ಚಿಕ್ಕಮಗಳೂರು : ದಶಕಗಳ ಕಾಲ ಭೂಗತರಾಗಿದ್ದ ಆರು ನಕ್ಸಲರ ಶರಣಾಗತಿಗೆ ವೇದಿಕೆ ಸಿದ್ಧವಾಗಿದೆ, ಶಾಂತಿಗಾಗಿ ನಾಗರಿಕ ವೇದಿಕೆ ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುಧೀರ್ಘ ಮಾತುಕತೆ ಫಲಪ್ರದವಾಗಿದ್ದು ನಾಳೆ ಆರು ಜನ ನಕ್ಸಲರು ಮುಖ್ಯ ವಾಹಿನಿಗೆ ಬರಲಿದ್ದಾರೆ.
ಪ್ರಮುಖವಾಗಿ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ ಕೆ ವಸಂತ, ಟಿ ಎನ್ ಜೀಶ್ ಅಲಿಯಾಸ್ ಜಯಣ್ಣ ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದು ಈ ಬಗ್ಗೆ ಶಾಂತಿಗಾಗಿ ನಾಗರಿಕ ವೇದಿಕೆ ಪ್ರಮುಖ ಮುಖಂಡ ಕೆ ಎಲ್ ಅಶೋಕ್ ಮಾಹಿತಿ ನೀಡಿದ್ದಾರೆ.
ರಾಜ್ಯ ಸರಕಾರ ನಕ್ಸಲರ ಪ್ರಮುಖ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದು ಅವುಗಳಲ್ಲಿ ಪ್ರಮುಖವಾಗಿ ಮಲೆನಾಡಿನ ಅರಣ್ಯ ಇಲಾಖೆ ಕಿರುಕುಳ, ಗಿರಿಜನರಿಗಾಗಿ ಭೂಮಿ, ದಲಿತರಿಗಾಗಿ ವಸತಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಶರಣಾಗಲಿರುವ ನಕ್ಸಲರು ಮುಂದೆ ಇಟ್ಟಿದ್ದಾರೆ ಎಂದು ಕೆಎಲ್ ಅಶೋಕ್ ತಿಳಿಸಿದರು. ಇವುಗಳ ಜೊತೆಗೆ ರಾಜ್ಯ ಸರ್ಕಾರ ಶರಣಾಗುವ ನಕ್ಸಲರನ್ನು ಘನತೆ ಗೌರವದಿಂದ ನಡೆಸಿಕೊಳ್ಳಬೇಕು ಎಂಬ ಶರತ್ತನ್ನು ಇಟ್ಟಿದ್ದೇವೆ ಎಂದು ಅಶೋಕ್ ತಿಳಿಸಿದ್ದಾರೆ.
ನಕ್ಸಲ್ ಶರಣಾಗತಿ ಹೋರಾಟದ ಹೊಸ ಸ್ವರೂಪ
ನಾಳೆ ಆರು ಜನ ನಕ್ಸಲರು ಶರಣಾಗತಿ ಆಗುತ್ತಿಲ್ಲ, ಬದಲಾಗಿ ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಇನ್ನು ಮುಂದೆ ಅವರ ಹೋರಾಟದ ಸ್ವರೂಪ ಮತ್ತು ದಿಕ್ಕು ಬದಲಾಗಲಿದ್ದು ಇಷ್ಟು ದಿನ ಭೂಗತರಾಗಿ ನಡೆಸಿದ ಹೋರಾಟ ಇನ್ನು ಮುಂದೆ ನಾಗರಿಕ ಸಮಾಜದ ನಡುವೆ ಚಳುವಳಿ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಅಶೋಕ್ ಇದೆ ವೇಳೆ ಸ್ಪಷ್ಟಪಡಿಸಿದರು.
ಹಳೇ ಶರಣಾಗತಿಯಲ್ಲಾದ ದೋಷ ಮರು ಕಳುಹಿಸಿದಂತೆ ಮನವಿ
ಈ ಹಿಂದೆ ಶರಣಾಗತಿ ಆಗಿದ್ದ ನಕ್ಸಲರನ್ನು ರಾಜ್ಯ ಸರ್ಕಾರ ನಡೆಸಿಕೊಂಡ ರೀತಿ ಹಾಗೂ ಅವರಿಗೆ ಸೌಲಭ್ಯ ಕಲ್ಪಿಸದೇ ಇದ್ದುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಕೆ ಎಲ್ ಅಶೋಕ್ ಈ ಬಾರಿ ಆ ರೀತಿ ಆಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಾರಿ ಲಿಖಿತ ರೂಪದಲ್ಲಿ ರಾಜ್ಯ ಸರ್ಕಾರ ಭರವಸೆ ನೀಡುತ್ತಿದೆ ಎಂದು ತಿಳಿಸಿದರು.
Leave a comment