Home namma chikmagalur chikamagalur ಕಾರ್ಮಿಕ ವಿರೋಧಿ ನಡೆ ಖಂಡಿಸಿ ಬೃಹತ್ ಪ್ರತಿಭಟನೆ
chikamagalurHomeLatest Newsnamma chikmagalur

ಕಾರ್ಮಿಕ ವಿರೋಧಿ ನಡೆ ಖಂಡಿಸಿ ಬೃಹತ್ ಪ್ರತಿಭಟನೆ

Share
Share

ಚಿಕ್ಕಮಗಳೂರು:  ಕಾರ್ಮಿಕ ವಿರೋಧಿ ನಡೆ ಅನುಸರಿಸುತ್ತಿರುವ ಸರ್ಕಾರಗಳ ವಿರುದ್ಧ ಗುರುವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಎಐಟಿಯುಸಿ, ಪ್ಲಾಂಟೇಷನ್ ಯೂನಿಯನ್, ಬಿಸಿಯೂ ಟ-ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನೂರಾರು ಕಾರ್ಮಿಕರು ಧರಣಿ ನಡೆಸಿ, ಅಂಚೆ ಕಚೇರಿ ಗೆ ಮುತ್ತಿಗೆಗೆ ಯತ್ನಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.

ಕಾರ್ಮಿಕರ, ಮಹಿಳೆಯರ, ರೈತರ, ಯುವಜನರ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿದ್ಧ ಪ್ರತಿಭಟನೆಯಲ್ಲಿ ತಾಲ್ಲೂಕು ಕಚೇರಿಯಿಂದ ಆಜಾದ್‌ಪಾರ್ಕ್ ವೃತ್ತದವರೆಗೂ ಸರ್ಕಾ ರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಂಚೆ ಕಚೇರಿಗೆ ಮುತ್ತಿಗೆಗೆ ಯತ್ನಿಸಿದಾಗ ಪೊಲೀಸ್ ಅಧಿಕಾರಿ ಗಳು ತಡೆಹಿಡಿದು ಕಾರ್ಯಕರ್ತರನ್ನು ಬಂಧನಕ್ಕೆ ಒಳಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ಲಾಂಟೇಷನ್ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ದೇಶದಲ್ಲಿ ಶೇ.೯೦ರಷ್ಟು ದುಡಿಯುವ ಜನರಿಗೆ ಸರ್ಕಾರಗಳು ಜನವಿರೋಧಿ ಕಾನೂನು ಕಾ ಯ್ದೆಗಳಡಿ ನೇಣಿಗೆ ಕಟ್ಟಿಹಾಕಿ, ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಈ ವಿರುದ್ಧ ಧ್ವನಿಗೂಡಿಸುವ ಪ್ರತಿಭಟನಾ ಕಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಕಾರ್ಮಿಕರ ಬದುಕಿಗೆ ಮಾರಕವಾಗಿರುವ ಕೇಂದ್ರ ಸರ್ಕಾರದ ಹೊಸ ನಾಲ್ಕು ಕೋರ್ಡ್ ಹಿಂಪಡೆಯ ಬೇಕು. ಮನರೇಗಾ ಹೆಸರನ್ನು ಬದಲಾವಣೆ ಮಾಡಬಾರದು. ರೈತರಿಗೆ ಜಾರಿ ತಂದಿರುವ ಶ್ರಮಶಕ್ತಿ ಕಾನೂ ನು ಬದಲಾವಣೆ ಮಾಡಬೇಕು ಹಾಗೂ ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ ಹನ್ನೇರಡು ವರ್ಷಗಳÀ ಕೇಂದ್ರ ಪಾಲನ್ನು ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರದ ಹೊಸ ಕಾರ್ಮಿಕ ಕಾಯ್ದೆಯಲ್ಲಿ ಪ್ರತಿ ಕಾರ್ಮಿಕರಿಗೆ ೧೭೮ ರೂ. ವೇತನ ನಿಗಧಿಗೊಳಿಸಿದೆ. ಆದರೆ ಇಂದಿನ ಬೆಲೆಏರಿಕೆ ನಡುವೆ ಕಾರ್ಮಿಕರು ೧೭೮ ರೂ.ಗಳಲ್ಲಿ ಪ್ರತಿದಿನ ಜೀವನ ನಡೆಸಲು ಅಸಾಧ್ಯ. ಅಲ್ಲದೇ ಕೇಂದ್ರದ ಹೊಸ ಕಾಯ್ದೆಗೆ ರಾಜ್ಯಸರ್ಕಾರ ಪಾತ್ರ ನಿರ್ವಹಿಸುತ್ತಿದ್ದು, ಈ ಕಾಯ್ದೆಯು ಕಾರ್ಮಿಕರಿಗೆ ನಷ್ಟವಾಗಿ ದೊಡ್ಡ ದೊಡ್ಡ ಉದ್ಯಮಿ, ಕಾರ್ಪೋರೇಟ್‌ಗಳಿಗೆ ಲಾಭ ಮಾಡಿಕೊಡಲಿವೆ ಎಂದರು.

ಬಿಸಿಯೂಟ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯ್‌ಕುಮಾರ್ ಮಾತನಾ ಡಿ ಕ್ಷೇತ್ರದ ಸಂಸದರು ಅಧಿವೇಶನದಲ್ಲಿ ಕಾರ್ಮಿಕರಿಗೆ ಅನುಕೂಲವಾಗುವ ಚರ್ಚೆಗಳು ನಡೆಸದೇ, ಕೇವಲ ರಾಹುಲ್, ಇಂದಿರಾ, ನೆಹರು ಬಗ್ಗೆ ಮಾತನಾಡಿ ಕಾಲಹರಣ ಮಾಡುತ್ತಿದ್ದು, ಸಂಸದರೇ ಮೊದಲು ಕಾರ್ಮಿ ಕರು ಮತ್ತು ಅವರ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದರು.

ಕೇಂದ್ರ ಸರ್ಕಾರದಂತೆ ರಾಜ್ಯಸರ್ಕಾರವು ಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯದ ಲ್ಲಿ ಅಧಿಕಾರಕ್ಕೂ ಮುನ್ನ ಕಾರ್ಮಿಕರಿಗೆ ಆರನೇ ಗ್ಯಾರಂಟಿ ಘೋಷಣೆ ಮಾಡಿತು. ಆದರೆ ಎರಡೂವರೆ ವಷ ðಗಳು ಕಳೆದರೂ ಕಾರ್ಮಿಕರಿಗೆ ಗ್ಯಾರಂಟಿ ಭಾಗ್ಯ ಲಭ್ಯವಾಗಲಿಲ್ಲ. ಉಳ್ಳವರ ಮಕ್ಕಳು ಪದವಿದರರಾದರೆ, ಕಾರ್ಮಿಕರ ಮಕ್ಕಳು ಕಾರ್ಮಿಕರಾಗೇ ಉಳಿದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಮಾತನಾಡಿ ದೇಶದ ಬಹುತೇಕ ಕಾರ್ಮಿಕರೇ ದೇಶದ ಆಧಾರಸ್ಥಂಭ. ಆ ದುಡಿಯವವರಿಗೆ ಸಬ್ಸಿಡಿ ರೂಪದಲ್ಲಿ ಸಾಲಸೌಲಭ್ಯ ಕಲ್ಪಿಸದ ಕೇಂದ್ರ ಸರ್ಕಾರ ಅದಾನಿ, ಅಂಬಾನಿ ಸೇರಿದಂತೆ ಶ್ರೀಮಂತ ವರ್ಗದಕ್ಕೆ ಸಬ್ಸಿಡಿ ನೀಡುತ್ತಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿದ ಪ್ರಧಾನಿಗಳು, ಎರಡು ಸಾವಿರ ಉದ್ಯೋಗವನ್ನೇ ನೀಡದೇ ಯುವಜನರಿಗೆ ಬದುಕಿನಲ್ಲಿ ಆಟವಾಡುತ್ತಿದೆ ಎಂದು ದೂರಿದರು.

ಕೇಂದ್ರ ಸರ್ಕಾರದ ದ್ವಂದ ನಿಲುವು, ರೈತ-ಕಾರ್ಮಿಕರ ವಿರೋಧೀ ಕಾಯ್ದೆಗಳ ಬಗ್ಗೆ ಜನತೆ ಎಚ್ಚೆತ್ತು ಕೊಂಡು ಚಳುವಳಿ ನಡೆಸದಿದ್ದಲ್ಲಿ ಮುಂದೊಂದು ದಿನ ಸಂಪೂರ್ಣ ದೇಶವನ್ನು ವಿದೇಶಕ್ಕೆ ಮಾರಾಟ ಮಾ ಡುವ ಮೂಲಕ ವಿದೇಶಿಗರ ಆಳ್ವಿಕೆಯಲ್ಲಿ ದೇಶದ ಪ್ರಜೆಗಳು ಮತ್ತೊಮ್ಮೆ ಗುಲಾಮರಂತೆ ಜೀವಿಸಬೇಕು ಎಂ ದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ರಮೇಶ್, ಅಂಗವನವಾಡಿ ಕಾಯ ðಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರೀಟಾ ಫರ್ನಾಂಡೀಸ್, ಮುಖಂಡರಾದ ಇಂದುಮತಿ, ರೈತ ಸಂಘ ಹಾ ಗೂ ಪ್ರಗತಿಪರ ಮುಖಂಡರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಹಾಜರಿದ್ದರು.

Massive protest against anti-labor move

Share

Leave a comment

Leave a Reply

Your email address will not be published. Required fields are marked *

Don't Miss

ಬಿಜೆಪಿ ಹೊಸದಾಗಿ ಗಾಂಧೀಜಿ ಬಗ್ಗೆ ಮಾತನಾಡಲು ಹೊರಟಿರುವುದು ಹಾಸ್ಯಾಸ್ಪದ

ಚಿಕ್ಕಮಗಳೂರು: ‘ಗಾಂಧಿ ಹೆಸರಿನಲ್ಲಿ ಕಾಂಗ್ರೆಸ್ಸಿಗರು ನುಂಗಣ್ಣರು’ ಎಂದು ಬಿಜೆಪಿ ನೀಡಿರುವ ಜಾಹೀರಾತು ಮತ್ತು ಟೀಕೆಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಚಿಕ್ಕಮಗಳೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಹಾತ್ಮ ಗಾಂಧೀಜಿಯವರ...

ಸಂತೆ ಸಮಸ್ಯೆ ಬಗೆಹರಿದಿದ್ದಲ್ಲಿ ವ್ಯಾಪಾರ ನಗರಸಭೆ ಆವರಣಕ್ಕೆ

ಚಿಕ್ಕಮಗಳೂರು:  ಸಂತೆ ಮೈದಾನಕ್ಕೆ ಅವಶ್ಯವಿರುವ ಮೂಲ ಸೌಕರ್ಯವನ್ನು ನಗರಸ ಭೆ ಆಡಳಿತ ಪೂರೈಸಬೇಕು. ನಿರ್ಲಕ್ಷಿಸಿದರೆ ಸಂಪೂರ್ಣ ಸಂತೆ ವ್ಯಾಪಾರವನ್ನು ನಗರಸಭಾ ಆವರಣಕ್ಕೆ ಸ್ಥಳಾಂತರಿಸುತ್ತೇವೆ ಎಂದು ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ...

Related Articles

ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಸಿಬ್ಬಂದಿಗಳ ಮನವಿ

ಚಿಕ್ಕಮಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯ ಮಕ್ಕಳ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಕ್ಕಳ ರಕ್ಷಣಾ ಸಿಬ್ಬಂದಿಗಳು...

ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ ಸರ್ಕಾರಿ ನೌಕರ ಪತ್ತೆ

ಚಿಕ್ಕಮಗಳೂರು: ಕಡೂರು ಶಾಸಕರ ಪಿಎ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿದ್ದ ಸರ್ಕಾರಿ ನೌಕರ ಇಂದು ...

ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರ ಸಾವು

ಚಿಕ್ಕಮಗಳೂರು: ಜಿಲ್ಲೆಯ ಎರಡು ಸಂಭವಿಸಿದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಯರೇಹಳ್ಳಿ ಗ್ರಾಮದಿಂದ ಧರ್ಮಸ್ದಳಕ್ಕೆ...

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಎ.ಎಸ್.ಶಂಕರ್ ನಾರಾಯಣ್

ತರೀಕೆರೆ: ತರೀಕೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬೆಂಗಳೂರು ಆಕಾಶ ವಾಣಿ ಕಾರ್ಯಕ್ರಮ ನಿರ್ದೇಶಕರಾದ ಡಾ.ಎ.ಎಸ್.ಶಂಕರ್...