Home namma chikmagalur electric shock:ವಿದ್ಯುತ್ ಸ್ಪರ್ಶದಿಂದ ಕೂದುವಳ್ಳಿ ಹೂವೇಗೌಡ ವಿಧಿವಶ
namma chikmagalurCrime News

electric shock:ವಿದ್ಯುತ್ ಸ್ಪರ್ಶದಿಂದ ಕೂದುವಳ್ಳಿ ಹೂವೇಗೌಡ ವಿಧಿವಶ

Share
ಕೂದುವಳ್ಳಿ ಹೂವೇಗೌಡ
ಕೂದುವಳ್ಳಿ ಹೂವೇಗೌಡ
Share

ಅಲ್ದೂರು:  ವಿದ್ಯುತ್ ಸ್ಪರ್ಶದಿಂದ ಕೂದುವಳ್ಳಿ ಹೂವೇಗೌಡ ವಿಧಿವಶ, ಮುಗಿಲು ಮುಟ್ಟಿದ ಆಕ್ರಂದನ ಅಲ್ದೂರು ಸಮೀಪದ ಕೂದುವಳ್ಳಿ ಗ್ರಾಮದ ಕೃಷಿಕ ಕೆ. ಎಲ್. ಹೂವೇಗೌಡ ಇಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಅಸುನಿಗಿದ್ದಾರೆ.

ಕಾಫಿ ತೋಟದ ಮರಗಸಿ ಮಾಡಿಸಲು ಅಲ್ಯೂಮಿನಿಯಂ ಏಣಿಯನ್ನು ತೋಟದೊಳಗೆ ಹೊತ್ತು ಸಾಗುತ್ತಿದ್ದಾಗ, ತೋಟದ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಅಚಾನಕ್ಕಾಗಿ ಏಣಿ ತಗುಲಿ ಸ್ಥಳದಲ್ಲಿ ಸಾವನಪ್ಪಿದ್ದಾರೆ.

ಇತ್ತೀಚಿಗಷ್ಟೇ ತನ್ನ ಒಬ್ಬನೇ ಮಗನಾದ ಶಿವೇಗೌಡಗೆ ಟ್ಯಾಕ್ಟರ್ ಅಪಘಾತದದಿಂದ ಗಂಭೀರ ಗಾಯಗಳಾಗಿದ್ದು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾನೆ. ಹೀಗೆ ತನ್ನ ಮಗ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿಯೇ 52ರ ವಯೋಮಾನದ ಹೂವೇಗೌಡ ವಿದ್ಯುತ್ ಸ್ಪರ್ಶದಿಂದ ಅಕಾಲಿಕವಾಗಿ ಅಸುನಿಗಿರುವುದು ನೋವಿನ ಸಂಗತಿಯಾಗಿದೆ.

ಮಡದಿ, ಮಗ ಸೇರಿದಂತೆ ಅಪಾರವಾದ ಒಂದು ದೊಡ್ಡ ಕುಟುಂಬವನ್ನು ಬಿಟ್ಟು ಅಗಲಿದ್ದಾರೆ.

Kooduvallii Hoovegowda dies of electric shock

 

Share

Leave a comment

Leave a Reply

Your email address will not be published. Required fields are marked *

Don't Miss

ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ಕಾಡಾನೆ ಸೆರೆ

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಮಲೆನಾಡಿಗರ ನಿದ್ದೆಗೆಡಿಸಿ, ಇಬ್ಬರು ಅಮಾಯಕರನ್ನು ಬಲಿಪಡೆದಿದ್ದ ರಕ್ಕಸ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದೆ. ಭಾನುವಾರ ಬೆಳಿಗ್ಗೆ ಮತ್ತೊಬ್ಬ ಕಾರ್ಮಿಕ ಮಹಿಳೆಯನ್ನು ಭೀಕರವಾಗಿ ಕೊಂದ...

ಆಸ್ತಿ ವಿವಾದ – ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಆಸ್ತಿ ವಿವಾದವೊಂದು ಭೀಕರ ಸ್ವರೂಪ ಪಡೆದುಕೊಂಡಿದೆ. ತಂದೆ ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಅನಾಥನಾಗಿದ್ದ ಯುವಕನೋರ್ವ ಪೊಲೀಸ್ ಠಾಣೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಾಫಿನಾಡನ್ನು ಬೆಚ್ಚಿಬೀಳಿಸಿದೆ. ನಗರದ ಪುನೀತ್‌...

Related Articles

ಖಂಡ್ರೆ ಸಭೆಯಿಂದ ಕಾಡು ಪ್ರಾಣಿಗಳ “ಅನಾಹುತ” ನಿಲ್ಲಿಸಲು ಸಾಧ್ಯವೇ ?

ಅರಣ್ಯ ಸಚಿವ ಖಂಡ್ರೆ(ಕಂಡರೆ) ಆನೆ,ಹುಲಿ.ಸಿಂಹ,ಇಲಿ,ಪಲ್ಲಿಗಳು ನಡುಗುತ್ತವೆ ಎಂಬ ಭ್ರಮೆ ಯಲ್ಲಿ ಬಾಳೆ ಹೊನ್ನೂರಲ್ಲಿ ರೈತರು,ಬೆಳೆಗಾರರು ಮತ್ತು...

ಭೀಕರ ಕೊಲೆ ಆರೋಪಿಗೆ ಜೈಲು ಶಿಕ್ಷೆ-ದಂಡ

ಮೂಡಿಗೆರೆ: ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣದ ಆರೋಪಿಗೆ ಚಿಕ್ಕಮಗಳೂರಿನ ಜಿಲ್ಲಾ ಮತ್ತು...

ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಎಸ್.ಎಲ್.ಭೋಜೇಗೌಡ

ಚಿಕ್ಕಮಗಳೂರು: ದುಬೈ ವಿಮಾನ ನಿಲ್ದಾಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸಿಲುಕಿದ್ದಾರೆ. ದುಬೈ ವಿಮಾನ ನಿಲ್ದಾಣದಿಂದ...

ಬಾಳೆಹೊನ್ನೂರಿನಲ್ಲಿ ನಡೆದ ಸಭೆಯಲ್ಲಿ ಅರಣ್ಯ ಸಚಿವರ ಭಾಷಣಕ್ಕೆ ಅಡ್ಡಿ

ಎನ್.ಆರ್ ಪುರ: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ...