ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನು ಅನಧಿಕೃತವಾಗಿ ಒತ್ತುವರಿಯಾಗಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯ ಒದಗಿಸದ ಬಗ್ಗೆ ಅಧಾರ್ ಲಿಂಕ್ ಮತ್ತು ಅಧಾರ್ ಪೀಡಿಂಗ್ ಹಾಗೂ ಪೋಡಿ ಮಾಡಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.
23-1-25 ರಂದು ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಂದಾಯ ಅಧಿಕಾರಿಗಳು ಸೂಚನೆಗಳನ್ನು ಪಾಲಿಸದೆ ತೀರ ಅಸಾಮಾಧಾನಕರ ಪ್ರಗತಿ ಸಾಧಿಸಿದ್ದಲ್ಲದೆ ಸಭೆಗೂ ಗೈರು ಹಾಜರಿಯಾಗಿದ್ದ ವರ್ತನೆಯು ನೌಕರರ ಕರ್ತವ್ಯ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿ ಎತ್ತಿ ತೋರಿದ್ದು ಇಂತಹ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ 1957 ರ ನಿಯಮ8(3) ರಂತೆ ದತ್ತವಾಗಿರುವ ಅಧಿಕಾರ ಚಲಾಯಿಸಿ ಕಡೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 20 ಗ್ರಾಮ ಆಡಳಿತಾಧಿಕಾರಿಗಳ ಮೇಲೆ ವೇತನವನ್ನು ಸಂಚಿತ ಪರಿಣಾಮ ರಹಿತವಾಗಿ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿದು ಆದೇಶ ಮಾಡಿದ್ದಾರೆ.
ಗ್ರಾಮ ಆಡಳಿತಾಧಿಕಾರಿಗಳ ವಿವರ:
1) ರಘ ರಾಮ್ ಬ್ಯಾಲದಾಳು ವೃತ್ತ.2) ಶಿವಕುಮಾರ್ ಟಿ.ಎಂ.ಸಿಂಗಟಗೆರೆ ವೃತ್ತ, 3) ಮೋಹನ್,ಟಿ ಕಾಮೇನಹಳ್ಳಿ ವೃತ್ತ4)ಗೋಣಿ ಬಸಪ್ಪ ಚೌಳಹಿರಿಯೂರು ವೃತ್ತ5)ಹರೀಶ್ ಕುಮಾರ್ ಚೌಳಹಿರಿಯೂರು ವೃತ್ತ. 6)ಅಶೋಕ್ ಫ್ರಾನ್ಸಿಸ್ ಯಗಟಿ ವೃತ್ತ7)ಬಾರಿಕರ ಮೈಲಾರಪ್ಪ ಬಾಣೂರು ವೃತ್ತ8)ರವಿ.ಕೆ.ಆರ್ ತಂಗಲಿ ವೃತ್ತ9) ಮುತ್ತಪ್ಪ ದಶರಥ ಸಂಗೋಗಿ10)ಸಂತೋಷ್ ಕುಮಾರ್ ಹುಳಿಗೆರೆ ವೃತ್ತ11) ಹರೀಶ್ ಕುಮಾರ್ ಅಸಂದಿ ವೃತ್ತ12)ಅಂಬರೀಶ್ ವಕ್ಕಲಗೆರೆ ವೃತ್ತ13)ದಿನೇಶ್ ಜಿ.ಎಸ್ ವಿ,ಯರದಕೆರೆ14)ಪ್ರಿಯಾಂಕ ಬಿ.ಎಸ್ ಯರದಕೆರೆ ವೃತ್ತ15)ಓಂಕಾರ್ ಹೆಚ್.ಎಸ್.ನಿಡಘಟ್ಟ ವೃತ್ತ.16)ಸುರೇಶ್ ಘಂಟಿ ಪುರ ವೃತ್ತ.17)ಸಿದ್ದಪ್ಪ ಹೆಚ್ ಬಿಳುವಾಲ ವೃತ್ತ18) ವಿರೇಶ್ ತರವಂದ ನಾಗರಾಳ್ ವೃತ್ತ 19) ಹೆಚ್.ಆರ್.ವೆಂಕಟೇಶ್ ಬಿಸಲೆರೆ ವೃತ್ತ20) ನವೀನ್ ಜಿ.ಚಿಕ್ಕಿಂಗಳ ವೃತ್ತ
ಈ ಬಗ್ಗೆ ಹೋರಾಟ ಮಾಡಿದ್ದ ಜಿಲ್ಲಾ ರೈತ ಸಂಘದ ಮುಖಂಡರಾದ ಗುರುಶಾಂತಪ್ಪ ರವರನ್ನು ವಿಚಾರಿಸಿದಾಗ ಒತ್ತುವರಿ ಪ್ರಕರಣದಲ್ಲಿ ಒಟ್ಟು 134 ನೌಕರರು ಮತ್ತು ಕಂದಾಯ ಅಧಿಕಾರಿಗಳ ಮೇಲೆ ದೂರಿದ್ದು ತಿಪ್ಪೆ ಸಾರಿಸುವ ಕೆಲಸವಾಗುತ್ತಿದೆ .ಎಲ್ಲರ ಮೇಲೆ ಕ್ರಮ ಕೈಗೊಳ್ಳಲು ಒತ್ತಯಿಸಿದ್ದಾರೆ.
Negligence of village officials hinders promotion
Leave a comment