ಚಿಕ್ಕಮಗಳೂರು: ತಮಿಳಿನಿಂದ ಕನ್ನಡ ಭಾಷೆ ಜನಿಸಿದೆ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ನಡೆಯನ್ನು ಖಂಡಿಸಿ ಶನಿವಾರ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಸಿನಿಮಾರಂಗ ಹಾಗೂ ರಾಜಕೀಯ ವಾಗಿ ಸೋತಿರುವ ಕಮಲ್‌ಹಾಸನ್ ಬಿಟ್ಟಿ ಪ್ರಚಾರಕ್ಕಾಗಿ ಕನ್ನಡವನ್ನು ತುಳಿಯುವ ಕೆಲಸ ಮಾಡಿರುವುದು ಕನ್ನಡಿಗರು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ವೈಯಕ್ತಿಕ ಸಿನಿಲಾಭಕ್ಕಾಗಿ ಪುರಾತನ ಭಾಷೆಯನ್ನು ನಿಂದಿಸು ವುದು ಶೋಭೆ ತರುವುದಿಲ್ಲ ಎಂದರು.
ಈಗಾಗಲೇ ಕನ್ನಡಚಿತ್ರಗಳಲ್ಲಿ ನಟಿಸಿರುವ ಕಮಲ್‌ಹಾಸನ್ ಭಾಷೆಯ ಸ್ವಗಂಧವೇ ಅರಿತಿಲ್ಲ. ಕನ್ನಡ ಭಾಷೆ ರಾಷ್ಟ್ರದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿರುವ ಭಾಷೆ. ಕವಿಸಂತರು, ದಾರ್ಶನಿಕರು, ಮಹಾಪುರು ಷರು, ಕೀರ್ತನೆಗಾರರಿಂದ ಮನ್ನಣೆ ಪಡೆದುಕೊಂಡಿರುವ ಕನ್ನಡ ಭಾಷೆಗೆ ಇತರೆ ರಾಜ್ಯದವರು ಸರ್ಟಿಫಿಕೇ ಟ್ ಕೊಡುವ ಅಗತ್ಯವಿಲ್ಲ ಎಂದರು.
ಕನ್ನಡಕ್ಕೆ ಪ್ರಾಚೀನ ಲಿಪಿ ಹಾಗೂ ಸಾಹಿತ್ಯ ಪರಂಪರೆಯಿದೆ. ಸಾವಿರಾರು ವರ್ಷಗಳಿಂದ ತನ್ನ ಶ್ರೀಮ ಂತ ಭಾಷಾ ಸಂಸ್ಕೃತಿ ಉಳಿಸಿಕೊಂಡಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವು ಲಭಿಸಿದ್ದು ಇದರ ಸ್ವಾಭಿ ಮಾನ ಮತ್ತು ಗರ್ವಕ್ಕೆ ಅಪಮಾನಗೊಳಿಸಿ ಆರೂವರೆ ಕೋಟಿ ಕನ್ನಡಿಗರ ಭಾವನೆಗೆ ಧಕ್ಕೆಯುಂಟು ಮಾಡಿ ದೆ ಎಂದು ದೂರಿದರು.
ಕೂಡಲೇ ನಟ ಕಮಲ್‌ಹಾಸನ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಪ್ಪೊಪ್ಪ್ಪಿಕೊಳ್ಳಬೇಕು. ಅದೇ ಮೊಂಡುತನ ಮುಂದುವರೆಸಿದರೆ ರಾಜ್ಯದಲ್ಲಿ ಕಮಲ್‌ನ ಚಿತ್ರಗಳು ಪ್ರದರ್ಶನಗೊಳ್ಳುವುದಿಲ್ಲ ಹಾಗೂ ನಾಡಿ ನ ಯಾವುದೇ ಜಿಲ್ಲೆಗಳಿಗೂ ಕಾಲಿಡದಂತೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಕಮಲ್ ಹಾಸನ್ ಕ್ಷಮೆಗೂ ಮುನ್ನ ರಾಜ್ಯದ ಯಾವುದೇ ಚಿತ್ರಮಂದಿರಗಳಲ್ಲಿ ಕಮಲ್ ಚಿತ್ರ ಬಿಡುಗಡೆ ಗೆ ಮುಂದಾದರೆ ನೇರವಾಗಿ ಚಿತ್ರಮಂದಿರದ ಮಾಲೀಕರ ಗಲಾಭೆಗೆ ಕಾರಣವಾಗಲಿದ್ದು ಈ ಬಗ್ಗೆ ಮಾಲೀಕ ರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್ ಮಾತನಾಡಿ ಕನ್ನಡಿಗರು ಎಲ್ಲಾ ರಾಜ್ಯದವರನ್ನು ಪ್ರೀತಿಯಿಂದ ಅಪ್ಪಿ ಕೊಳ್ಳುವ ಸಂಸ್ಕೃತಿಯಿದೆ. ಆದರೆ ಭಾಷೆ, ನೆಲ, ಜಲದ ತಂಟೆಗೆ ಬಂದಲ್ಲಿ ಸುಮ್ಮನೆ ಕೂರುವ ಜನರಲ್ಲ. ಹೀ ಗಾಗಿ ನಟ ಕಮಲ್ ಕೂಡಲೇ ಹೇಳಿಕೆಗೆ ಕ್ಷಮೆಕೋರಿ ಕನ್ನಡಕ್ಕೆ ತಲೆಬಾಗಲೇಬೇಕು ಎಂದರು.
ಈ ಸಂದರ್ಭದಲ್ಲಿ ಆಟೋ ಸಂಘದ ಅಧ್ಯಕ್ಷ ಜಯಪ್ರಕಾಶ್, ಮುಖಂಡರುಗಳಾದ ಅನ್ವರ್, ಕಳವಾಸೆ ರವಿ, ಕಲ್ಲುದೊಡ್ಡಿ ಸತೀಶ್, ಶಂಕರೇಗೌಡ, ಪಾಲಾಕ್ಷಿ, ರಮೇಶ್, ನಿಲೇಶ್, ದಯಾನಂದ್, ಅತೀಕ್, ಚೇತ ನ್, ವಿನಯ್.ಜಿ. ಮತ್ತಿತರರು ಹಾಜರಿದ್ದರು.
Kannada Sena protests against Kamal Haasan’s statement
Leave a comment