ಚಿಕ್ಕಮಗಳೂರು : ನಾಳೆ ಜಿಲ್ಲಾಡಳಿತದ ಮುಂದೆ ಶರಣಾಗತಿ ಆಗಲಿರುವ ಪ್ರಮುಖ ನಕ್ಸಲ್ ನಾಯಕಿ ಮುಂಡಗಾರು ಲತಾ ಮಾತನಾಡಿರುವ ವಿಡಿಯೋ ಇದೀಗ ರಿವೀಲ್ ಆಗಿದೆ.
ಶರಣಾಗತಿಗೆ ಮುನ್ನಾ ನಕ್ಸಲ್ ನಾಯಕಿ ಮುಂಡುಗಾರು ಲತಾ ಎಕ್ಸ್ ಕ್ಲೂಸಿವ್ ಮಾತನಾಡಿದ್ದಾರೆ. ಚಿಕ್ಕಮಗಳೂರಿಗೆ ಆಗಮಿಸುವ ಮುನ್ನಾ ಕಾಡಿನಲ್ಲಿ ಎಲ್ಲಾ ಆರು ಜನ ನಕ್ಸಲರು ಸಭೆ ನಡೆಸಿ ನಂತರ ಮಾತನಾಡಿರುವ ಲತಾ ತಮ್ಮ ಅಭಿಪ್ರಾಯ ಹೇಳಿದ್ದಾರೆ, ಯಾರೆಲ್ಲ ಪ್ರಜಾ ತಾಂತ್ರಿಕ ಸಂವಿಧಾನ ಪರ ಹೋರಾಟ ಬಯಸುತ್ತಿದ್ದಾರೋ
ಅದೇ ರೀತಿ ಜನ್ರ ಪರ ಹೋರಾಟ ನಾವು ಮಾಡ್ತೇವೆ ಎಂದಿರುವ ಲತಾ ಜನರ ಪರ ಕೊನೆಯ ಉಸಿರಿರುವ ತನಕ ನಿಲ್ತೇವೆ ಜನ್ರಿಗಾಗಿ ಹೋರಾಟ ಮಾಡ್ತೇವೆ ಎಂದಿದ್ದಾರೆ. ಕರ್ನಾಟಕ, ಕೇರಳ, ತಮಿಳು ನಾಡಿನವ್ರು ಅರು ಜನ ನಕ್ಸಲರು ಡಿಸೈಡ್ ಮಾಡಿ ಚರ್ಚೆ ಮಾಡಿದ್ದೇವೆ ಎಂದಿರುವ ಮುಂಡಗಾರು ಲತಾ ಅಲ್ಲಿನ ಸ್ಥಿತಿಗಳ ಬಗ್ಗೆ ಸಂಘಟಕರು ಮನವರಿಕೆ ಮಾಡಿಸಿದ್ದಾರೆ ಎನ್ನುವ ಮೂಲಕ ಸರ್ಕಾರದ ಜೊತೆ ಸಂಧಾನಕ್ಕೆ ಯತ್ನಿಸಿದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಎಲ್ಲಾ ಕಾಂಮ್ರೆಡ್ ಗಳನ್ನು ನಾವು ಮುಂದೆ ನಡೆಯುವ ಹೋರಾಟಕ್ಕೆ ಸ್ವಾಗತಿಸುತ್ತೇವೆ
ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತೇ ಅನ್ನೋ ಭರವಸೆಯೊಂದಿಗೆ ಬರ್ತಿದ್ದೇವೆ ಎಂದಿರುವ ಲತಾ ನಮ್ಮ ಶರಣಾಗತಿ ಪ್ರಕ್ರಿಯೆಗೆ ಎಲ್ಲಾ ಪ್ರಮುಖ
ಸಂಘಟಕರೆಲ್ಲರ ಶ್ರಮ ಹಾಕಿದ್ದಾರೆ ಎಂದು ಹೇಳಿದ್ದಾರೆ.
Leave a comment