ಚಿಕ್ಕಮಗಳೂರು: ವ್ಯಕ್ತಿಯೊಬ್ಬರಿಗೆ ಹೆಚ್ಚಿನ ಪ್ರಮಾಣದ ಸಾಲ ಮತ್ತು ರಿಫಂಡ್ ನೀಡುವುದಾಗಿ ನಂಬಿಸಿ ಪ್ರೋಸೆಸ್ಸಿಂಗ್ ಚಾರ್ಜಸ್ ರೀತಿಯಲ್ಲಿ 6,26,000ರೂ ಪಡೆದು ವಂಚಿಸಿದ ಘಟನೆ ನಡೆದಿದೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಇನ್ಸ್ಟಾಗ್ರಾಮ್ ಆಪ್ (INSTAGRAM) ನಲ್ಲಿ ವಿಡಿಯೋಗಳನ್ನು ವಿಕ್ಷಿಸುತ್ತಿರುವಾಗ ತುಂಬಾ ಕಡಿಮೆ ಬಡ್ಡಿಗೆ ಲೋನ್ ಕೊಡುವ ವಿಡಿಯೋ ಬಂದಿದೆ.
ಇದನ್ನು ವೀಕ್ಷಿಸಿದ ವ್ಯಕ್ತಿಗೆ ಸೈಬರ್ ವಂಚಕರು ಕರೆಮಾಡಿ ನೀವು ಲೋನ್ ಬಗ್ಗೆ ವಿಡಿಯೋವನ್ನು ವೀಕ್ಷಿಸಿರುತ್ತೀರಿ, ನಾವು ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ ನಿಮಗೆ ಲೋನ್ ಬೇಕಾದರೆ ನಾವು ಕಡಿಮೆ ಬಡ್ಡಿಗೆ ಲೋನ್ ಮಾಡಿಸಿ ಕೊಡುತ್ತೇವೆಂದು ನಂಬಿಸಿದ್ದಾರೆ.
02 ಲೋನ್ ಆಪ್ ಗಳನ್ನು ಡೌನ್ ಲೋಡ್ ಮಾಡಿಸಿ ಡಾಕ್ಯುಮೆಂಟ್ ಗಳನ್ನು ಅಪ್ ಲೋಡ್ ಮಾಡಿಸಿಕೊಂಡು ಅದರಿಂದ ಸದರಿ ವ್ಯಕ್ತಿಗೆ 4.5 ಲಕ್ಷ ರೂ ಸಾಲವನ್ನು ಮಂಜೂರು ಮಾಡಿಸಿ, ನಂತರ ನಿಮಗೆ ಇನ್ನೂ ಹೆಚ್ಚಿನ ಸಾಲ ಬೇಕಾದರೆ 07 ಲಕ್ಷ ರೂ. ಸಾಲ ಮಂಜೂರು ಮಾಡಿಸುತ್ತೇವೆ ಎಂದು ವಿಶ್ವಾಸ ಮೂಡಿಸಿದ್ದಾರೆ.
ಬಳಿಕ ನೀವು ಸಾಲ ಪಡೆದಿರುವ 4.5 ಲಕ್ಷ ರೂ ಮತ್ತು ಪ್ರೊಸೆಸಿಂಗ್ ಚಾರ್ಜಸ್ ಸೇರಿ ಒಟ್ಟು 6,26,000 ರೂ ಗಳನ್ನು ನಾವು ಹೇಳುವ ಖಾತೆಗೆ ಹಾಕಿದರೆ ನಿಮಗೆ 07 ಲಕ್ಷ ರೂ ಸಾಲದ ಜೊತೆಗೆ ನೀವು ನಮಗೆ ಹಾಕುವ 6,26,000 ರೂ ವಾಪಸ್ಸು ಮಾಡಿಸುತ್ತೇವೆಂದು ನಂಬಿಸಿದ್ದಾರೆ.
6,26,000 ರೂ ಗಳನ್ನು ಸೈಬರ್ ಫ್ರಾಡ್ ಗಳು ತಮ್ಮ ಖಾತೆಗೆ ಹಾಕಿಸಿಕೊಂಡು ಯಾವುದೇ ಲೋನ್ ಆಗಲಿ ಮತ್ತು ರೀಫಂಡ್ ಆಗಲಿ ಮಾಡದೇ ಮೋಸ ಮಾಡಿರುತ್ತಾರೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Loan – Rs. 626000 fraud on the pretext of refund
Leave a comment