ಚಿಕ್ಕಮಗಳೂರು : ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿಟಿ ಗೋಪಾಲಗೌಡ ಮಾಡಿರುವ ಆರೋಪಗಳಿಗೆ ಸಂಘದ ಮಾಜಿ ಅಧ್ಯಕ್ಷ ಲೋಕಪ್ಪ ಗೌಡ ಸ್ಪಷ್ಟನೆ ನೀಡಿದ್ದಾರೆ.
ಸಂಘದ ನೂತನ ಕಟ್ಟಡ ನಿರ್ಮಾಣ ಟೆಂಡರ್ ಕರೆಯದೆ ನಿರ್ಮಿಸಿ 30 ಲಕ್ಷಕ್ಕೂ ಹೆಚ್ಚು ಅವ್ಯವಹಾರ ಆಗಿದೆ ಎಂಬುದು ಸುಳ್ಳು ಆರೋಪವಾಗಿದ್ದು, ಗೋವಿಂದೇಗೌಡರ ಆಪಾದನೆ ಸಮಂಜಸವಲ್ಲ. ಜನರಿಗೆ ತಪ್ಪು ಭಾವನೆ, ಬರುವಂತೆ ಆರೋಪ ಮಾಡಿದ್ದು, ಮನೆಯಲ್ಲಿ ಸ್ಪರ್ಧಿಸಲು ಅನರ್ಹರಾದ ಹಿನ್ನೆಲೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಲೋಕಪ್ಪಗೌಡ ಹೇಳಿದ್ದಾರೆ.
ಕಟ್ಟಡದ ನಿರ್ಮಾಣಕ್ಕೆ ಹೆಚ್ಚುವರಿ 31.51 ಲಕ್ಷ ಅಧಿಕ ವೆಚ್ಚವಾಗಿದ್ದು ಇದಕ್ಕೆ ಕಾರ್ಯಕಾರಿ ಸಮಿತಿಯಲ್ಲಿ ಅನುಮೋದನೆ ಪಡೆಯಲಾಗಿದೆ. ಬ್ಯಾಂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಕಟ್ಟಡದಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಇಂಜಿನಿಯರ್ ಗಳನ್ನು ನೇಮಕ ಮಾಡಲಾಗಿದೆ. ಕಾಂಪೌಂಡ್ ನಿರ್ಮಿಸಲಾಗಿದ್ದು ಎಸಿಯನ್ನು ಕೂಡ ಅಳವಡಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು. ವೇಳೆ ಮಾತನಾಡಿದ ಅವರು, ಗೋಪಾಲಗೌಡ ಚುನಾವಣೆಗೆ ಸ್ಪರ್ಧಿಸಲು ಅನರ್ಹ ರಾಗಿರುವ ಕಾರಣ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಕೈ ಬಿಡಲಾಗಿದೆ ಈ ಕಾರಣಕ್ಕೆ ಅವರು ಬೇಡದ ಆಪಾದನೆಗಳನ್ನು ಮಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಹ್ಯೇಯ ಕೃತ್ಯಕ್ಕೆ ಇಳಿದಿದ್ದಾರೆ. ಸರ್ಕಾರದ ಯಾವುದೇ ಅನುದಾನ ಪಡೆಯದೆ ಸ್ವಂತ ಕಟ್ಟಡ ನಿರ್ಮಾಣ ಹಾಗೂ 67 ಲಕ್ಷದ ಸೈಟ್ ಕೂಡ ಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಡಾವಿಜಯಕುಮಾರ್, ಗೋವಿಂದೇಗೌಡರು ಮನನೊಂದು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ. ಅವರು ನೀಡಿರುವ ಹೇಳಿಕೆಗೆ ಬೇರೆಯೇ ದುರುದ್ದೇಶ ಇದ್ದು, 40 ಕೋಟಿಗೂ ಹೆಚ್ಚು ವಹಿವಾಟು ನಡೆಸಿರುವ ಬ್ಯಾಂಕ್ ಉತ್ತಮ ಹೆಸರು ಮಾಡಿದೆ ಮೂರು ಬಾರಿ ರಾಜ್ಯ ಮಟ್ಟದ ಸಹಕಾರಿ ಪ್ರಶಸ್ತಿಯನ್ನು ಪಡೆದಿದೆ. ಈ ರೀತಿಯ ಹೇಳಿಕೆ ಸರಿಯಲ್ಲ ಎಂದರು.
Leave a comment