Home namma chikmagalur chikamagalur ಬೇಸರವೋ ! ಕೋಪವೋ ! ಎಂ.ಎಲ್.ಮೂರ್ತಿಯ ರಾಜೀನಾಮೆ ಎಂಬ ” ಟ್ರಂಪ್ ಕಾರ್ಡ್ “
chikamagalurHomeLatest Newsnamma chikmagalur

ಬೇಸರವೋ ! ಕೋಪವೋ ! ಎಂ.ಎಲ್.ಮೂರ್ತಿಯ ರಾಜೀನಾಮೆ ಎಂಬ ” ಟ್ರಂಪ್ ಕಾರ್ಡ್ “

Share
Share
ಚಿಕ್ಕಮಗಳೂರು: ಎಂ.ಎಲ್.ಮೂರ್ತಿ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಎಂ.ಎಲ್.ಮೂರ್ತಿ ಎಂಬಂತೆ ರಾರಾಜಿಸುತ್ತಿದ್ದ  ಮೂರ್ತಿ “ರಾಜಿನಾಮೆ” ನೀಡಿರುವುದು ಹಲವು ಊಹಾಪೋಹಗಳಿಗೆ ಎಡೆಮಾಡಿದೆ.
ಕಳೆದ ಮೂರು ವರ್ಷಗಳಿಂದ ಎಲ್ಲವನ್ನೂ ಸಹಿಸಿ ಕೊಂಡವರು ಇದ್ದಕ್ಕಿದ್ದಂತೆ ಸಿಡಿಯಲು ಕಾರಣವೇನು ? ಎಂಬ ಯಕ್ಷ ಪ್ರಶ್ನೆಗೆ ಉತ್ತರ ಸಿಗುವ ಬದಲಿಗೆ  ಅವರವರ ಭಾವಕ್ಕೆ ಅವರವರ ಭಕ್ತಿಗೆ ಗೋಳು ತೋಡಿ ಕೊಳ್ಳ ಬೇಕು ಎಂಬಂತೆ ಆಗಿದೆ ಎಂದು ಕಾಂಗ್ರೆಸ್ ವಲಯದ ಮಾತುಗಳು.
ಹುಟ್ಟು ಹಬ್ಬದ ದಿನವೇ ರಾಜೀನಾಮೆ ನೀಡಿರುವ ಎಂ.ಎಲ್,ಎಂ.ಸಂಚಲನ ಸೃಷ್ಟಿ ಮಾಡಿರುವುದು ಆನೇಕ ಸಂಶಯಗಳ ಜೊತೆಗೆ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಕಾಂಗ್ರೆಸ್ ಸರ್ಕಾರ ಬಂದು ಮೂರು ವರ್ಷವಾದರೂ ಸುಮ್ಮನಿದ್ದವರು ಈಗ ಉಗ್ರ ಅವತಾರ ತಾಳಿರುವುದರ ಹಿಂದಿನ ಗುಟ್ಟು ಎನ್ನುವುದಕ್ಕಿಂತ ಯಾವ ಸ್ಥಾನ ಮಾನಗಳು ದೊರೆಯದಿರುವುದು ಎಂದು ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ.
ಐದು ಜನ ಶಾಸಕರಿದ್ದು ಇವರುಗಳು ಕಾರ್ಯಕರ್ತರಿಗೆ ಸ್ಪಂದಿಸುವುದಿಲ್ಲ ಪಕ್ಷ ಸಂಘಟನೆಗಿಂತ ಇವರಿಗೆ ವ್ಯವಹಾರವೇ ಮುಖ್ಯ. ಅಧಿಕಾರಿಗಳ ವರ್ತನೆ ಮತ್ತು ನಡವಳಿಕೆಗಳು ಬಿಜೆಪಿ ಪರವಾಗಿವೆ.ಈ ಬಗ್ಗೆ ಶಾಸಕರುಗಳು ಮೌನಕ್ಕಿಂತ ವ್ಯಾಪಾರ ಮುಖ್ಯವಾಗಿವೆ.
ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಗುರ್ತಿಸದೆ ಬಿಜೆಪಿಯ ಗುತ್ತಿಗೆದಾರರಿಗೆ  ಆದ್ಯತೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕೂಡ ಇದೆ.
ಪಕ್ಷ ನೆಲ ಕಚ್ಚಿದೆ ಜಿಲ್ಲಾ ಅಧ್ಯಕ್ಷ ಅಂಶುಮಂತ್ ಕಾಡ ಅಧ್ಯಕ್ಷ ಪ್ರದಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ ಗ್ಯಾರಂಟಿ ಅಧ್ಯಕ್ಷ ಎರಡೆರಡು ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ.ಐದು ಜನ ಶಾಸಕರಿದ್ದರು ಮೂಡಿಗೆರೆ, ತರೀಕೆರೆ ಟಿ.ಎ.ಪಿ.ಸಿ.ಎಂ.ಎಸ್.ನಲ್ಲಿ ಸೋತಿರುವುದು ಅಜ್ಜಂಪುರ ಪಟ್ಟಣ ಪಂಚಾಯಿತಿ ಸೋಲು ಈಗ ನಡೆಯುತ್ತಿರುವ ಡಿ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಡ್ರೆಸ್ ಇಲ್ಲದಿರುವ ಮೂರ್ತಿಯವರ ಉಗ್ರ ಅವತಾರಕ್ಕೆ ಕಾರಣವಾಗಿರ ಬಹುದು.ಆದರೆ ಕಳೆದ ಮೂರು ವರ್ಷಗಳಿಂದ ಏನನ್ನು ಪ್ರಶ್ನೆ ಮಾಡದೇ ಇದ್ದಿದ್ದು ಏಕೆ ?
ಕಾಂಗ್ರೆಸ್ ಗೆ ನಯಾಪೈಸೆ ಲಾಭ ತರದಿರುವವರಿಗೆ ಗೂಟದ ಕಾರು ಸ್ಥಾನ ಮಾನ ನಮ್ಮಂತವರು ಮೂಲೆ ಗುಂಪು ಆಗಿರುವುದು ಈಗಲಾದರೂ “ಗೂಟದ ಕಾರು” ಸಿಗಲಿ ಎಂಬ ಅಸೆ ಇರಬಹುದು ಎನ್ನುವವರು  ಇದ್ದಾರೆ.
ಮೂಡಿಗೆರೆ ಶಾಸಕಿ ನಯನ ಮುತಾಲಿಕ್ ಪರ ಬ್ಯಾಟಿಂಗ್ ಮಾಡಿದಾಗ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಹಿಂದೂ ಮಹ ಸಭಾ ಗಣಪತಿಗೆ ಹತ್ತು ಲಕ್ಷ ಅನುದಾನ ಕೊಡುತ್ತೇನೆ ಎಂದಾಗ ಮೂರು ಟೋಲ್ ಗೇಟ್ ನಲ್ಲಿ ಕಿತ್ತು ಕೊಳ್ಳುತ್ತಿರುವರ ಬಗ್ಗೆ ಲಿಕ್ಕರ್ ಶಾಪ್,ಕ್ವಾರಿ ಮಾಡುವ
ಶಾಸಕರುಗಳ ಬಗ್ಗೆ ತುಟಿಕ್,ಪಿಟಿಕ್ ಎನ್ನದ ಮೂರ್ತಿ ಈಗ” ಟ್ರಂಪ್ ಕಾರ್ಡ್” ಬಳಸುತ್ತಿರುವುದು ಏಕೆ ಎಂದು   ಪ್ರಶ್ನೆ ಮಾಡುವ ಕಾಂಗ್ರೆಸ್ ಗರು ಇದ್ದಾರೆ.
ಮೂರ್ತಿ ತಣ್ಣಗಾಗುತ್ತಾರೆ ಅವರಿಗೆ ಸಿಟ್ಟು ಸೇಡವು ಜಾಸ್ತಿ ಎನ್ನುವವರ ಮಧ್ಯೆ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅಸಮಾಧಾನ ಸ್ಫೋಟವಾಗಿದೆ.
M.L. Murthy’s resignation is a “trump card”
Share

Leave a comment

Leave a Reply

Your email address will not be published. Required fields are marked *

Don't Miss

ಹುಲಿ ಗಣತಿಯ ಸಿಬ್ಬಂದಿಗಳಿಗೆ ಹುಲಿಯ ಮೃತದೇಹ ಪತ್ತೆ

ಚಿಕ್ಕಮಗಳೂರು:  ಭದ್ರಾ ಹುಲಿ ಸಂರಕ್ಷಿತ ಪ್ರದೇಶದ,ಹೆಬ್ಬೆ ವಲಯದ ಗಂಗೆಗಿರಿ ಸರ್ವೇ ನಂಬರ್ 15 ರ ಶಿರಗುಳ ಮೀಸಲು ಅರಣ್ಯದಲ್ಲಿ ದಿನಾಂಕ 6ನೆ ತಾರೀಕು ಬೆಳಿಗ್ಗೆ ಹುಲಿ ಗಣತಿಯ ಸಿಬ್ಬಂದಿಗಳಿಗೆ ಹುಲಿಯ ಮೃತದೇಹ...

ಕಾಫಿ ಕಳ್ಳತನ : ಆರೋಪಿಗಳ ಸೆರೆ- 2 ಕಾರು ವಶ

ಮೂಡಿಗೆರೆ: ತಾಲೂಕಿನ ಗೋಣಿಬೀಡು ಸಮೀಪ ರಂಗಸ್ವಾಮಿ ಅವರ ಕಾಫಿ ತೋಟದಲ್ಲಿ ಕಾಫಿ ಕಳ್ಳತನ ಮಾಡಿದ್ದ ೬ ಮಂದಿ ಆರೋಪಿಗಳನ್ನು ಗೋಣಿಬೀಡು ಪೊಲೀಸರು ಬಂಧಿಸಿ, ಸುಮಾರು ೩.೫೦ ಲಕ್ಷ ರೂ ಮೌಲ್ಯದ ಕಾಫಿ...

Related Articles

ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ

ಚಿಕ್ಕಮಗಳೂರು: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದ್ದು, ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ...

ಕಾಫಿನಾಡಿನ ಗಿರಿಭಾಗದಲ್ಲಿ ದಟ್ಟ ಮಂಜು

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸೂರ್ಯನ ದರ್ಶನವೇ ಇಲ್ಲದಂತಾಗಿದ್ದು, ಥಂಡಿ ವಾತಾವರಣ ಉಂಟಾಗಿದ್ದು,...

ಜಿಎಸ್‌ಬಿ ಯಿಂದ ಸಂಕ್ರಾಂತಿ ಸಂಭ್ರಮ

ಚಿಕ್ಕಮಗಳೂರು: ಸಂಕ್ರಾಂತಿ ಹಿನ್ನೆಲೆಯಲ್ಲಿ ಗೌಡಸಾರಸ್ವತ ಬ್ರಾಹ್ಮಣ ಸಮಾಜದಿಂದ ನಡೆಯುವ ಕೇಳ್ ಮೇಳ್ ಸಾಂಸ್ಕೃತಿಕ ಕಾರ್ಯಕ್ರಮ ನಗರದಲ್ಲಿ...

ಗಾಳಿಪಟ ಹಾರಾಟಕ್ಕೆ ಮನಸೋತ ಜನ

ಚಿಕ್ಕಮಗಳೂರು: ಆಕಾಶದಲ್ಲಿ ಹಾರುತ್ತಿದ್ದ ಹುಲಿ, ಜಿಂಕೆ, ಆನೆ, ಸಿಂಹ, ಚಿಟ್ಟೆಗಳು, ಪಕ್ಷಿಗಳು, ಗಿಡಮರಗಳು ಸೇರಿದಂತೆ ವಿವಿಧ...