ಚಿಕ್ಕಮಗಳೂರು :
ಜಿಲ್ಲೆಯ ಹಲವೆಡೆ ಮಳೆ ಆರ್ಭಟಿಸುತ್ತಿದ್ದು ಹತ್ತು ಹಲವು ಅನಾಹುತಗಳು ಸಂಭವಿಸುತ್ತಿವೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಮಲ್ಲಂದೂರು ಸಮೀಪದ ಮೇಲು ಹೊಲದಗದ್ದೆ ಬಳಿ ರಸ್ತೆಯ ತಡೆಗೋಡೆ ಜರಿದು ಬಿದ್ದಿದ್ದು ನೂರಾರು ಅಡಿ ಆಳಕ್ಕೆ ಮಣ್ಣು ಜರಿದು ಭೂಕುಸಿತ ಉಂಟಾಗಿದೆ. ಇಂದು ಬೆಳಿಗ್ಗೆ ಬಂಡೆ ಕಲ್ಲು ಸಹಾ ಉರುಳಿ ಬಿದ್ದಿದ್ದು ರಸ್ತೆ ಸಂಚಾರ ದುಸ್ಥರವಾಗಿದೆ.
ಮತ್ತೊಂದೆಡೆ ಮಲ್ಲಂದೂರಿನಿಂದ ಹೊನ್ನಾಳ ತೆರಳುವ ರಸ್ತೆಯ ಬಳಿ ಭಾರೀ ಮಳೆಯಿಂದ ರಸ್ತೆಯ ಮೇಲೆ ನೀರು ಹರಿದು ರಸ್ತೆಯ ಬದಿಯಲ್ಲಿ ಕೊರಕಲು ಉಂಟಾಗಿದೆ. ಇದರಿಂದಾಗಿ ವಾಹನಗಳ ಓಡಾಟ ಅಪಾಯಕ್ಕೆ ಎಡೆಮಾಡಿಕೊಡುವ ಸಂಭವವಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಸ್ತೆ ದುರಸ್ಥಿಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಲ್ಲಂದೂರು ಭಾಗದಲ್ಲಿ ಒಂದೇ ಗಂಟೆಗೆ ಸುಮಾರು 4 ಇಂಚಿನಷ್ಟು ಮಳೆ ಸುರಿದಿದ್ದು ರಸ್ತೆಯಲ್ಲಿ ಮಳೆ ನೀರು ನದಿಯಂತೆ ಹರಿದಿದೆ. ಮಲ್ಲಂದೂರು-ಮುತ್ತೋಡಿ ಭಾಗದಲ್ಲಿ ಭಾರೀ ಪ್ರಮಾಣದ ಮಳೆ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ರಸ್ತೆಯ ಒಂದು ಬದಿಯ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದ್ದು ರಸ್ತೆಯೇ ಕಟ್ ಆಗುವ ಆತಂಕ ಸ್ಥಳಿಯರದ್ದಾಗಿದೆ. ಈ ರಸ್ತೆ ಸಿಂಗಲ್ ರೋಡ್. ಎದುರಿನಿಂದ ಒಂದು ವಾಹನ ಬಂದ್ರೆ ಸೈಡ್ ಕೊಡೋದಕ್ಕೆ ಕಷ್ಟಪಡಬೇಕು ಅಂತಹಾ ರಸ್ತೆ. ಈ ರಸ್ತೆಯಲ್ಲಿ ಒಂದು ಬದಿಯ ಮಣ್ಣು ಕುಸಿದಿರೋದು ರಸ್ತೆ ಸಂಪರ್ಕವೇ ಕಟ್ ಆತಂಕ ಸ್ಥಳಿಯರದ್ದು. ಈ ಮಾರ್ಗದಲ್ಲಿ ದಿನಕ್ಕೆ ಒಂದೆರಡು ಬಸ್ ಅಷ್ಟೇ ಓಡಾಡೋದು. ರಸ್ತೆ ಕಟ್ಟಾದರೆ, ಹತ್ತಾರು ಹಳ್ಳಿಯ ಜನ 40-50. ಕಿ.ಮೀ. ಸುತ್ತಿ ಚಿಕ್ಕಮಗಳೂರು ನಗರಕ್ಕೆ ಬರಬೇಕು. ಹಾಗಾಗಿ, ಮುಂಗಾರುಗಿಂತ ಹಿಂಗಾರು ಮಳೆಗೆ ಮಲೆನಾಡಿಗರು ಅಕ್ಷರಶಃ ಕಂಗಲಾಗಿದ್ದಾರೆ.
Leave a comment