ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಆನೆ ದಾಳಿಯಿಂದಾದ ಸಾವು ಮತ್ತು ಅದರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಏನಾದರೂ ಲೋಪಗಳಾಗಿದ್ದರೆ ಅದನ್ನು ಒಪ್ಪಿಕೊಳ್ಳಲು ತಾವು ಸಿದ್ಧರಿರುವುದಾಗಿ ತಿಳಿಸಿದ ಅವರು, ಆದರೆ ಈ ಸೂಕ್ಷ್ಮ ವಿಷಯದಲ್ಲಿ ಮಾಜಿ ಶಾಸಕರಾದ ಜೀವರಾಜ್ ಮತ್ತು ಸುಧಾಕರ್ ಶೆಟ್ಟಿ ಅವರು ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ಸಾವು ಅಥವಾ ಹೆಣವನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಅತ್ಯಂತ ಕೆಳಮಟ್ಟದ ನಡೆ ಎಂದು ಅವರು ಟೀಕಿಸಿದ್ದಾರೆ.
ರಾಜಕೀಯ ಲಾಭಕ್ಕಿಂತ ಮಾನವೀಯತೆ ಮುಖ್ಯ ಹೆಣದ ಮುಂದೆ ರಾಜಕೀಯ ಮಾಡಿ ಗಳಿಸಿಕೊಳ್ಳುವಂಥದ್ದು ಯಾವುದೂ ಇಲ್ಲ ಎಂದು ಹೇಳಿದ ರವೀಶ್, ಆಂಬುಲೆನ್ಸ್‌ನಲ್ಲಿ ಹೆಣವನ್ನು ಕೊಂಡೊಯ್ಯಲು ಬಿಡದೆ ಅಧಿಕಾರದ ಹಪಹಪಿತನ ಪ್ರದರ್ಶಿಸುತ್ತಿರುವುದು ಖಂಡನೀಯ ಎಂದಿದ್ದಾರೆ.
ಕಾಡುಪ್ರಾಣಿಗಳಿಗೆ ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಎಂಬ ಭೇದವಿಲ್ಲ ಹಾಗೂ ಅವುಗಳಿಗೆ ಯಾವುದೇ ಪಕ್ಷದ ಅಥವಾ ಜಾತಿಯ ಹಂಗಿಲ್ಲ ಎಂಬುದನ್ನು ಮರೆಯಬಾರದು ಎಂದು ಅವರು ಚಾಟಿ ಬೀಸಿದ್ದಾರೆ. ಆನೆ ಮತ್ತು ಮಾನವ ಸಂಘರ್ಷ ನಿರಂತರವಾಗಿದ್ದು, ಈ ಬಗ್ಗೆ ಅರಣ್ಯ ಸಚಿವರು ನಾಳೆಯೇ ಭೇಟಿ ನೀಡಿ ಚರ್ಚೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
Low-level politics while holding the body of death
Leave a comment