Home ಬೀರೂರು ಪಟ್ಟಣದಲ್ಲಿ ಚಿರತೆ ಸಂಚಾರ
HomeKadurLatest Newsnamma chikmagalur

ಬೀರೂರು ಪಟ್ಟಣದಲ್ಲಿ ಚಿರತೆ ಸಂಚಾರ

Share
Share

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಚಿರತೆ ಸಂಚಾರ ಹೆಚ್ಚಿರುವುದು ಜನರಲ್ಲಿ ಭಾರೀ ಆತಂಕ ಮೂಡಿಸಿದೆ.

ರಾತ್ರಿ ಸಮಯದಲ್ಲಿ ಪಟ್ಟಣದ ಇಂಡಸ್ಟ್ರಿಯಲ್ ಏರಿಯಾ, ಅಮೃತ್ ಮಹಲ್ ಕಾವಲು ಸುತ್ತಮುತ್ತ ಹಾಗೂ ಮನೆಗಳ ಬಳಿ ಚಿರತೆ ಓಡಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.

ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಚಿರತೆ ಹೊಂಚು ಹಾಕಿ ಕುಳಿತಿರುವುದು ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಜನವಸತಿ ಪ್ರದೇಶದಲ್ಲೇ ಚಿರತೆ ಸಂಚಾರ ಹೆಚ್ಚಿರುವುದರಿಂದ ನಿವಾಸಿಗಳು ಭಯಭೀತರಾಗಿದ್ದಾರೆ. ಈ ಘಟನೆ ಬೀರೂರು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿರತೆಯನ್ನು ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Leopard roaming in Birur town

Share

Leave a comment

Leave a Reply

Your email address will not be published. Required fields are marked *

Don't Miss

ಹಿರಿಯ ನಾಗರಿಕರಿಗೆ 3.12 ಲಕ್ಷ ರೂ ವಂಚನೆ

ಚಿಕ್ಕಮಗಳೂರು: ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಸಿಲುಕಿ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 3.12 ಲಕ್ಷ ಕಳೆದುಕೊಂಡಿದ್ದಾರೆ. ನಗರದಲ್ಲಿ ವಾಸವಾಗಿರುವ 62 ವರ್ಷದ ವೆಂಕಟೇಶ್ ಇತ್ತೀಚೆಗೆ ಅವರ ಮೊಬೈಲ್‌ಗೆ ಬಂದಿದ್ದ ಒಂದು ಅಪರಿಚಿತ ಎಪಿಕೆ...

ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಶಿಫಾರಸ್ ಪತ್ರ

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಭಜರಂಗದಳದ ಮುಖಂಡ ಶ್ಯಾಮ್ ವಿ ಗೌಡ, ಮುಸ್ಲಿಂ ಸಮುದಾಯದ 10 ಮಂದಿ ಸೇರಿ ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಜಿಲ್ಲಾ...

Related Articles

ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

ಕಡೂರು: ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿ ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವವು ಮಂಗಳವಾರ ಶ್ರದ್ಧಾ...

ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

ಚಿಕ್ಕಮಗಳೂರು : ನಗರದ ಐ.ಜಿ. ರಸ್ತೆಯ ಬಸ್ ನಿಲ್ದಾಣದ ಸಮೀಪವಿರುವ ಇಂದಿರಾ ಕ್ಯಾಂಟೀನ್ ಅನ್ನು ಸ್ಥಳಾಂತರ...

ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳು ಮನೆ ಬಾಗಿಲಿಗೆ

ಚಿಕ್ಕಮಗಳೂರು: ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ...

ಶಾಸಕ ಜಿ.ಹೆಚ್. ಶ್ರೀನಿವಾಸ್ ವಿರುದ್ಧ ಪ್ರತಿಭಟನೆ

ಅಜ್ಜಂಪುರ : ಶಾಸಕ ಜಿ.ಹೆಚ್. ಶ್ರೀನಿವಾಸ್ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು...