ಚಿಕ್ಕಮಗಳೂರು: ಕರ್ನಾಟಕದ ನಿವಾಸಿಗಳನ್ನು ಹೊರತಾಗಿ ಹೊರರಾಜ್ಯದ ವಲಸಿಗರಿ ಗೆ ರಾಜ್ಯಸರ್ಕಾರ ಮನೆಗಳ ನಿರ್ಮಿಸಬಾರದು ಎಂದು ಆಗ್ರಹಿಸಿ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ಗುರು ವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ರಾಜ್ಯದಲ್ಲಿ ಸುಮಾರು ಎರಡು ವರ್ಷ ಳಿಂದ ಮಳೆಯ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಮನೆಯನ್ನು ನಿರ್ಮಿಸಿಕೊಡದೇ ಕೇರಳದಿಂ ದ ಬಂದಿರುವ ಮುಸ್ಲೀಂ ವಲಸಿಗರಿಗೆ ಮನೆ ನಿರ್ಮಿಸುವುದು ಖಂಡನೀಯ ಎಂದರು.
ರಾಜ್ಯದಲ್ಲೇ ಹಲವೆಡೆ ಅತಿವೃಷ್ಟಿ ಪರಿಣಾಮ ಸ್ವಂತ ಮನೆ ಕಳೆದುಕೊಂಡವರು ಬಹಳಷ್ಟು ಮಂದಿಗಳ ನಡುವೆ ೨೦೦ ವಲಸಿಗರಿಗೆ ಬೆಂಗಳೂರು ನಗರದಲ್ಲಿ ಪ್ರತಿ ಮನೆಗೆ ೧೧.೨೦ ಲಕ್ಷ ರೂ.ಗಳನ್ನು ವ್ಯಯಿಸಿ ಮನೆ ಕಟ್ಟಿಸಲು ಮುಂದಾಗಿ ಸ್ಥಳೀಯ ನಿವಾಸಿಗಳಿಗೆ ರಾಜ್ಯಸರ್ಕಾರ ದ್ರೋಹವೆಸಗುತ್ತಿದೆ ಎಂದು ದೂರಿದರು.
ಕೂಡಲೇ ರಾಜ್ಯಸರ್ಕಾರ ಕೇರಳದಿಂದ ಬಂದಿರುವ ಮುಸ್ಲೀಂ ವಲಸಿರಿಗೆ ಮನೆಗಳನ್ನು ನಿರ್ಮಿಸಿಕೊ ಡಬಾರದು. ರಾಜ್ಯದಲ್ಲಿ ಜನಿಸಿ ಅನೇಕ ವರ್ಷಗಳಿಂದ ಬದುಕುತ್ತಿರುವ ಸ್ಥಳೀಯ ಮುಸ್ಲೀಂ ಬಾಂಧವರಿಗೆ ಮನೆ ಕಟ್ಟಿಕೊಡಲು ಅಭ್ಯಂತರವಿಲ್ಲ. ಆದರೆ ಹೊರರಾಜ್ಯದವರಿಗೆ ಸವಲತ್ತು ಕಲ್ಪಿಸಬಾರದು ಎಂದರು.
ರಾಜ್ಯಸರ್ಕಾರ ಒಂದು ವೇಳೆ ಹೊರರಾಜ್ಯದ ನಿವಾಸಿಗಳಿಗೆ ಮನೆ ನಿರ್ಮಿಸಲು ಮುಂದಾದರೆ ಕನ್ನಡ ಸೇನೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಮೂಲಕ ಸದಾ ಕನ್ನಡಿಗರ ಪರವಾ ಗಿ ನಿಲ್ಲುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ನಗರಾಧ್ಯಕ್ಷ ಸತೀಶ್, ಉಪಾಧ್ಯಕ್ಷ ಸಂಜೀವ್, ಮುಖಂಡರುಗಳಾದ ಅನ್ವರ್, ಶಂಕರೇಗೌಡ, ಚಂದ್ರಶೇಖರ್, ರೋಷನ್, ದಾಕ್ಷಯಿ ಣಿ, ಹಬೀಬ್, ಪಾಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.
Kannada Sena appeals not to build houses for out-of-state residents
Leave a comment