ಚಿಕ್ಕಮಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಸಮೀಪಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಐದು ಜನ ಮುಖಂಡರು ಆಯಾಕಟ್ಟಿನ ನಿಗಮ ಮಂಡಳಿಯ ಗೂಟದ ಕಾರಿನಲ್ಲಿ ರಾರಾಜಿಸುತ್ತಿದ್ದಾರೆ ಆದರೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಅಳಲು ಕೇಳಲು ಯಾರಿಗೂ ಬಿಡುವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಅಂಶು ಮಂತ್ ಕಳೆದ ಐದು ವರ್ಷದಿಂದ ಇದ್ದರೆ. ವಿಧಾನ ಸಭಾ ಚುನಾವಣೆ ಮುಗಿದ ಮೇಲೆ ಒಂದು ಸಾರಿ ಸಭೆ ಕರೆದಿದ್ದಾರೆ. ಇತ್ತೀಚೆಗೆ ಸಭೆಯನ್ನೇ ಕರೆದಿಲ್ಲ ಕಾರ್ಯಕರ್ತರನ್ನು ಕ್ಯಾರೇ ಎನ್ನತ್ತಿಲ್ಲ ಎಂಬ ಆಕ್ರೋಶ ಎಲ್ಲೆಡೆ ವ್ಯಕ್ತವಾಗಿದೆ. ಭದ್ರಾ ಕಾಡ ಗೂಟದ ಕಾರು ಸಿಕ್ಕ ಮೇಲೆ ಕಾರ್ಯಕರ್ತರಿಗೆ ಸ್ಪಂದಿಸುವ ಬದಲು ಶಾಸಕರುಗಳ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ದೂರುತ್ತಲೆ ಅಧ್ಯಕ್ಷರ ಸಬ್ ಮಿಷನ್ ಕೇಳುವುದೇ ಆಗಿದೆ. ಹಗಲು ರಾತ್ರಿ ಕಾಂಗ್ರೆಸ್ ಗೆಲುವಿಗೆ ದುಡಿದು ಪ್ರಯೋಜನ ಏನು.?ಶಾಸಕರುಗಳನ್ನು ಮಾತನಾಡಿಸಲು ಕಷ್ಟಪಡಬೇಕಾಗಿದೆ ನಮಗೂ ಸ್ವಾಭಿಮಾನವಿದೆ ಎನ್ನುತ್ತಾರೆ ಕೆಲ ಕಾರ್ಯಕರ್ತರು,
ಯಾವುದೇ ಸರ್ಕಾರಿ ಕಛೇರಿಗೆ ಹೋದರು ಅಧಿಕಾರಿಗಳು ಉಡಾಪೆಯಿಂದ ವರ್ತಿಸುತ್ತಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಕೇರ್ ಮಾಡುತ್ತಿಲ್ಲ ನಾವು ಕೊಟ್ಟು ಬಂದಿದ್ದೇನೆ ಎನ್ನುತ್ತಾರೆ. ಇದರ ಬಗ್ಗೆ ಕಾರ್ಯಕರ್ತರಾಗಿ ಜಿಲ್ಲಾ ಅಧ್ಯಕ್ಷರಗೆ ಹೇಳುವ ಎಂದರೆ ಕೈಗೆ ಸಿಗುತ್ತಿಲ್ಲ ಎನ್ನುತ್ತಲೇ ಮುಂದೆ ಬರುವ ಚುನಾವಣೆಯಲ್ಲಿ ಶಾಸಕರು ಅಧ್ಯಕ್ಷರು ಗೆಲ್ಲಿಸಿಕೊಳ್ಳಲಿ ಎಂದು ಮಾರ್ಮಿಕವಾಗಿ ಕಾಂಗ್ರೆಸ್ ಪ್ರಮುಖ ಮುಖಂಡರು ಹೇಳುತ್ತಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ. ಅಂಶುಮಂತ್ ತಮ್ಮ ನೆಂಟರು ಎಂದು ಹೇಳಿಕೊಳ್ಳುವ ಡಾಕ್ಟರ್ ಒಬ್ಬ ಕಳೆದ ಐದು ವರ್ಷದಿಂದ ಆಯಾಕಟ್ಟಿನ ಜಾಗದಲ್ಲಿ ಪಾವಡಿಸಿಕೊಂಡು ಬಿಜೆಪಿ ಅವಧಿಯಲ್ಲಿ ಬಂದು ಕಾಂಗ್ರೆಸ್ ನಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ.
ಬಿಜೆಪಿಯಿಂದ ಬಚಾವ್ ಎಂದು ಸಮಾಧಾನಗೊಳ್ಳುವ ಬದಲು ಬಾಂಡ್ಲಿಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾ ಸಚಿವ ಜಾರ್ಜ್ ಮಾತನಾಡಿಸಲು ಸಾಧ್ಯವಿಲ್ಲ ಶಾಸಕರು ಕೇಳಲೇಬೇಡಿ ಇನ್ನೂ ಪಕ್ಷ ಎಂದರೆ ಯಾರು ಕೈಗೆ ಸಿಗುತ್ತಿಲ್ಲ ಯಾರಿಗೆ ಹೇಳಲಿ ನಮ್ಮ ಗೋಳ ಎಂದು ಗೊಣಗುತ್ತಿದ್ದು ಅಧ್ಯಕ್ಷರು ಕಾರ್ಯಕರ್ತರ ಸಬ್ ಮಿಷನ್ ಆಲಿಸಲಿ ಎಂದು ಒತ್ತಯಿಸಿದ್ದಾರೆ.
Leave a comment