ತರೀಕೆರೆ: ಮಾಜಿ ಪುರಸಭಾ ಅಧ್ಯಕ್ಷ ಹಾಲಿ ಸದಸ್ಯ ರಂಗನಾಥ್ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಶಾಸಕ ಶ್ರೀನಿವಾಸ್ ಅಪ್ತ ಬಳಗದಲ್ಲಿ ಗುರ್ತಿಸಿ ಕೊಂಡಿದ್ದ ರಂಗನಾಥ್ ತರೀಕೆರೆ ಪಟ್ಟಣದ ಮೂರನೇ ವಾರ್ಡ್ ನಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ. ಸಾರ್ವಜನಿಕರಿಗೆ ಕಿರುಕುಳ ನೀಡಿ ಹಣ ಕೀಳುತ್ತಿದ್ದ ಎಂಬ ವ್ಯಾಪಕ ದೂರುಗಳಿದ್ದವು.
ಸಾರ್ವಜನಿಕರು ಮನೆ ಕಟ್ಟಲು ಪ್ರಾರಂಭಿಸಿದರೆ ಸಾಕು ಅಲ್ಲಗೆ ಬಂದು ಹಣ ಕಿತ್ತುಕೊಳ್ಳುತ್ತಿದ್ದ ಎಂದು ಸಾರ್ವಜನಿಕರು ದೂರಿದ್ದಾರೆ.
ಮಾಜಿ ಪುರಸಭಾ ಸದಸ್ಯ ಟಿ.ಕೆ.ರಮೇಶ್ ಎಂಬುವರಿಂದ ಗ್ರಾನೈಟ್ ಅಂಗಡಿ ಪರವಾನಿಗೆ ಪಡೆಯಲು ಒಂದು ಲಕ್ಷ ರೂ ಲಂಚ ಕೇಳಿ ಇಂದು ಬೆಳಗ್ಗೆ ಐವತ್ತು ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸ್ ರು ಬಂಧಿಸಿದ್ದಾರೆ.
ಲೋಕಾಯುಕ್ತ ಉಪಾಧೀಕ್ಷರಾದ ತಿರುಮಲೇಶ್ ನೇತೃತ್ವದಲ್ಲಿ ಮುಖ್ಯ ಪೊಲೀಸ್ ಪೇದೆಗಳಾದ ಸಿ. ಲೋಕೇಶ್ ವಿಜಯಭಾಸ್ಕರ್ ಪೇದೆಗಳಾದ ಪ್ರಸಾದ್.ಎಂ,ಚಂದ್ರಶೆಟ್ಟಿ,ಮಜೀಬ್ ಖಾನ್,ಶ್ರೀಧರ್, ಸವಿನಯ,ರವಿಚಂದ್ರ,ಮಲ್ಲಿಕಾರ್ಜುನ್ ಮತ್ತು ಚಂದನ್ ಕುಮಾರ್ ದಾಳಿ ನಡೆಸಿ ರಂಗನಾಥ್ ನನ್ನು ಬಂಧಿಸಿದ್ದಾರೆ.
ಸಾರ್ವಜನಿಕರು ಇನ್ನೂ ಕೆಲವು ಸದಸ್ಯರು ವಸೂಲಿ ಯಲ್ಲಿ ನಿರತರಾಗಿದ್ದಾರೆ ಎಂದು ಆರೋಪ ಮಾಡಿ ಅಮೃತ್2 ಯೋಜನೆ ಮತ್ತು ಪೈಪ್ ಲೈನ್ ಅಳವಾಡಿಸಿದಾಗ ಹಾಗೂ ಲೇಔಟ್ ನಿರ್ಮಾಣ ಮಾಡುವವರಿಂದ ವಸೂಲಿ ಮಾಡಿದ್ದಾರೆ ಎಂದು ದೂರಿದ್ದಾರೆ.
Municipal council member Ranganath falls into Lokayukta trap
Leave a comment