ತರೀಕೆರೆ : ಪಟ್ಟಣದ ವ್ಯಾಪ್ತಿಯಲ್ಲಿ ಗ್ರಾನೈಟ್ ಅಂಗಡಿಯೊಂದಕ್ಕೆ ಪರವಾನಗಿಯನ್ನು ಕೊಡಿಸಲು ರೂ. ೫೦,೦೦೦ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಲುಕಿದ್ದ ಪುರಸಭಾ ಸದಸ್ಯ ಟಿ.ಎಸ್. ರಂಗನಾಥ್ ರವರನ್ನು ಕಾಂಗ್ರೇಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಅಮಾನತ್ತು ಗೊಳಿಸಿದ್ದಾರೆ.
ಇವರು ಈ ಹಿಂದೆ ಪುರಸಭಾ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದು, ಹಾಲಿ ಸದಸ್ಯರಾಗಿರುವ ಇವರು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ಘಟನೆಯಿಂದ ಪಕ್ಷಕ್ಕೆ ಮುಜುಗುರು ಉಂಟಾಗಿರುತ್ತದೆ.
ಈ ಬಗ್ಗೆ ಪಕ್ಷದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರಿಗೆ ದೂರು ನೀಡಿದ ಮೇರೆಗೆ ಜಿಲ್ಲಾಧ್ಯಕ್ಷ ಡಾ. ಕೆ.ಪಿ. ಅಂಶುಮತ್ ರವರ ನಿರ್ದೇಶನದ ಮೇರೆಗೆ ಅಮಾನತ್ತು ಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
Municipal council member T.S. Ranganath suspended from party
Leave a comment