Home Political News ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಕಡೂರು ಶಾಸಕ ಕೆಎಸ್ ಆನಂದ್ ಸಂತಾಪ
Political News

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಕಡೂರು ಶಾಸಕ ಕೆಎಸ್ ಆನಂದ್ ಸಂತಾಪ

Share
Share

ಚಿಕ್ಕಮಗಳೂರು : ಇಡೀ ಪ್ರಪಂಚವೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾಗ ಭಾರತದ ಯಾವುದೇ ಬ್ಯಾಂಕ್ ಗಳು ಮುಚ್ಚದಂತೆ ಮಾಡಿದ್ದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಎಂದು ಕಡೂರು ಶಾಸಕ ಕೆ.ಎಸ್ ಆನಂದ್ ಸ್ಮರಿಸಿದ್ದಾರೆ.

ಮನಮೋಹನ್ ಸಿಂಗ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಅವರು ಸಿಂಗ್ ನಿಧನ ಕಾಂಗ್ರೆಸ್ ಪಕ್ಷಕ್ಕಷ್ಟೆ ಅಲ್ಲ ದೇಶದ ಎಲ್ಲಾ ಜನತೆಗೆ ದುಖಃಕರ ವಿಷಯವಾಗಿದ್ದು ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಡೀ ಪ್ರಪಂಚದ ಎಷ್ಟೋ ದೇಶಗಳು ಆರ್ಥಿಕ ಏರುಪೇರು ಎದುರಿಸುತ್ತಿದ್ದರೂ ಭಾರತದ ಯಾವುದೇ ಬ್ಯಾಂಕ್ ಮುಳುಗುವಂತಹ ಒಂದೇ ಒಂದು ಘಟನೆ ಅವರ ಆಡಳಿತದಲ್ಲಿ ನಡೆಯಲಿಲ್ಲ ಎಂದರು.

ಆರ್.ಬಿ ಐ ಗೌರ್ನರ್ ಆಗಿ ದೇಶಕ್ಕೆ ಕೊಡುಗೆ ಕೊಟ್ಟ ಕೀರ್ತಿಯೂ ಮನ ಮೋಹನ್ ಸಿಂಗ್ ರಿಗೆ ಸಲ್ಲಬೇಕು ಗಾಂಧೀಜಿಯವರ ಗ್ರಾಮ ಸ್ವರಾಜ್ಯ ದ ಕನಸು ನನಸು ಮಾಡಿದ್ದು ನರೆಗಾ ದಂತ ಕಾರ್ಯಕ್ರಮ ಕೊಡುವ ಮೂಲಕ ಗ್ರಾಮ ಪಂಚಾಯತಿ ಗಳಿಗೆ ನೇರವಾಗಿ ಅನುದಾನ ಮಾಡಿದ್ದು ಸೇರಿದಂತೆ ಆಧಾರ್ ಆರ್ ಟಿ ಐ ನಂತಹ ಉತ್ತಮ ಯೋಜನೆಗಳನ್ನು ದೇಶಕ್ಕೆ ಕೊಟ್ಟಿದ್ದಾರೆ ಎಂದು ಕೆಎಸ್ ಆನಂದ್ ಹೇಳಿದರು.

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ಸಿ.ಟಿ.ರವಿ ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ

ಚಿಕ್ಕಮಗಳೂರು: ಸಿ.ಟಿ.ರವಿ ಅವರು ಸೋಲಿನ ಹತಾಶೆಯಿಂದ ಎಚ್.ಡಿ.ತಮ್ಮಯ್ಯ ವಿರುದ್ಧ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್‌...

20 ವರ್ಷ ಹೊರಗಿನವರೆ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದಾರೆ

ಮೂಡಿಗೆರೆ:‘ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿರೋಧ ಪಕ್ಷಗಳು ಹತಾಶೆಯಿಂದ ಬಾಯಿ ಚಪಲಕ್ಕಾಗಿ ಮಾತನಾಡುತ್ತಿವೆ’ ಎಂದು...

ರಾಜ್ಯದಲ್ಲಿ ನವೆಂಬರ್ ಕ್ರಾಂತಿಯೋ ! ಭ್ರಾಂತಿಯೋ ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ ಎರಡೂವರೆ ವರ್ಷ ಪೂರೈಸುತ್ತಿದೆ.ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ “ಮುಖ್ಯಮಂತ್ರಿ” ಬದಲಾಗುತ್ತಾರೆ...

ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿ ಮಾಜಿ ಸಚಿವ ಶಾಸಕ ಜೀವರಾಜ್...