ಚಿಕ್ಕಮಗಳೂರು : ಮೂಡಿಗೆರೆಯಿಂದ ಎತ್ತಿನ ಭುಜಕ್ಕೆ ಸಾಗುವ ಮಾರ್ಗದ ಹಳೆಕೋಟೆ ಗ್ರಾಮದ ಬಳಿ ರಸ್ತೆಗೆ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು ಈ ತಡೆಗೋಡೆಗೆ ತುಂಬಲೆಂದು ತಂದಿದ್ದ ಕಲ್ಲು ಹಾಗೂ ಮಣ್ಣಿನ ರಾಶಿಯನ್ನು ಏಕಾಏಕಿ ರಸ್ತೆ ಮೇಲೆ ಸುರಿದಿರುವ ಪರಿಣಾಮ ರಾತ್ರಿ ವೇಳೆ ವಾಹನ ಸವಾರರಿಗೆ ರಸ್ತೆ ಕಾಣದೇ ಅಡಚಣೆ ಉಂಟಾಗಿದೆ. ನಿನ್ನೆ ಸಂಜೆ ಸುರಿದ ಮಳೆಯ ಪರಿಣಾಮ ರಸ್ತೆ ಮೇಲೆ ಸುರಿಸಿದ್ದ ಮಣ್ಣಿನ ಮೇಲೆ ಚಲಿಸಿದ ಮೂರು ಬೈಕ್ ಗಳು ನಿಯಂತ್ರಣ ತಪ್ಪಿ ಬಿದ್ದು ಸವಾರರು ಗಾಯಗೊಂಡಿದ್ದಾರೆ.
ಈ ರಸ್ತೆಯು ಪ್ರಸಿದ್ಧ ಪ್ರವಾಸಿ ತಾಣಗಳಾದ ಎತ್ತಿನಭುಜ ಹಾಗೂ ದೇವರಮನೆಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು ನಿನ್ನೆ ರಾತ್ರಿ ಮತ್ತಷ್ಟು ವಾಹನಗಳು ರಸ್ತೆ ಕಾಣದೇ ಸ್ವಲ್ಪದರಲ್ಲೇ ಬಚಾವ್ ವಾಗಿದೆ. ರಸ್ತೆ ಮೇಲೆ ಕಲ್ಲು, ಮಣ್ಣು ಸುರಿದಿದ್ದರು ಯಾವುದೇ ಸೂಚನಾ ಫಲಕವನ್ನು ಹಾಕದ ಗುತ್ತಿಗೆದಾರ ಹಾಗೂ ಪಿಡಬ್ಲ್ಯೂಡಿ ಇಂಜಿನಿಯರ್ ಕಾರ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Leave a comment