ಚಿಕ್ಕಮಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಕಡೂರು ಪೊಲೀಸರು ಬಂದಿಸಿ, ಕೃತ್ಯಕ್ಕೆ ಬಳಸಿದ ಓಮಿನಿ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಕಡೂರು ಪಟ್ಟಣದ ಪ್ರದೀಪ್ ಆಚಾರಿ(೩೩), ಕಡೂರು ಪಟ್ಟಣ ಕೋಟೆ ಬಡಾವಣೆಯ ಸಿದ್ದೇಶ್(೩೫), ವಿಶ್ವಾಸ್ (೧೮) ಬಂಧಿತ ಆರೋಪಿಗಳು, ಜೂ.೨ರಂದು ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಂಸಾಗರ ಗೇಟ್ ಬಳಿ ಅನಾಮಧೇಯ ವ್ಯಕ್ತಿಯ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹವು ಕೊಲೆ ಮಾಡಿ ಸುಟ್ಟ ಸ್ಥಿತಿಯಲ್ಲಿ ದೊರೆತ್ತಿದ್ದು, ಕಡೂರು ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಮೇ.೩೧ರಂದು ಕಡೂರು ಪಟ್ಟಣದ ಕೋಟೆ ಬಡಾವಣೆಯ ಮೀನಾಕ್ಷಿ ಎಂಬುವರು ತಮ್ಮ ಗಂಡ ಸುಬ್ರಹ್ಮಣ್ಯ ನಾಪತ್ತೆಯಾಗಿ ರುವ ಬಗ್ಗೆ ದೂರು ದಾಖಲಿಸಿದ್ದರು. ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಕಡೂರು ಠಾಣೆ ಪೊಲೀಸರು, ಕೊಲೆಯಾಗಿ ಸುಟ್ಟಸ್ಥಿತಿಯಲ್ಲಿ ದೊರೆತ ಮೃತದೇಹ ಮತ್ತು ಮೀನಾಕ್ಷಿ ಅವರ ಗಂಡ ಸುಬ್ರಹ್ಮಣ್ಯ ಎಂಬುದು ಖಾತ್ರಿ ಪಡಿಸಿಕೊಂಡ ಪೊಲೀಸರು ಆರೋಪಿಗಳಾದ ಪ್ರದೀಪ್ ಆಚಾರಿ, ಸಿದ್ದೇಶ್, ವಿಶ್ವಾಸ್‌ನನ್ನು ವಶಕ್ಕೆ ಪಡೆದು ವಿಚಾ ರಣೆಗೆ ಒಳಪಡಿಸಿದಾಗ ಅಕ್ರಮ ಸಂಬಂಧದಿಂದ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಪ್ರದೀಪ್ ಆಚಾರಿ ಮತ್ತು ಸುಬ್ರಹ್ಮಣ್ಯ ಅವರ ಪತ್ನಿ ಮೀನಾಕ್ಷಿ ನಡುವೆ ಅಕ್ರಮ ಸಂಬಂಧವಿದ್ದು, ಸುಬ್ರಹ್ಮಣ್ಯ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಹಿನ್ನಲೆಯಲ್ಲಿ ಪ್ರದೀಪ್ ಆಚಾರಿ ಸಿದ್ದೇಶ್ ಮತ್ತು ವಿಶ್ವಾಸ್‌ಗೆ ಹಣದ ಆಸೆ ತೋರಿಸಿ ಮೇ.೩೧ರಂದು ಕಂಸಾಗರ ಗೇಟ್ ಬಳಿ ಸಿದ್ದೇಶ್ ಅವರ ಮಾರತಿ ಓಮಿನಿಯಲ್ಲಿ ಸುಬ್ರಹ್ಮಣ್ಯನನ್ನು ಕೂರಿಸಿಕೊಂಡು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಮೃತದೇಹವನ್ನು ಸೌದೆ ಮತ್ತು ಪೆಟ್ರೋಲ್ ಬಳಸಿ ಸುಟ್ಟು ಹಾಕಲು ಯತ್ನಿಸಿರುವುದು ತಿಳಿದು ಬಂದಿದೆ.
ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ ಅಮಟೆ ಶ್ಲಾಘೀಸಿ ಬಹುಮಾನ ಘೋಷಿಸಿದ್ದಾರೆ.
Murder by hanging with rope – Three accused arrested
Leave a comment