ಚಿಕ್ಕಮಗಳೂರು : ನಾಳೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಆರು ನಕ್ಸಲರು ಮುಖ್ಯವಾಹಿನಿಗೆ ಸೇರಲಿದ್ದಾರೆ ಎಂಬುದು ಖಚಿತವಾಗಿದೆ, ಈ ಮೂಲಕ ಕಳೆದ ಮೂವತ್ತು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳು ನಡೆಯುತ್ತಿದ್ದು ಅದು ಕೊನೆಗೊಳ್ಳುವ ಸಾಧ್ಯತೆ ಇದೆ.
ಇತ್ತೀಚೆಗೆ ನಕ್ಸಲ್ ವಿಕ್ರಮ್ ಗೌಡ ಮತ್ತು ಪೊಲೀಸ್ ರ ಮಧ್ಯೆ ಚಕಮಕಿ ನಡೆದು ವಿಕ್ರಮ್ ಗೌಡ ಅಸುನೀಗಿದ ನಂತರ ಇನ್ನುಳಿದ ನಕ್ಸಲ್ ರು ಮುಖ್ಯವಾಹಿನಿಗೆ ಕರೆತರಲು ಹಲವರು ಪ್ರಯತ್ನಿಸಿದ್ದು ಸರ್ಕಾರ ಕೂಡ ಇದಕ್ಕೆ ಸ್ಪಂದಿಸಿದ್ದರ ಫಲವಾಗಿ ನಾಳೆ ಮುಂಡುಗಾರು ಲತಾ,ಸುಂದರಿ ಕುತ್ಲೂರು,ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ,ಕೆ.ವಸಂತ ಮತ್ತು ಟಿ.ಎನ್ ಜೇಶ್ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮುಖ್ಯವಾಹಿನಿ ಸೇರಲಿದ್ದಾರೆ. ಇನ್ನೋರ್ವ ನಕ್ಸಲ್ ಜಯಣ್ಣ ಅಲಿಯಾಸ್ ಜಾನ್ ಸಂಪರ್ಕ ಸಾಧಿಸಲಾಗಿಲ್ಲ ಎನ್ನಲಾಗುತ್ತಿದೆ. ನಕ್ಸಲ್ ರು ಅನೇಕ ಬೇಡಿಕೆ ಇಟ್ಟಿದ್ದು ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದಕ್ಕೆ ಈ ಹಿಂದೆ ಶರಣಾದವರ ಗೋಳು ಕೇಳ ಬೇಕಾಗಿದೆ. 2016 ರಲ್ಲಿ ಶರಣಾಗಿರುವ ನಿಲುಗುಳಿ ಪದ್ಮನಾಭ ಯಾವ ಭರವಸೆಗೂ ಸ್ಪಂದಿಸಿಲ್ಲ. ಪ್ರತಿಯೊಂದು ವಿಚಾರಕ್ಕೆ ಪೊಲೀಸ್ರು ವಿಚಾರಣೆ ನೆಪದಲ್ಲಿ ಮನೆಯ ಹತ್ತಿರ ಬರುತ್ತಾರೆ. ಕಳೆದ ಎಂಟು ವರ್ಷಗಳಿಂದ ಕೋರ್ಟ್ ಅಲೆಯುವಂತೆ ಆಗಿದೆ ಸ್ವಯಂ ಉದ್ಯೋಗ ಮಾಡಲು ನೆರವು ನೀಡಿದ್ದು ಪ್ರಯೋಜನವಾಗಿಲ್ಲ ಎನ್ನುತ್ತಾರೆ. ಒಟ್ಟಾರೆ ಸರ್ಕಾರದ ತೀರ್ಮಾನ ಮತ್ತು ನಕ್ಸಲ್ ರು ಮುಖ್ಯ ವಾಹಿನಿಗೆ ಬರುತ್ತಿರುವುದರಿಂದ ಹಲವು ರಾಜ್ಯಗಳಿಗೆ ಒಳ್ಳೆಯ ವಾತವರಣ ನಿರ್ಮಾಣವಾಗಲಿದೆ ಎಂದೇ ಹೇಳಲಾಗುತ್ತಿದೆ.
Leave a comment