ಚಿಕ್ಕಮಗಳೂರು : ಗಡಿನಾಡು ಕಾಸರಗೋಡಿನಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕೇರಳದ ಕನ್ನಡ ಮಕ್ಕಳಿಗೆ ಕನ್ನಡ ಗೀತೆಗಳ ಶಿಬಿರ ನಡೆಸಲಾಯಿತು. ಈ ಕಾರ್ಯಾಗಾರವನ್ನು ಚಿಕ್ಕಮಗಳೂರಿನ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಲ್ಲಿಗೆ ಸುಧೀರ್ ನಡೆಸಿಕೊಟ್ಟರು ಸಮ್ಮೇಳನದಲ್ಲಿ 500 ಹೆಚ್ಚು ಮಕ್ಕಳು ಭಾಗವಹಿಸಿದ್ದರು. ರಾಜ್ಯಾಧ್ಯಕ್ಷ ಸಾಲುಮರದ ಚ .ನ.ಅಶೋಕ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಟಿ ಎಂ ಶಾಹಿದ್ ಸಿದ್ದೇಶ್,ಮಹದೇವ್ ಸಚ್ಚಿನ್ ನೀಲ ಸ್ವಾಮಿ ಪಾಲ್ಗೊಂಡಿದ್ದರು.
ಚಿಕ್ಕಮಗಳೂರಿಂದ ಕಾಸರಗೋಡಿಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಲ್ಲಿಗೆ ಸುಧೀರ್ ತಮ್ಮ ಭೇಟಿಯ ಅನುಭವ ಹಂಚಿಕೊಂಡಿದ್ದು, ಈ ರೀತಿ
ಕನ್ನಡ ಭಾಷೆಯ ಅಸ್ಮಿತೆಯ ಸಂಕೇತವಾದ ಕಾಸರಗೋಡು ನಮ್ಮನ್ನು ಪುನೀತಗೊಳಿಸಿತು. ಕಯ್ಯಾರ ಕಿಞ್ಞಣ್ಣ ರೈ ರವರ ಜನ್ಮ ಭೂಮಿಯಲ್ಲಿ ಅವರದ್ದೇ ಕವನದ ಸಾಲು ಬೆಂಕಿ ಬಿದ್ದಿದೆ ಮನೆಗೆ ಹೋ ಬೇಗ ಬನ್ನಿ ಎನ್ನುತ್ತಾ ನಮ್ಮ ಮನದಲ್ಲಿ ಮಿಡಿದು ಕನ್ನಡದ ಕಿಚ್ಚು ಹುಚ್ಚು ಹೊಳೆಯಾಗಿ ಹರಿಯುವುದು ನೋಡಾ ಎಂದು, ಮಕ್ಕಳ ಕಲರವ ಹಕ್ಕಿಗಳಂತೆ ವಿಜೃಂಭಣೆಗೊಂಡಿತು. ಜೊತೆಗೆ ಯಕ್ಷಗಾನದ ವೇಶಭೂಷಣಗಳು ನೋಡಿ ಮೈ ಮನ ರೋಮಾಂಚನ ಗೊಂಡಿತು ಅದನ್ನೊಮ್ಮೆ ಹಾಕಿಕೊಂಡು ಸಂಭ್ರಮಿಸಬೇಕು ಎನಿಸಿತ್ತು, ಕಾಡುಗಳಿಂದ ಆವೃತಗೊಂಡ ನಾಡು ಕನ್ನಡ ನಾಡು ನಮ್ಮ ಕನ್ನಡದ ಅಸ್ಮಿತೆಯ ಸಂಕೇತವೇ ಈ ಕಾಸರಗೋಡು ಅತ್ಯಂತ ಸಂಭ್ರಮವಾಯಿತು ಕನ್ನಡದ ನೆಲವೊಮ್ಮೆ ಪಾದಸ್ಪರ್ಶಿಸಿ ಪಾವನವಾಯಿತು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕಲಾವಿದರು ಕಳೆದ ಅತ್ಯಂತ ಸಂಭ್ರಮದ ಕ್ಷಣವಾಗಿತ್ತು, ಅದ್ಭುತವಾದ ವೇದಿಕೆ ಜೊತೆಗೆ ಕಲಾತಂಡ ವಿವಿಧ ರೀತಿಯ ಕಲೆಗೆ ರಸದೌತಣ ಉಣಬಡಿಸಿತ್ತು.
Leave a comment