ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದು ಅಸೋಸಿಯೇಶನ್ ಅಧ್ಯಕ್ಷ ಡಿ.ಟಿ.ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ನಗರದ ಚಾಲನಾ ತರಬೇತಿ ಸಂಸ್ಥೆಗಳಿಂದ ಜ.೩೦ ರಂದು ಆರ್‌ಟಿಓ ಕಚೇರಿಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ್ದು, ಅದೇ ದಿನ ಎಲ್ಲ ಡ್ರೈವಿಂಗ್ ಶಾಲೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ನೂತನ ಅಧ್ಯಕ್ಷರಾಗಿ ಡಿ.ಟಿ.ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಎಚ್.ಪಿ.ಸುರೇಶ್(ಪ್ರಧಾನಕಾರ್ಯದರ್ಶಿ), ತೀರ್ಥಸ್ವಾಮಿ (ಉಪಾಧ್ಯಕ್ಷ), ಸುಧೀರ್(ಕಾರ್ಯಾಧ್ಯಕ್ಷ), ಇನಾಯತ್(ಸಹಕಾರ್ಯದರ್ಶಿ), ಜಯಲಕ್ಷ್ಮಿ(ಖಜಾಂಚಿ) ಆಗಿ ಆಯ್ಕೆಯಾಗಿದ್ದಾರೆ. ಕೆ.ಆರ್.ಅನಿಲ್‌ಕುಮಾರ್, ನೂರುಲ್ಲಾಖಾನ್, ಸತ್ಯನಾಥ್, ಬಲರಾಂನಾಯಕ್ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಎಲ್ಲಶಾಲಾ ಕಾಲೇಜುಗಳಿಗೆ ಭೇಟಿನೀಡಿ ಜಾಗೃತಿ ಮೂಡಿಸುವುದು, ರಕ್ತದಾನ ಶಿಬಿರ ಏರ್ಪಡಿಸುವುದು. ತರಬೇತಿ ಶಾಲೆಗಳಲ್ಲಿ ಉತ್ತಮವಾದ ಚಾಲನಾ ತರಬೇತಿ ನೀಡಲು ಸೂಕ್ತ ಸಲಹೆಗಳನ್ನು ಎಲ್ಲ ಚಾಲನಾ ತರಬೇತಿ ಶಾಲೆಗಳಿಗೆ ನೀಡಲಾಗುವುದು ಎಂದರು.
ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸರಕಾರದ ವತಿಯಿಂದ ನಮ್ಮ ಜಿಲ್ಲೆಯಲ್ಲಿ ಸುಮಾರು ೪೨ ಚಾಲನ ತರಬೇತಿ ಶಾಲೆಗಳು ಮಾನ್ಯತೆ ಪಡೆದಿದ್ದು ಜಿಲ್ಲೆಯಲ್ಲಿ ವೈಜ್ಞಾನಿಕ, ಸುಸಜ್ಜಿತವಾದ ಚಾಲನಾ ಪರೀಕ್ಷೆಗೆ ಉಪಯುಕ್ತವಾದ ಚಾಲನ ಪಥ (ಡ್ರೈವಿಂಗ್ ಟ್ರ್ಯಾಕ್) ಮಂಜೂರು ಮಾಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದ್ದು ಈ ಬಗ್ಗೆ ಶೀಘ್ರದಲ್ಲಿ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಪದಾಧಿಕಾರಿಗಳಾದ ನೂರುಲ್ಲಾಖಾನ್, ಸುರೇಶ್ ಹೆಚ್.ಪಿ, ತೀರ್ಥಸ್ವಾಮಿ ಮತ್ತಿತರರು ಇದ್ದರು.
Malenadu Driving School Association established in the district
Leave a comment