ಮೂಡಿಗೆರೆ : ಶಾಸಕಿ ನಯನ ಮೋಟಮ್ಮನವರ ಅಂಧ ದರ್ಬಾರ್ ಬಗ್ಗೆ ಕಾಂಗ್ರೆಸ್ ಗರು ಬೀದಿಗಿಳಿದಿದ್ದಾರೆ.ಮುತಾಲಿಕ್ ಕಾಂಗ್ರೆಸ್V/S ಒರಿಜಿನಲ್ ಕಾಂಗ್ರೆಸ್ ಎಂಬ ಕಿತ್ತಾಟ ಬಹಿರಂಗವಾಗಿ ನಡೆಯುತ್ತಿದೆ. ಇದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಗೆ ದೂರು ಸಲ್ಲಿಸುವಷ್ಟರ ಮಟ್ಟಿಗೆ ಹೋಗಿದೆ.
ಜಿಲ್ಲೆಯಲ್ಲಿ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದು ಒಬ್ಬೊಬ್ಬ ಶಾಸಕರ ಕಥೆ ಒಂದೊಂದು ರೀತಿಯಲ್ಲಿ ಇವೆ ಎಂದು ಕಾಂಗ್ರೆಸ್ ನವರ ಅಳಲು, ದೂರು,ದುಮ್ಮಾನಗಳು ಹಾದಿ ಬೀದಿಯಲ್ಲಿ ಕೇಳಿ ಬರುತ್ತಿದೆ.ಪಕ್ಷಕ್ಕಿಂತ ಶಾಸಕರುಗಳ ಮೂಗಿನ ನೇರಕ್ಕೆ ಪಕ್ಷ ನಡೆಸಬೇಕಾದ ಪರಿಸ್ಥಿತಿ ಇರುವುದನ್ನು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.ಇದರಿಂದಾಗಿ ಮುಖಂಡರು, ಕಾರ್ಯಕರ್ತರು ಕಂಗಲಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ನಿಷ್ಕ್ರಿಯವಾಗಿದೆ.ಜಿಲ್ಲಾ ಅಧ್ಯಕ್ಷ ರಿಗೆ ಗೂಟದ ಕಾರು ಸಿಕ್ಕಿರುವುದರಿಂದ ಟಾಟ ಹೇಳಿಕೊಂಡ ಓಡಾಟ ಮಾಡುತ್ತಿದ್ದಾರೆ ಶಾಸಕರ ಮಾತಿಗೆ ಜೈ ಎನ್ನುತ್ತಿದ್ದಾರೆ ಯಾರಿಗೆ ದೂರು ಹೇಳುವುದು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ದೂರಿದ್ದಾರೆ ಎನ್ನಲಾಗಿದೆ.
ನಯನಾ ಮೋಟಮ್ಮ ಯಾರ ಮಾತು ಕೇಳುವುದಿಲ್ಲ.ದರ್ಪ,ದಬ್ಬಾಳಿಕೆಯ ಮಾತನಾಡುತ್ತಾರೆ.ಈ ಬಗ್ಗೆ ಮುಸ್ಲಿಂ ಮುಖಂಡರು ಸಭೆ ನಡೆಸಿದ್ದಾರೆ.ದಲಿತ ಮುಖಂಡರು ಮತ್ತು ಕಾರ್ಯಕರ್ತರು ಕೂಡ ಸಭೆ ನಡೆಸಲು ತಯಾರಿ ನಡೆಸಿದ್ದಾರೆ .
ಶ್ರೀರಾಮ ಸೇನೆಯ ಮುತಾಲಿಕ್ ಜೊತೆಗೆ ವೇದಿಕೆ ಹಂಚಿಕೊಂಡ ಬಳಿಕ ನಾನು ಮಾಡುವುದು ಸರಿ ಎಂಬ ಧೋರಣೆಯ ಜೊತೆಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ನವರು ಹಾದಿ ಬೀದಿಯಲ್ಲಿ ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.ಡಿ.ಕೆ.ಜಿಲ್ಲೆಗೆ ಬಂದಾಗ ವಿಚಾರಿಸುವ ಸಾಧ್ಯತೆ ಇದೆ ಎನ್ನತ್ತಿದ್ದಾರೆ.
ಅರತಿ ಕೃಷ್ಣ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯ ಕ್ರಮದ ಬಗ್ಗೆ ಕಾಂಗ್ರೆಸ್ ನವರು ಸಭೆ ನಡೆಸಿದರೆ ಶಾಸಕರು ತಮ್ಮ ಕಛೇರಿಯಲ್ಲಿ ಪರ್ಯಾಯ ಸಭೆ ನಡೆಸಿದ್ದಾರೆ ಹೀಗಾಗಿ ಮೂಡಿಗೆರೆ ಕಾಂಗ್ರೆಸ್ ಕಿತ್ತಾಟ ಮತ್ತೊಮ್ಮೆ ಬೀದಿಗೆ ಬಂದಿದೆ.
ಕೆಲ ಶಾಸಕರು ತಾವು ತಮ್ಮ ಕುಟುಂಬ ಕಾಂಗ್ರೆಸ್ ಎನ್ನುವಂತೆ ನಡೆದು ಕೊಂಡು ಲಿಕ್ಕರ್ ಮಾಫಿಯಾ ಸೇರಿದ್ದಾರೆ ಲಿಕ್ಕರ್ ಶಾಪ್ ಗಳಿಂದ ಮಾಮೂಲಿ ಪಡೆದರೆ ಕ್ವಾರಿ ಮಾಲೀಕರಾಗಿ ದುಡಿಮೆಗೆ ಇಳಿದರೆ ನಮಗೂ ಕಾಂಗ್ರೆಸ್ ಗೂ ಸಂಬಂಧ ಇಲ್ಲ ಎನ್ನುವಂತೆ ಕೆಲವರ ವರ್ತನೆ ಇದೆ ಇಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ ಎಂದು ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಹೇಳುತ್ತಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕಿಂತ ಅಧಿಕಾರ ಮುಖ್ಯ ಎಂದು ವರ್ತಿಸುವವರು ಹೇಳಿದ್ದು ವೇದಾಂತವಾಗಿದೆ ವಿರೋಧ ಪಕ್ಷಗಳು ಕೈ,ಕೈ ಹಿಡಿದು ತಿರುಗಾಡುತ್ತಿದ್ದಾರೆ ಕಾಂಗ್ರೆಸ್ ಗೆ ,ಕಾಂಗ್ರೆಸ್ ವಿರೋಧ ಪಕ್ಷವಾಗಿದೆ ಎಂದು ಜನ ಹೇಳುತ್ತಿದ್ದಾರೆ.
Muthalik Congress V/S Original Congress clash in Mudigere
Leave a comment