ಚಿಕ್ಕಮಗಳೂರು: ಭೂಮಿಯಲ್ಲಿ ಜನಿಸಿದ ಮನುಜ ಕೊನೆಗೊಂದು ದಿನ ದೇಹವನ್ನು ತ್ಯಜಿಸಲೇಬೇಕು. ಈ ಮಧ್ಯೆದಲ್ಲಿ ತಾಯ್ನಾಡಿನ ಋಣ ತೀರಿಸಲು ಹಾಗೂ ಭಾರತವನ್ನು ಗಟ್ಟಿಗೊಳಿಸಲು ಸೈ ನಿಕ ವೃತ್ತಿ ಅತ್ಯಂತ ಶ್ರೇಷ್ಟವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ವಿ.ಹನುಮಂ ತಪ್ಪ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಶನಿವಾರ ಏರ್ಪಡಿಸಿದ್ಧ ೨೬ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪ್ರಸ್ತುತ ಕಾಲಮಾನದಲ್ಲಿ ದೇಶವನ್ನು ಕಾಯುವ ಯೋಧರನ್ನು ಸಮಾಜಕ್ಕೆ ಸ್ಪೂರ್ತಿ ಹಾಗೂ ನಾಯಕ ರಾಗಿ ಕಾಣಬೇಕು. ಆದರೆ ಇಂದಿನ ಯುವಕರು ಸಿನಿಮಾ ನಟರನ್ನೇ ಬದುಕಿನ ನಾಯಕರಾಗಿ ರೂಪಿಸಿಕೊ ಳ್ಳುತ್ತಿದೆ. ಅಲ್ಲದೇ ಮಾದಕದ್ರವ್ಯಗಳಂಥ ದುಶ್ಚಟಕ್ಕೆ ಬಲಿಯಾಗಿ ಅಮೂಲ್ಯ ಜೀವನದ ದಿಕ್ಕನ್ನು ತಪ್ಪುತ್ತಿದೆ ಎಂ ದು ತಿಳಿಸಿದರು.
ಯುವಪೀಳಿಗೆಗೆ ಸಲೀಸಾಗಿ ಸಿಗುತ್ತಿರುವ ಮಾದಕವಸ್ತುಗಳಿಂದ ಭವಿಷ್ಯದ ಕನಸನ್ನು ಲೆಕ್ಕಿಸದೇ ಕೆಲವು ನಿಮಿಷಗಳ ಹಮಲಿಗಾಗಿ ಇಡೀ ಜೀವನವನ್ನು ಹಾಳುಮಾಡಿಕೊಳ್ಳುತ್ತಿದೆ. ಈ ಚಟದಿಂದ ಹೊರತರಲು ಪಾ ಲಕರು ಹೆಚ್ಚು ಕಾಳಜಿ ವಹಿಸಬೇಕು. ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಚಲನವಲನಗಳ ಬಗ್ಗೆ ಗಮಹರಿಸು ತ್ತಿರಬೇಕು ಎಂದು ಕಿವಿಮಾತು ಹೇಳಿದರು. ಇಂದಿನ ಯುವಕರಿಗೆ ಕ್ರಿಕೇಟ್ ಬೆಟ್ಟಿಂಗ್ ಹಣ ಹೂಡಿಸುವಂಥ ಕ್ರೀಡೆಯಾಗಿದೆ. ಅನೇಕ ಯುವಕರು ಪ್ರೋಕ್ಸೋ ಪ್ರಕರಣಗಳಲ್ಲಿ ಸಿಲುಕಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಯೌವ್ವನದಲ್ಲಿ ದೇಶಸೇವೆಗಾಗಿ ಮುಡಿಪಿ ಡುವ ಪ್ರಾಯವನ್ನು ಸಮಾಜಕ್ಕೆ ಮಾರಕವಾಗಿರುವ ಚಟಗಳಿಗೆ ಬಲಿಯಾಗುತ್ತಿರುವುದು ವಿಷಾಧಕರ ಸಂಗತಿ ಎಂದರು.
ಮಾಜಿ ಸೈನಿಕರು ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಇಂದು ವೀರ್ ಸಹಾಯಕ್ ಪರಿ ವಾರ್ ಯೋಜನೆಯನ್ನು ಜಾರಿಗೊಳಿಸಿ ಉಚಿತ ಕಾನೂನು ನೆರವು ಒದಗಿಸಲು ಚಾಲನೆ ನೀಡಲಾಗಿದ್ದು. ಇದರಿಂದ ನಿವೃತ್ತ ಸೈನಿಕರ ಭೂ ಒತ್ತುವರಿ, ಕೌಟುಂಬಿಕ ಕಲಹಗಳನ್ನು ಬಗೆಹರಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕೆ.ಆರ್.ಎಸ್. ಆಸ್ಪತ್ರೆ ಹೃದ್ರೋಗ ತಜ್ಞ ಡಾ|| ಶ್ರೀಧರ್ ಮಾತನಾಡಿ ಭವಿಷ್ಯದ ಭಾರತವನ್ನು ಕಾಪಾಡಲು ಅಂದಿನ ಯೋಧಕರು ವರ್ತಮಾನದ ಬದುಕನ್ನು ದೇಶಕ್ಕಾಗಿ ಹುತಾತ್ಮರಾದ ಕಾರಣ ಭಾರತದ ಅಸ್ಥಿತ್ವವನ್ನು ಉಳಿಸಿಕೊಂಡು ಯಶಸ್ವಿಯಾಗಿದ್ದು ಶೃತುದೇಶದ ಅನೇಕ ಯುದ್ಧಗಳಲ್ಲಿ ಅತ್ಯಂತ ಕ್ಲಿಷ್ಟಕರ ಯುದ್ದವೇ ಕಾ ರ್ಗಿಲ್ ಆಗಿತ್ತು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಞತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್ ಕಾರ್ಗಿಲ್ ಯುದ್ಧ ದಲ್ಲಿ ಸುಮಾರು ೫೨೭ ವೀರ ಯೋಧರು ಹುತಾತ್ಮರಾದರು. ಸುಮಾರು ೧೩೬೯ ಹೆಚ್ಚು ಯೋಧರು ಅಂಗಾಂ ಗ ವೈಫಲ್ಯದಿಂದ ತುತ್ತಾದರು. ಈ ಪೈಕಿ ವೀರ ಯೋಧರಾದ ನಾಲ್ಕು ಮಂದಿಗೆ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ ಲಕ್ಷ್ಮಣಗೌಡ, ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕೃಷ್ಣೇ ಗೌಡ, ಕಾರ್ಯದರ್ಶಿ ಸಿ.ಕೆ.ಗೋಪಾಲಕೃಷ್ಣ, ಸಹ ಕಾರ್ಯದರ್ಶಿ ರಾಜೇಗೌಡ, ಸದಸ್ಯರಾದ ಹೆಚ್.ಡಿ. ಸುರೇಶ್, ಸಿ.ಟಿ.ಗೋಪಾಲ್, ಪಿ.ಪ್ರಕಾಶ್, ದೈವನಯ, ಸುಶ್ಮಿತಾ ಮತ್ತಿತರರು ಹಾಜರಿದ್ದರು.
Military service is the best way to repay the debt to the motherland.
Leave a comment