Home namma chikmagalur chikamagalur ಮೃತ ಕಾರ್ಮಿಕ ಮಹಿಳೆಯ ಶವವಿಟ್ಟು ಬೃಹತ್‌ ಪ್ರತಿಭಟನೆ
chikamagalurHomeLatest Newsnamma chikmagalur

ಮೃತ ಕಾರ್ಮಿಕ ಮಹಿಳೆಯ ಶವವಿಟ್ಟು ಬೃಹತ್‌ ಪ್ರತಿಭಟನೆ

Share
Share

ಬಾಳೆಹೊನ್ನೂರು: ಹುಣಸೆಹಳ್ಳಿಪುರ ಸಮೀಪ ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬೋರಮ್ಮ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಮೃತ ಬೋರಮ್ಮನ ಶವವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಶಿವಮೊಗ್ಗಕ್ಕೆ ರವಾನಿಸುವ ಸಂದರ್ಭದಲ್ಲಿ ಕಡಬಗೆರೆ ಬಳಿ ವಾಹನವನ್ನು ಅಡ್ದಗಟ್ಟಿ ಶವ ಕೆಳಗಿಳಿಸಿ ಗ್ರಾಮಸ್ಥರು ಪ್ರತಿಭಟಿಸಿದರು.

ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿಭಟಿಸಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕಳೆದವಾರ ಮಲ್ಲಿಗೆಖಾನ್ ಸಮೀಪ ಹಾವೇರಿ ಮೂಲದ ಯಲ್ಲಪ್ಪ ಎಂಬಾತ ಆನೆ ದಾಳಿಯಿಂದ ಮೃತ ಪಟ್ಟ ಘಟನೆ ಮಾಸುವ ಮುನ್ನವೇ ಬೋರಮ್ಮನನ್ನು ತುಳಿದು ಸಾಯಿಸಿರುವುದು ರೈತರ ಆಕ್ರೋಶಕ್ಕೆ. ಕಾರಣವಾಗಿದೆ.

ಶೃಂಗೇರಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದರು ಕೂಡ ಗ್ರ್ರಾಮಸ್ಥರು, ಅರಣ್ಯ ಸಚಿವರು ಸ್ಥಳಕ್ಕೆ ಬರಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಕಡಬಗೆರೆಯಲ್ಲಿ ಶಾಮಿಯಾನ ಹಾಕಿ ಶವವನ್ನು ಫ್ರೀಜರ್ನಲ್ಲಿಟ್ಟು ಪ್ರತಿಭಟಿಸುತ್ತಿದ್ದಾರೆ.

ಶೃಂಗೇರಿ ಖ್ಶೇತ್ರದ ಮಾಜಿ ಶಾಸಕ ಡಿ ಎನ್ ಜೀವರಾಜ್ ಮಾತನಾಡಿ ಯಾರಾದರೂ ಸತ್ತರೆ ಚಕ್ ಹಿಡಿದು ಪರಿಹಾರ ನೀಡಲು ಬರುತ್ತಾರೆ. ಸಾವಿಗೆ ಬೆಲೆ ಕಟ್ಟುವುದು ಸರಿಯಲ್ಲ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಮಲೆನಾಡಿನಲ್ಲಿ ಕಾಡಾನೆ ದಾಳಿಯಿಂದ ರೈತರ ಹಾಗು ಕಾರ್ಮಿಕರ ನಿರಂತರ ಸಾವಿಗೆ ಅರಣ್ಯ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷವೇ ಕಾರಣ. ಪ್ರತೀ ಬಾರಿ ಸಾವಾದಾಗ ಪರಿಹಾರ ನೀಡಿ ಕೈಕಟ್ಟಿ ಕುಳಿತಿರುವ ಈ ಸರ್ಕಾರ ರೈತರ ಜೀವಕ್ಕೆ ಲಕ್ಷಗಳಲ್ಲಿ ಬೆಲೆ ಕಟ್ಟುತ್ತಿದೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ತಿಳಿಸಿದರು.

ಇನ್ನು ಮುಂದೆ ಈ ತರಹದ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರಕ್ಕಾಗಿ ರೈತರೆಲ್ಲರೂ ಒಗ್ಗೂಡಿ ಹೋರಾಡುವ ಅಗತ್ಯವಿದ್ದು, ಈ ಹೋರಾಟಕ್ಕೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಸಂಪೂರ್ಣ ಬೆಂಬಲವನ್ನು ಕೊಡುತ್ತೇವೆ. ಹೋರಾಟದ ರೂಪುರೇ?ಗಳ ಕುರಿತು ಸ್ಥಳೀಯ ಹೋರಾಟ ಸಮಿತಿಗಳು ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೂ ನಮ್ಮ ಒಕ್ಕೂಟವು ಬದ್ಧವಾಗಿರುತ್ತದೆ ಎಂದು ಹೇಳಿದರು.

ಕಡಬಗೆರೆಯಲ್ಲಿ ಶವವಿಟ್ಟು ಪ್ರತಿಭಟಿಸಿದ ಹಿನ್ನಲೆಯಲ್ಲಿ ವಿರಾಜ್ ಪೇಟೆ ಬೈಂದೂರ್ ರಾಜ್ಯ ಹೆದ್ದಾರಿಯಲ್ಲಿ ಸುಮಾರು ೨ ಕಿಲೋಮೀಟರ್ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳದಲ್ಲಿ ಅಡಿಷನ್ ಎಸ್ಪಿ, ಕೊಪ್ಪ ಡಿ ವೈ ಎಸ್ ಪಿ, ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು ಹಾಗೂ ಪೋಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಕಡಬಗೆರೆ ಬಸ್ ಸ್ಟ್ಯಾಂಡ್ ಬಳಿ ಶವವಿಟ್ಟು ಪ್ರತಿಭಟಿಸುತ್ತಿರುವುದು

Massive protest over the body of a deceased worker woman

Share

Leave a comment

Leave a Reply

Your email address will not be published. Required fields are marked *

Don't Miss

ಸಂತ ಸೇವಾಲಾಲ್ ಜಯಂತಿಯಲ್ಲಿ ಸರ್ಕಾರದ ವಿರುದ್ಧದ ಆಕ್ರೋಶ

ಚಿಕ್ಕಮಗಳೂರು: ಕಾಫಿನಾಡಿನ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವು ಸಂಭ್ರಮದ ಬದಲು ಸರ್ಕಾರದ ವಿರುದ್ಧದ ಆಕ್ರೋಶದ ಅಖಾಡವಾಗಿ ಮಾರ್ಪಟ್ಟಿತು. ಸಮಾರಂಭದಲ್ಲಿ ಶಾಸಕ ತಮ್ಮಯ್ಯ ಅವರು ಭಾಷಣ ಮಾಡಲು...

ಶ್ರೀ ಸಂತ ಸೇವಾಲಾಲ್ ತತ್ವಾದರ್ಶಗಳು ಮಾsರ್ಗದರ್ಶಿ:

ಚಿಕ್ಕಮಗಳೂರು:  ಹಿಂಸೆ, ಅಸಮಾನತೆ ಇರುವ ಪ್ರಸ್ತುತ ಸಮಾಜಕ್ಕೆ ಶ್ರೀ ಸಂತ ಸೇವಾಲಾಲ್ ಅವರ ತತ್ವಾದರ್ಶಗಳು ಮಾರ್ಗದರ್ಶನ ನೀಡುತ್ತವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ, ಬಂಜಾರ ಸಂಘದಿಂದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ...

Related Articles

ಕಾಡಾನೆ ದಾಳಿಗೆ ಮತ್ತೋಂದು ಕಾರ್ಮಿಕ ಮಹಿಳೆ ಸಾವು

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಒಂದೇ ವಾರದಲ್ಲೇ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ. ಜಿಲ್ಲೆಯ ಮಲೆನಾಡು...

ಲಾಠಿ ಚಾರ್ಜ್ ಖಂಡಿಸಿ ಇಂದು ಶೃಂಗೇರಿ ಬಂದ್

ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಶವವನ್ನು ರಾಜ್ಯ ಹೆದ್ದಾರಿಯಲ್ಲಿ ಇಟ್ಟುಕೊಂಡು ಬೆಳಗ್ಗೆಯಿಂದ ನಡೆಸುತ್ತಿದ್ದ ಪ್ರತಿಭಟನೆ...

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಚಿಕ್ಕಮಗಳೂರು: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನೆನ್ನೆ ಪೊಲೀಸ್ ಕಿರುಕುಳಕ್ಕೆ ವಿಧವೆ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವಂತಹ...

ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ಕಾಡಾನೆ ಸೆರೆ

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಮಲೆನಾಡಿಗರ ನಿದ್ದೆಗೆಡಿಸಿ, ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ರಕ್ಕಸ ಕಾಡಾನೆ ಕೊನೆಗೂ...