Home namma chikmagalur chikamagalur ಕೆಸವೆ ಪ್ರವಾಸಿ ಮಂದಿರದ ಬಳಿ ಒಂಟಿ ಸಲಗ
chikamagalurHomeLatest Newsnamma chikmagalur

ಕೆಸವೆ ಪ್ರವಾಸಿ ಮಂದಿರದ ಬಳಿ ಒಂಟಿ ಸಲಗ

Share
Share

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯದ ಕೆಸವೆ ಪ್ರದೇಶದಲ್ಲಿರುವ ಬ್ರಿಟಿಷರ ಕಾಲದ ಪ್ರವಾಸಿ ಮಂದಿರದ ಬಳಿ ಒಂಟಿ ಸಲಗ ಕಾಣಿಸಿಕೊಂಡ ಘಟನೆ ಗಮನಸೆಳೆದಿದೆ.

ಅಭಯಾರಣ್ಯದ ಮಧ್ಯಭಾಗದಲ್ಲಿರುವ ಈ ಐಬಿ (ಪ್ರವಾಸಿ ಮಂದಿರ) ಬಳಿ ಕಾಡಾನೆ ಏಕಾಏಕಿ ಪ್ರವೇಶಿಸಿದೆ.

ಕಾಡಾನೆಗಳು ಹಾಗೂ ಇತರೆ ವನ್ಯ ಮೃಗಗಳು ಒಳನುಗ್ಗದಂತೆ ಅರಣ್ಯ ಇಲಾಖೆ ಸುತ್ತಮುತ್ತ ಟ್ರಂಚ್ ನಿರ್ಮಿಸಿದ್ದರೂ, ವಾಹನ ಸಂಚಾರಕ್ಕೆ ಮಾಡಿರುವ ರಸ್ತೆಯ ಮೂಲಕ ಕಾಡಾನೆ ಪ್ರವೇಶಿಸಿದುದಾಗಿ ತಿಳಿದುಬಂದಿದೆ.

ಕೆಲಕಾಲ ಪ್ರವಾಸಿ ಮಂದಿರದ ಮುಂಭಾಗ ನಿಂತಿದ್ದ ಸಲಗ, ನಂತರ ಯಾವುದೇ ಅನಾಹುತ ಉಂಟುಮಾಡದೆ ಅರಣ್ಯ ಪ್ರದೇಶದತ್ತ ತೆರಳಿದೆ. ಈ ಪ್ರವಾಸಿ ಮಂದಿರವು ಸಫಾರಿ ತೆರಳುವವರಿಗೆ ಪ್ರಮುಖ ಆಕರ್ಷಣೆಯಾಗಿದ್ದು, ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಬ್ರಿಟೀಷರು ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ್ದ ಐತಿಹಾಸಿಕ ಕಟ್ಟಡವಾಗಿದೆ.

ಈ ಘಟನೆ ಪ್ರವಾಸಿಗರು ಹಾಗೂ ಅರಣ್ಯ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕಕ್ಕೆ ಕಾರಣವಾದರೂ, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

Lonely snake near Kesave Tourist Temple

Share

Leave a comment

Leave a Reply

Your email address will not be published. Required fields are marked *

Don't Miss

ಬಿ.ಟಿ. ಮಲ್ಲೇನಹಳ್ಳಿ ಗ್ರಾಮದ ಬಳಿ ದಿನಬಳಕೆಯ ವಸ್ತುಗಳ ಕಳವು

ಕಡೂರು: ತಾಲ್ಲೂಕಿನ ಪಂಚನಹಳ್ಳಿ ಸಮೀಪದ ಬಿ.ಟಿ. ಮಲ್ಲೇನಹಳ್ಳಿ ಬಳಿ ದಿನಬಳಕೆಯ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿಯಿಂದ ಗ್ರಾಮಸ್ಥರು ಸರಂಜಾಮು ದೋಚಿದ ಘಟನೆ ಶನಿವಾರ ನಡೆದಿದೆ. ಚಿಕ್ಕಬಳ್ಳಾಪುರದಿಂದ ಕಡೂರು ಎಪಿಎಂಸಿಯ ಏಜೆನ್ಸಿಗೆ ಸೋಪು, ಸೋಪಿನ...

ಶಾರ್ಟ್ ಸರ್ಕ್ಯೂಟ್ ಗೆ ಬೆಂಕಿ-ಫರ್ನಿಚರ್ ಅಂಗಡಿಗೆ ಬೆಂಕಿ

ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಫರ್ನಿಚರ್ ಅಂಗಡಿಯೊಂದು ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಐಜಿ ರಸ್ತೆಯಲ್ಲಿ ನಡೆದಿದೆ. ಈ ಆಕಸ್ಮಿಕ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಸುಟ್ಟು ಕರಕಲಾಗಿದ್ದು,...

Related Articles

ಬಿದ್ರಹಳ್ಳಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಕಸದ ರಾಶಿ

ಕೊಟ್ಟಿಗೆಹಾರ : ಧರ್ಮಸ್ಥಳ–ಹೋರನಾಡು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಕಸದ ರಾಶಿಗಳು ಗುಡ್ಡಗಟ್ಟಿರುವ ದುಸ್ಥಿತಿ...

ಬಾಬೂಜಿ ದೇಶದ ಹಸಿವು ನೀಗಿಸಿದ ಮಹಾನ್ ಚೇತನ

ಚಿಕ್ಕಮಗಳೂರು: ದೇಶದ ಹಸಿವು ನೀಗಿಸಿದ ಹಸಿರು ಕ್ರಾಂತಿಯ ರೂವಾರಿ ಹಾಗೂ ಅಸಮಾನತೆಯ ವಿರುದ್ಧ ಸಂಘಟಿತ ಹೋರಾಟ...

ಪತಿ – ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ

ಚಿಕ್ಕಮಗಳೂರು: ತಾಲ್ಲೂಕಿನ ಅಂಬಳೆ ಹೋಬಳಿ ಗಿಡ್ಡೆನಹಳ್ಳಿ ಗ್ರಾಮದ ನಿವಾಸಿ ಗೋವಿಂದೇಗೌಡ ಅವರು ತಮ್ಮ ಹಾಗೂ ತಮ್ಮ...

ಭೀಕರ ರಸ್ತೆ ಅಪಘಾತದಲ್ಲಿ ಅಮಾಯಕ ಜೀವ ಬಲಿ

ಮೂಡಿಗೆರೆ:ಬಿಳಗುಳದ ಎನ್ ಹೆಚ್ 173 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವು ಚಾಲಕನ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದ್ದು,...