ಚಿಕ್ಕಮಗಳೂರು: – ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂ ಸ್ಕರಣಾ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಹೆಚ್.ಕುಮಾರಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ಜಿ.ಹಾಲಪ್ಪ ಸೋ ಮವಾರ ಸಂಘದ ಕಚೇರಿಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ನಗರ ನಿವಾಸಿಗಳಿಗೆ ಸೂಕ್ತ ದರದಲ್ಲಿ ತರಕಾರಿ ಮಾರಾಟಗೊಳಿಸುವುದು. ರೈತರಿಗೆ ದಲ್ಲಾಳ್ಳಿಗಳ ಹಾವಳಿ ತಪ್ಪಿಸಿ ತರಕಾರಿಗಳನ್ನು ನೇರ ಖರೀದಿಸಲು ಸಂಘ ಮುಂದಾಗಬೇಕು ಎಂದು ತಿಳಿಸಿದರು.
ರೈತ ಬಾಂಧವರಿಗೆ ಅನುಕೂಲವಾಗಲು ನಿಗಧಿತ ಸಮಯದಲ್ಲಿ ಗುಣಮಟ್ಟದ ಬೀಜ, ರಸಗೊಬ್ಬರವ ನ್ನು ಒದಗಿಸಲು ಸಂಘ ಕಾರ್ಯಪ್ರವೃತ್ತರಾಗಬೇಕು. ಒಟ್ಟಾರೆ ಯಾವುದೇ ರೀತಿಯಲ್ಲಿ ರೈತ ಸಮುದಾಯಕ್ಕೆ ಅನ್ಯಾಯವಾಗದೇ ನ್ಯಾಯಬದ್ಧ ಬೆಲೆ ಒದಗಿಸಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಹೆಚ್.ಅಸ್ಲಾಂಖಾನ್, ಬಿ.ಸಿ.ನರೇಂದ್ರ, ಎನ್.ಪಿ.ರವಿ, ಯು.ಎನ್.ಮಲ್ಲೇಶಯ್ಯ, ವೀರಭದ್ರನಾಯ್ಕ, ಎ.ಎನ್.ಮಹೇಶ್, ಕೆ.ಪಿ.ರುದ್ರೇಗೌಡ, ಮೋಹನ್‌ಕುಮಾರಿ, ಸುಧಾ ಮಂಜುನಾಥ್, ಚುನವಣಾಧಿಕಾರಿ ದಯಾನಂದ್ ಉಪಸ್ಥಿತರಿದ್ದರು.
Kumaraswamy as HOPCOMS district president Halappa as vice president
Leave a comment