ಚಿಕ್ಕಮಗಳೂರು: ಜಾತ್ಯಾತೀತ ರಾಷ್ಟ್ರ ಭಾರತದಲ್ಲಿ ಜನಿಸಿದ ನಾವು ಬೇರೆ ಬೇರೆ ರಾಷ್ಟ್ರಗಳಿಗೆ ಭೇಟಿನೀಡುತ್ತೇವೆ ಆದರೆ, ನಮ್ಮ ಭಾರತದ ಸಂಸ್ಕೃತಿ, ಪರಂಪರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.
ನಿನ್ನೆ ನಡೆದ ಟಾಟಾ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಜಯಗಳಿಸಿರುವ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮೊದಲು ದೇಶ, ನಂತರ ಗ್ರಾಮ, ಬಳಿಕ ಪಕ್ಷಕ್ಕೆ ಆದ್ಯತೆ ನೀಡುತ್ತೇವೆ ಎಂದರು.
ಭಾರತ-ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ತಿರಂಗಾ ಯಾತ್ರೆಯನ್ನು ನಡೆಸುವ ಮೂಲಕ ಯೋಧರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಿದೆ ಎಂದು ಪ್ರಶಂಸಿಸಿದರು.
ಕರ್ನಾಟಕ ನಮ್ಮ ತಾಯ್ನಾಡು, ಬೆಂಗಳೂರು ಆರ್‌ಸಿಬಿ ಕ್ರಿಕೆಟ್ ತಂಡ ಕಳೆದ ಮೂರು ಬಾರಿ ಅಂತಿಮ ಹಂತಕ್ಕೆ ಹೋಗಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಗೆಲುವಿಗೆ ರಾಜ್ಯದ ಎಲ್ಲಾ ಸ್ನೇಹಿತರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದು ಕಾರಣ ಎಂದು ಹೇಳಿದರು.
ಇದಕ್ಕೆ ಪೂರಕವಾಗಿ ನಗರದ ಅಜಾದ್ ವೃತ್ತದಲ್ಲಿ ನಿನ್ನೆ ಎಲ್ಲಾ ಬಡವರ ಮಕ್ಕಳು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ಎಲ್‌ಇಡಿ ಪರದೆಯನ್ನು ಅಳವಡಿಸಿ ದೇವರಲ್ಲಿ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದು, ಅದೇ ರೀತಿ ಆರ್‌ಸಿಬಿ ತಂಡ ಜಯಗಳಿಸಿ ನಮ್ಮದೇ ಕಪ್ಪು ತಂದಿದೆ ಎಂದು ತಿಳಿಸಿದರು.
ಭಾರತದಲ್ಲಿ ಎಲ್ಲಾ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತೇವೆ. ಆದರೆ, ಕ್ರಿಕೆಟ್ ಬಗ್ಗೆ ಅಭಿಮಾನವಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಕ್ರಿಕೆಟ್ ತಂಡಕ್ಕೆ ಬೆಂಬಲ ಸೂಚಿಸಿ ಶುಭ ಹಾರೈಕೆ ಸಲ್ಲಿಸುತ್ತೇನೆ ಎಂದರು.
ಮುಂದೆ ಜನರಲ್ಲಿರುವ ಕ್ರೀಡಾ ಮನೋಭಾವನೆಯನ್ನು ಉತ್ತೇಜಿಸಲು ಕ್ರಿಕೆಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮನರಂಜನೆ ನೀಡಲಿ ಎಂದು ಹೇಳಿದರು.
MLA Thammaiyya wishes RCB team good luck for victory
Leave a comment