ಚಿಕ್ಕಮಗಳೂರು :
ಗೊ.ರು.ಚ ಎಂದು ಕರ್ನಾಟಕದ ಲ್ಲಿ ಮನೆ ಮಾತಗಿರುವ ಜನಪದ ಸಾಹಿತಿ ಗೊ.ರು.ಚನ್ನಬಸಪ್ಪನವರು ಇತ್ತೀಚಿನ ಸಭೆಯೊಂದರಲ್ಲಿ ಮಾತನಾಡುತ್ತಾ ನನ್ನ ಕಿವಿ ಕೇಳದಂತೆ ಆಗಲು ನಟ ದರ್ಶನ್ ಅಭಿಮಾನಿಗಳು ಕಾರಣ ಎಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಗೊಂಡೇದಹಳ್ಳಿ ಗ್ರಾಮದ ಚನ್ನಬಸಪ್ಪ ಶಿಕ್ಕಕರಾಗಿ ವೃತ್ತಿ ಆರಂಭಿಸಿ ಜನಪದ ಪ್ರಾಕಾರದಲ್ಲಿ ಪಾಂಡಿತ್ಯ ಹೊಂದಿರುವ ಹಿರಿಯ ಜೀವ.
1967 ರಲ್ಲಿ ತರೀಕೆರೆಯಲ್ಲಿ “ವಿಶ್ವ ಜಾನಪದ” ಸಮ್ಮೇಳನವನ್ನು ಜನಪದ ವಿಶ್ಲೇಷಕರಾದ ದಿವಂಗತ ಕೆ.ಆರ್.ಲಿಂಗಪ್ಪನವರ ಜೊತೆಗೂಡಿ ಅಯೋಜಿಸಿದವರು.ಸಮ್ಮೇಳನದ ವಿಶೇಷತೆಗಾಗಿ “ಹೊನ್ನ ಬೀತ್ತೇವು ಹೊಲಕ್ಕೆಲ್ಲಾ” ಎಂಬ ಅಕರ ಗ್ರಂಥ ಹೊರತಂದಿದ್ದರು.
ಶಿಕ್ಷಣ ಇಲಾಖೆ,ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸಿದರ ಜೊತೆಗೆ “ಕನ್ನಡ ಸಾಹಿತ್ಯ ಪರಿಷತ್ತು” ರಾಜ್ಯಧ್ಯಕ್ಷರಾಗಿ.ಶರಣ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷರಾಗಿ ಸಂಘಟನ ಚತುರರಾದವರು.ಇಳಿ ವಯಸ್ಸಿನಲ್ಲೂ ಹರಳು ಉರಿದಂತೆ ಮಾತನಾಡುವ ಚನ್ನಬಸಪ್ಪನವರಿಗೆ ರಾಜ್ಯ ಮಟ್ಟದ ಆನೇಕ ಪ್ರಶಸ್ತಿಗಳು ದೊರಕಿವೆ.
ರಾಜರಾಜೇಶ್ವರಿ ನಗರದಲ್ಲಿ ನಟ ದರ್ಶನ್ ಮನೆಯ ಬಳಿ ಚನ್ನಬಸಪ್ಪನವರ ಮನೆ ಇದೆ ಪ್ರತಿವರ್ಷ ನಡೆಯುವ ಹುಟ್ಟು ಹಬ್ಬಕ್ಕೆ ಬರುವ ಅಭಿಮಾನಿಗಳು ಸಿಡಿಸುವ ಸಿಡಿಮದ್ದುಗಳಿಂದಾಗಿ ಕಿವಿ ಕೇಳಿಸದಂತೆ ಆಗಿದೆ ಎಂದರೆ ಇನ್ನೂ ಬೇರೆಯವರಿಗೆ ಎಷ್ಟು ಅನಾಹುತ ಆಗಿರಬಹುದು .
ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿಮಾನಿಗಳ ಬಂಡತನ ಇನ್ನೂ ಕಡಿಮೆ ಆಗಿಲ್ಲ ಎಂಬುದಕ್ಕೆ ಇದು ಮತ್ತೊಂದು ಕಾರಣ ಎನ್ನಬಹುದು. ಆಸ್ಪತ್ರೆ ಜನ ವಸತಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುವ ಹುಚ್ಚು ಅಭಿಮಾನ ಇಂತಹ ಅನಾಹುತಗಳಿಗೆ ಕಾರಣ ಆಗಿ ದರ್ಶನ್ ಬಗ್ಗೆಯೂ ಮತ್ತಷ್ಟು ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿರಿವುದಂತು ಸತ್ಯ
Leave a comment