ಚಿಕ್ಕಮಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕಲೆ. ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡಾಭ್ಯಾಸ ಮಾಡಿದಾಗ ಉತ್ತಮ ಅವಕಾಶ ದೋರೆಯುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಇಂದು ಬೀಕನಹಳ್ಳಿ ಸೈಂಟ್ ಝೇವಿಯರ್ ಶಾಲೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಗ್ರಾಮ ಪಂಚಾಯಿತಿ ಬೀಕನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ೧೪ ಮತ್ತು ೧೭ ವಯೋಮಾನದ ೨೦೨೫-೨೬ ರ ಥ್ರೋಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಥ್ರೋಬಾಲ್ ಕ್ರೀಡೆಯು ೧೯೩೦ ರಲ್ಲಿ ದೇಶದಾದ್ಯಂತ ಪ್ರಾರಂಭಗೋಡು ೧೯೪೦ ರಲ್ಲಿ ಮಹಿಳೆಯರಿಗಾಗಿ ಈ ಕ್ರೀಡೆಯನ್ನು ಪ್ರಾರಂಭ ಮಾಡಿದರು, ವಾಲಿಬಾಲ್, ಕಬ್ಬಡಿ ಗ್ರಾಮೀಣ ಭಾಗದ ಕ್ರೀಡೆಗಳಾಗಿ ಥ್ರೋಬಾಲ್ ಪ್ರಾರಂಭವಾಯಿತು ಎಂದರು.
ಕ್ರೀಡೆಗಳಿಗೆ ಸರ್ಕಾರದಿಂದ ಬರುವ ಅನುದಾನ ಕಡಿಮೆ ಇದೆ, ಮುಂದಿನ ದಿನಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಸಚಿವರ ಬಳಿ ಮನವಿ ಮಾಡಲಾಗುವುದು, ಸ್ಥಳೀಯ ಶಾಲೆಗಳ ಸಹಕಾರದೊಂದಿಗೆ ಮೈಸೂರು ವಿಭಾಗ ಮಟ್ಟದ ಥ್ರೋಬಾಲ್ ಕ್ರೀಡೆ ಆಯೋಜನೆಯೊಂದಿಗೆ ಉತ್ತಮ ರೀತಿಯಲ್ಲಿ ಆಯೋಜಿಸಿದ್ದಾರೆ ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ, ಶ್ರಿಯ ಭಟ್‌ಕಲ್, ಹಿಂದೂ, ಮಮತ, ಲಾವಣ್ಯ, ದೀಪಶ್ರೀ ರಂತಹ ಪ್ರತಿಭಾವಂತ ಆಟಗಾರರನ್ನು ನೀವು ಮಾದರಿಯಾಗಿಟ್ಟುಕೊಳ್ಳಬೇಕು, ಕ್ರೀಡಾಪಟುಗಳು ಕ್ರೀಡಾ ಸ್ಪೂತಿಯಿಂದ ಭಾಗವಹಿಸಿ ಜಾಗರೂಕರಾಗಿ ಕ್ರೀಡೆ ಆಡಬೇಕೆಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ರವರು ಧ್ವಜಾರೋಹಣ ನೆರೆವೇರಿಸಿ ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೋಬ್ಬರು ಕ್ರೀಡಾ ಸ್ಪೂರ್ತಿಯಿಂದ ನಿಯಮಗಳಿಗೆ ಬದ್ಧವಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಗೆದ್ದರೆ ಹಿಗ್ಗದೆ, ಸೋತರೆ ಕುಗ್ಗದೆ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸುವ ಮನಸ್ಥಿತಿ ನಿಮ್ಮದಾಗಲಿ ಹಾಗೂ ಈ ಪಂಧ್ಯಾವಳಿ ಯಶಸ್ವಿಯಾಗಿ ನೆಡೆಯಲಿ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಮ್ಮ ಪುಟ್ಟೇಗೌಡ ಮಾತನಾಡಿ ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ ಆಟದಲ್ಲಿ ಪಾಲ್ಗೋಳ್ಳುವುದು ಮುಖ್ಯ ಇಂದಿನ ಸೋಲೇ ಮುಂದಿನ ಗೆಲುವಿಗೆ ಕಾರಣ ಎಂದು ತಿಳಿಸಿ ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಶುಭಾಶಯಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಹೋಲಿ ಫ್ಯಾಮಿಲಿ ಸೇವಾಸಂಸ್ಥೆ ಅಧ್ಯಕ್ಷ ಮೋಕ್ಷನಾಥ್, ಕಾರ್ಯದರ್ಶಿ ರೋಶನ್ ಸಿಕ್ವೇರ, ಆಡಳಿತಾಧಿಕಾರಿ ಸೌಮ್ಯಶ್ರೀ, ರೇಷ್ಮ, ಉಪ ನಿರ್ದೇಶಕರಾದ ತಿಮ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ರುದ್ರಪ್ಪ, ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್, ಕಾರ್ಯದರ್ಶಿ ಪರಮೇಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪಾಲಾಕ್ಷಮೂರ್ತಿ, ಸಂಘ-ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
Mysore Division Level Throwball Tournament
Leave a comment