ಕರ್ನಾಟಕದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಮಾವೋವಾದಿ ನಾಯಕ ವಿಕ್ರಮ್ ಗೌಡ 40 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕೂಡ್ಲು ಗ್ರಾಮದಲ್ಲಿ ಬಡ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಮಿಡ್ಲ್ ಸ್ಕೂಲ್ ಕೂಡ ಪೂರ್ತಿ ಮಾಡುವ ಮುನ್ನವೇ ತಮ್ಮ ಕುಟುಂಬವನ್ನು ಪೋಷಿಸಲು ಚಿಕ್ಕವಯಸ್ಸಿನಲ್ಲಿ ಹೋಟೆಲ್ ಕೆಲಸದಲ್ಲಿ ಬಾಲ ಕಾರ್ಮಿಕರಾಗಿ ಮಾರ್ಪಟ್ಟರು.
ವಿಕ್ರಂ ಗೌಡ ತನ್ನ ಕಡು ಬಡತನದ ಕುಟುಂಬವನ್ನು ಪೋಷಿಸಲು ಹೆಬ್ರಿಯ ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ಕಾರ್ಮಿಕ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆಗಲೇ ಭುಗಿಲೇಳುತ್ತಿದ್ದ ಜನರ ಚಳುವಳಿಗಳಿಂದ ಮತ್ತು ಅವುಗಳಿಗೆ ನಾಯಕತ್ವ ವಹಿಸುತ್ತಿದ್ದ ಸಿಪಿಐ (ಎಂಎಲ್) ಪೀಪಲ್ಸ್ ವಾರ್ ಪಕ್ಷದ ರಾಜಕೀಯದಿಂದ ಪ್ರಭಾವಿತರಾಗಿದ್ದರು. ಕ್ರಮೇಣವಾಗಿ ವಿಕ್ರಮ್ ಗೌಡ್ಲು ತನ್ನ ಸುತ್ತಮುತ್ತಲಿನ ಆದಿವಾಸಿಗಳ ಬದುಕು ಎಷ್ಟು ದಾರುಣವಾಗಿದೆ ಎಂಬುದನ್ನು ಗಮನಿಸಿದರು. ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಆಳುವವರ್ಗಗಳ ಅಪರಾಧವನ್ನು ಗ್ರಹಿಸಿದರು. ಆ ಹಿನ್ನೆಲೆಯಲ್ಲಿ ಅವರು ಆದಿವಾಸಿಗಳ ಸ್ವಾಯತ್ತತೆಗಾಗಿ ಕೂಡ ಕೆಲಸ ಮಾಡಿದರು. ಅದೇ ಸಮಯದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವಿರುದ್ಧ ತಿರುಗಿಬಿದ್ದ ಆದಿವಾಸಿಗಳ ಬಂಡಾಯವನ್ನು ಮುನ್ನಡೆಸಿದರು. ಅದೇ ಕ್ರಮದಲ್ಲಿ ಅವರು ತೀವ್ರ ಪೊಲೀಸ್ ನಿರ್ಬಂಧಗಳನ್ನು ಎದುರಿಸಿದರು.
ಕಬ್ಬಿನಾಲೆ, ನಾಡ್ಪಾಲು, ಮುಟ್ಲುಪಾಡಿ ಮುಂತಾದ ಪ್ರದೇಶಗಳಲ್ಲಿ ಪ್ರಜಾ ಚಳುವಳಿಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ವಿಕ್ರಮ್ ಗೌಡನ ಬೇಟೆ ಆರಂಭಿಸಿದ್ದರು. ಆದುದರಿಂದ ಸಿಪಿಐ (ಮಾವೋವಾದಿ) ಪಕ್ಷಕ್ಕೆ ಸೇರಿ ಭೂಗತರಾಗಿ ಹಲವು ಜನಪರ ಹೋರಾಟಗಳಿಗೆ ನೇತೃತ್ವ ವಹಿಸಿದ್ದರು. ಇದೇ ವೇಳೆ ವಿಕ್ರಮಗೌಡನ ಮನೆ ಮೇಲೆ ಪೊಲೀಸರು ಆಗಾಗ ದಾಳಿ ನಡೆಸಿ ಭಯ ಭೀತಿ ವಾತಾವರಣವನ್ನು ಸೃಷ್ಟಿಸಿದ್ದರು. ತಾಯಿ ಗುಲಾಬಿ ಗೌಡ್ಲು ಹಾಗೂ ಸಹೋದರ ಸುರೇಶ್ ಗೌಡ್ಲು ಅವರಿಗೆ ಹಲವು ರೀತಿಯಲ್ಲಿ ಕಿರುಕುಳ ನೀಡಲಾಗಿತ್ತು. ಅದನ್ನು ಸಹಿಸಲಾರದೆ ವಿಕ್ರಮ್ ಗೌಡ ಅವರ ಸಹೋದರ ಮುದ್ರಾಡಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಅವರು ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸಲು ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದರು. ಕೆಲವೇ ಸಮಯದಲ್ಲಿ ವಿಕ್ರಮ ಗೌಡ್ಲು ಅವರ ತಾಯಿ ಗುಲಾಬಿ ಗೌಡ್ಲು ನಿಧನರಾಗಿದ್ದರು.
ನೇತ್ರಾವತಿ ದಳದ ಮುಖಂಡರಾಗಿ ವಿಕ್ರಮ ಗೌಡ ಜವಾಬ್ದಾರಿ ವಹಿಸಿ ಸಾವಿರಾರು ಜನರನ್ನು ಚಳವಳಿಯ ಹಾದಿಗೆ ಕರೆದೊಯ್ದರು. 20 ವರ್ಷಗಳಿಂದ ವಿಕ್ರಮ್ ಗೌಡನನ್ನು ಕೊಲ್ಲಲು ಪೊಲೀಸರು ನಡೆಸಿದ ಹಲವಾರು ಪ್ರಯತ್ನಗಳು ವಿಫಲವಾದವು. ಸರ್ಕಾರ ಕೈಗೊಂಡಿರುವ ನಕ್ಸಲೀಯರ ಶರಣಾಗತಿ ಕಾರ್ಯಕ್ರಮವನ್ನು ವಿಕ್ರಮ್ ಗೌಡ್ಲು ತೀವ್ರವಾಗಿ ವಿರೋಧಿಸಿದ್ದು ಮಾತ್ರವಲ್ಲದೆ ಕರ್ನಾಟಕದ ಹಲವೆಡೆ ಇಂತಹ ಶರಣಾಗತಿ ಕಾರ್ಯಕ್ರಮದ ವಿರುದ್ಧ ಪ್ರಚಾರ ಮಾಡಿದರು.
ಪಶ್ಚಿಮಘಟ್ಟಗಳ ಅರಣ್ಯಗಳಲ್ಲಿ ದೊಡ್ಡ ಪ್ರಮಾಣದ ಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಮಾವೋವಾದಿಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದ್ದರೂ ವಿಕ್ರಮ್ ಗೌಡ್ಲು ಕೇರಳದಿಂದ ಕರ್ನಾಟಕದವರೆಗೆ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಿದರು. ಕರ್ನಾಟಕದಲ್ಲಿ ಮತ್ತೆ ಜನಾಂದೋಲನಗಳನ್ನು ಕಟ್ಟುವ ಪ್ರಯತ್ನದಲ್ಲಿ ನವೆಂಬರ್ 18ರ ರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ತಮ್ಮ 44ನೇ ವಯಸ್ಸಿನಲ್ಲಿ ಹತ್ಯೆಗೀಡಾದರು. ಇನ್ನು ಪೊಲೀಸರು ಹೇಳುತ್ತಿರುವ ವಿಕ್ರಮ್ ಗೌಡ್ಲು ಎನ್‌ಕೌಂಟರ್ ಕಥೆಯ ಸತ್ಯಾಸತ್ಯತೆ ಸತ್ಯಶೋಧನೆಯ ಮೂಲಕ ಬಹಿರಂಗವಾಗಬೇಕಿದೆ.
Leave a comment