ಚಿಕ್ಕಮಗಳೂರು: ನಗರದಲ್ಲಿ ರಿಲಾಯನ್ಸ್ ಡಿಜಿಟಲ್ ಕಂಪನಿಯ ಗೃಹೋಪಯೋಗಿ ವಸ್ತುಗಳನ್ನು ವಿತರಿಸುವ ವಾಹನದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳು ಕಳ್ಳತನವಾಗಿರುವ ಘಟನೆ ನಡೆದಿದೆ.
ಹಾಸನ ಹಬ್‌ನಿಂದ ವಸ್ತುಗಳನ್ನು ವಿತರಿಸಲು ಬಂದಿದ್ದ ಡೆಲಿವರಿ ಏಜೆಂಟ್ ದಯಾನಿಧಿ ಕೆ.ಆರ್. ಮತ್ತು ಚಾಲಕ ಕಿರಣ್ ಅವರು ನಗರದ ಶಂಕರಪುರದಲ್ಲಿ ಗ್ರಾಹಕರೊಬ್ಬರಿಗೆ ಟಿವಿ ತಲುಪಿಸಲು ಎರಡನೇ ಮಹಡಿಗೆ ಹೋಗಿದ್ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ.
ವಾಹನವನ್ನು ನಿಲ್ಲಿಸಿ ಇಬ್ಬರೂ ಟಿವಿ ಮತ್ತು ಅದರ ಸ್ಟ್ಯಾಂಡ್ ಹಿಡಿದು ಗ್ರಾಹಕರ ಮನೆಗೆ ಹೋದ ಸಮಯವನ್ನು ಹೊಂಚು ಹಾಕಿದ ಅಪರಿಚಿತರು, ವಾಹನದಲ್ಲಿದ್ದ ೧೯ ಮೊಬೈಲ್ ಫೋನ್ಗಳಿದ್ದ ಬಾಕ್ಸ್ ಅನ್ನು ಎಗರಿಸಿದ್ದಾರೆ.
ವಾಪಸ್ ಬಂದು ನೋಡಿದಾಗ ಮೊಬೈಲ್ ಬಾಕ್ಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಕಳ್ಳತನವಾದ ೧೯ ಮೊಬೈಲ್ ಫೋನ್‌ಗಳ ಒಟ್ಟು ಮೌಲ್ಯ ೪,೯೧,೯೮೧ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ದಯಾನಿಧಿ ಅವರು ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳುವಾದ ಮೊಬೈಲ್‌ಗಳ ಐಎಂಇಐ ಸಂಖ್ಯೆಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಇಂತಹ ಬೆಲೆಬಾಳುವ ವಸ್ತುಗಳ ವಿತರಣೆಯ ವೇಳೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
Mobile phones worth lakhs of rupees stolen
Leave a comment