ಚಿಕ್ಕಮಗಳೂರು: ಶಾಸಕ ಹೆಚ್.ಡಿ.ತಮ್ಮಯ್ಯ ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ.ಅದರಲ್ಲೂ ಅಲ್ಲಿನ ರೈತರ ಬದುಕು,ವ್ಯವಸಾಯದ ವಿಧಾನ ತಿಳಿದುಕೊಂಡು ಬಂದು ಕ್ಷೇತ್ರದ ರೈತರ ಬದುಕನ್ನು ಕಟ್ಟಿಕೊಡುವುದು ಖಚಿತ.
ಇಂತಹ ಒಳ್ಳೆಯ ಕೆಲಸಕ್ಕೆ ಬಿಜೆಪಿಯವರು ಅಪಸ್ವರ ತೆಗೆಯುವುದು ಸಹಜ ಆದರೆ ಸ್ವ ಪಕ್ಷದವರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿರುವುದು ಏಕೆ ?
ತಮ್ಮಯ್ಯ ಹೋಗಿರುವ ಪ್ರವಾಸದ ಬಗ್ಗೆ ಡಿ.ಕೆ.ಶಿವಕುಮಾರ್ ನಿಗಿ,ನಿಗಿ ಉರಿಯುತ್ತಿರುವುದು ಏಕೆ ? ಮುಖ್ಯಮಂತ್ರಿ ಸಿದ್ದರಾಮಯ್ಯ ಪುಲ್ ಖುಷಿಯಾಗಿರುವುದು ಏಕೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಹೇಳುತ್ತಿರುವುದು ಏನು ?
ಎಲ್ಲೆಲ್ಲೂ ಸಲ್ಲುವ ತಮ್ಮಯ್ಯ ಯಾವಾಗ ಯಾರ ಜೊತೆಗೆ ಇರುತ್ತಾರೆ ಎಂಬುದು ನಿಗೂಢ. ತಮ್ಮಯ್ಯ ರೈತ ಏನು ಅಲ್ಲ ಸಣ್ಣ ವಯಸ್ಸಿನಲ್ಲಿ ಹೊಲ ಮನೆಗೆ ಹೋಗಿ ಬಂದಿರಬಹುದು ಅಪ್ಪಟ ರೈತ ಅಲ್ಲ ಎನ್ನುತ್ತಲೇ ಪಕ್ಷಂತಾರ ಪ್ರವೀಣನಿಗೆ ಇಂತಹ ವಿದ್ಯೆಯ ಆಗತ್ಯ ಇದೆ ಎನ್ನುತ್ತಾರೆ.
ಪ್ರಾರಂಭದಲ್ಲಿ ಕಾಂಗ್ರೆಸ್ ನಲ್ಲಿ ಗುರ್ತಿಸಿ ಕೊಂಡು ನಂತರ ಜನತಾದಳಕ್ಕೆ ಹೋಗಿ ಬಂದು ಮತ್ತೆ ಕಾಂಗ್ರೆಸ್ ಕದತಟ್ಟಿ ಆಮೇಲೆ ಬಿಜೆಪಿಗೆ ಜಗಿದು ಮತ್ತೆ ಕಾಂಗ್ರೆಸ್ ಗೆ ಬಂದು ಶಾಸಕರಾಗಿರುವುದು ತಮ್ಮಯ್ಯನವರ ತಾಕತ್ತು.
ಇಲ್ಲೇ ಇರುವುದು ಹಿಕ್ಮಾತ್.ಕಾಂಗ್ರೆಸ್ ಗೆ ಬರುವಾಗ ಉಪಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್ ಗೆ ಡೈ ಹೊಡೆದು ನಿಮ್ಮ ಜೊತೆ ನಾನು ಎಂದು ಹೇಳಿ ಟಿಕೆಟ್ ಪಡೆದು ಹಣಕಾಸಿನ ನೆರವು ಪಡೆದ ಹಿನ್ನೆಲೆಯಲ್ಲಿ ಡಿಕೆಶಿ ಶೃಂಗೇರಿ ಗೆ ಭೇಟಿ ನೀಡಿದಾಗ ಡಿಕೆಶಿ ಮುಂದಿನ ಮುಖ್ಯಮಂತ್ರಿ ಎಂದು ಜೈಕಾರ ಕೂಗಿದ್ದನ್ನು ಯಾರು ಮರೆತಿಲ್ಲ.ಆದರೆ ತಮ್ಮಯ್ಯ ತಕ್ಷಣ ಮರೆತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುತ್ತಾರೆ.
ಡಿಕೆಶಿಗೆ ತಮ್ಮಯ್ಯ ಜೈಕಾರ ಕೂಗಿದ್ದನ್ನು ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರು ಮತ್ತು ಜಾತ್ಯಸ್ಥ ಮತದಾರರು ಹಾಗೂ ಮುಖಂಡರು ನೋಡಿ ಕೆಂಡ ಮಂಡಲರಾದರು ಎಂಬ ಕಾರಣಕ್ಕೆ ತೇಪೆ ಸುತ್ತಲು ಪ್ರಾರಂಭಿಸಿ ಪ್ರಸ್ತುತ ವಿದೇಶಿ ಪ್ರವಾಸದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಬಣದವರ ಜೊತೆಗೆ ವಿಮಾನ ಹತ್ತಿದ್ದಾರೆ.
ಇದರಿಂದ ಡಿಕೆಸಿ ನಿಗಿ,ನಿಗಿ ಎನ್ನತೊಡಗಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಸುಳಿದಾಡುತ್ತಿವೆ. ತಮ್ಮಯ್ಯನನ್ನು ಹತ್ತಿರದಿಂದ ಬಲ್ಲವರು ಹೇಳುವುದು ಅದನ್ನೇ ಯಾವ ಸಮಯದಲ್ಲಿ ಯಾರ ಜೊತೆಗೆ ಇರಬೇಕು ಯಾವ ರೀತಿ ಲಾಭ ಪಡೆಯಬೇಕು ಎಂಬುದನ್ನು ಕರತಲಮಲಕ ಮಾಡಿಕೊಂಡಿರುವುದರಿಂದ ಬದುಕುವುದನ್ನು ಕಲಿತಿದ್ದಾರೆ ಎಂದು ಲೇವಡಿ ಮಾಡುತ್ತಿದ್ದಾರೆ.
ಯಾರು ಏನಾದರೂ ಹೇಳಲಿ ನನ್ನ ಆಟ ನನ್ನದು ಎಂದು ವಿದೇಶದಲ್ಲಿ ಸ್ಟಡಿ ಮಾಡುತ್ತಿದ್ದಾರೆ ಎಂದು ಅವರನ್ನು ಬಲ್ಲವರ ಮಾತು.
MLA Tammaiah’s foreign tour saying “My game is mine”
Leave a comment