೇ ಮುಖ್ಯ. ರೈತರು ಇದಕ್ಕಾಗಿ ತುಂಬಾ ಶ್ರಮ ಹಾಕುತ್ತಾರೆ ಆದರೆ ಪ್ರಕೃತಿ ಕೈ ಕೊಟ್ಟರೆ ಶ್ರಮವೆಲ್ಲಾ ಹೊಳೆಯಲ್ಲಿ ಹುಣಸೇಹಣ್ಣು ಕದರಿದಂತೆ ಆಗುತ್ತದೆ. ಇದೇ ಪರಿಸ್ಥಿತಿ ಜಿಲ್ಲೆಯ ರೈತರಿಗೆ ಒದಗಿದೆ.
ಇದನ್ನು ಓದಿ: ಭಾರಿ ಮಳೆ: ಚಿಕ್ಕಮಗಳೂರಿನಲ್ಲಿ ಸೇತುವೆಗಳು ಜಲಾವೃತ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಂಪರ್ ಕ್ರಾಪ್ ಆಗಿ ರೈತರ ಕೈಗೆ ಸಿಗಬೇಕಿದ್ದ ಈರುಳ್ಳಿ ಇದೀಗ ಹವಮಾನ ವೈಪರೀತ್ಯಗಳಿಂದಾಗಿ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ ಎಂದು ಬೆಳೆಗಾರರು ಕೊರಗುತ್ತಿದ್ದಾರೆ. ಒಳ್ಳೆಯ ಬೆಲೆಯಿದೆ ಅದರೆ ಅಕಾಲಿಕ ಮಳೆಯಿಂದಾಗಿ ಬೆಳೆಗಾರರಿಗೆ ಭಾರೀ ನಷ್ಟವಾಗಿದೆ. ಅಕಾಲಿಕ ಮಳೆಯಿಂದಾಗಿ ನೂರಕ್ಕೆ ಮೂವತ್ತರಿಂದ ನಲವತ್ತುರಷ್ಟು ಪ್ರತಿಶಃತ ಬೆಳೆ ಸಿಕ್ಕಿದ್ದು ಅರವತ್ತರಷ್ಟು ನಷ್ಟವಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಯ ಕೆಲ ಭಾಗದಲ್ಲಿ ಅಜ್ಜಂಪುರ ಹೋಬಳಿಯ ಕೆಲ ಭಾಗದಲ್ಲಿ ಅಂದರೆ ಸರಿಸುಮಾರಾಗಿ ಹದಿನೈದು ಸಾವಿರ ಹೆಕ್ಟೇರನಿಂದ ಇಪ್ಪತ್ತು ಸಾವಿರ ಹೆಕ್ಟೇರ್ ನಷ್ಟು ಮತ್ತು ಕಡೂರು ತಾಲ್ಲೂಕಿನ ಹಿರೇನಲ್ಲೂರು ಹೋಬಳಿಯ ಕೆಲ ಭಾಗ ಮತ್ತು ಚೌಳಹಿರಿಯೂರು ಭಾಗದ ಕೆಲವು ಕಡೆ ಈರುಳ್ಳಿ ಬೆಳೆಯಲಾಗುತ್ತದೆ ಆದರೆ ಅಕಾಲಿಕ ಮಳೆಯಿಂದಾಗಿ ರೈತರು ಕಂಡ ಕನಸಿಗೆ ಬೆಂಕಿ ಇಟ್ಟಂಗಾಗಿದೆ. ಬೆಲೆ ಇದೆ ಆದರೆ ಬೆಳೆ ಇಲ್ಲ ಎಂದು ರೈತರು ಕೊರಗುತ್ತಿದ್ದಾರೆ.
Leave a comment