Home namma chikmagalur ಅಜ್ಜಂಪುರದಲ್ಲಿ ಜುಂಜಪ್ಪ ಸ್ವಾಮಿ ದೇವರ ಜಾತ್ರಾ ಮಹೋತ್ಸವ
namma chikmagalurajjampuraLatest News

ಅಜ್ಜಂಪುರದಲ್ಲಿ ಜುಂಜಪ್ಪ ಸ್ವಾಮಿ ದೇವರ ಜಾತ್ರಾ ಮಹೋತ್ಸವ

Share
Share

ಅಜ್ಜಂಪುರ: ತಾಲ್ಲೂಕಿನ ಭಕ್ತನ ಕಟ್ಟೆ, ಹುಚ್ಚೇನಹಟ್ಟಿ, ದಾಸರಹಟ್ಟಿ ಗ್ರಾಮಗಳಲ್ಲಿ ಜುಂಜಪ್ಪ ಸ್ವಾಮಿ ದೇವರ ಜಾತ್ರಾ ಮಹೋತ್ಸವ ಮಂಗಳವಾರ ಜರುಗಿತು.

ಜಾತ್ರೆ ಪ್ರಯುಕ್ತ ಜುಂಜಪ್ಪ ಸ್ವಾಮಿ, ಈರಣ್ಣಜ್ಜ ಸ್ವಾಮಿ ಉತ್ಸವ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ನಡೆಸಲಾಯಿತು.

ಜುಂಜಪ್ಪ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಬಂದು ದುಗ್ಗಳ ಸೇವೆ ಸಲ್ಲಿಸಿದರೆ, ಮನೆ ಮಂದಿಗೆ ಹಾವು- ಹುಪ್ಪಟೆಗಳು ಕಾಟ ಕೊಡುವುದಿಲ್ಲ. ಚರ್ಮ ರೋಗ ಬರುವುದಿಲ್ಲ. ಕಿವಿ ನೋವು ಕಾಣಿಸಿಕೊಳ್ಳುವುದಿಲ್ಲ. ಜಾನುವಾರುಗಳಿಗೆ ರೋಗ ತಗಲುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಹೆಚ್ಚಿನ ಭಕ್ತರು ಜಾತ್ರೆಗೆ ಬರುತ್ತಾರೆ ಎಂದು ದೇವಾಲಯ ಸಮಿತಿಯ ಹುಚ್ಚೇನಹಟ್ಟಿ ಶಿವಣ್ಣ ತಿಳಿಸಿದರು.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ದೇವರ ದರ್ಶನ ಪಡೆದು, ಹೂವು ಹಣ್ಣು ಸಮರ್ಪಿಸಿದರು. ದುಗ್ಗಲ ಸೇವೆ ಸಲ್ಲಿಸಿದರು. ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಗುಡ್ಡೆ ಪ್ರವೇಶ ನಡೆಯಿತು. ಬುಧವಾರ (ನ. 5) ಹುಚ್ಚೇನ ಹಟ್ಟಿಯಲ್ಲಿ ದೊಡ್ಡ ಎಡೆ ಸೇವೆ ಮತ್ತು ಉತ್ಸವದ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.

Junjappa Swamy God’s festival in Ajjampura
Share

Leave a comment

Leave a Reply

Your email address will not be published. Required fields are marked *

Don't Miss

ಇಂಧನ ನಿಗಮದ ಅಧ್ಯಕ್ಷರಾಗಿ ಟಿ.ಡಿ.ರಾಜೇಗೌಡರ ಮತ್ತೆ ನೇಮಕ

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃಧ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರನ್ನು ಮುಂದುವರೆಯಲು ಆದೇಶವನ್ನು ನೀಡಲಾಗಿದೆ. ರಾಜೇಗೌಡರನ್ನು 2024 ರಲ್ಲಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಎರಡು ವರ್ಷದ ಅವಧಿಯ ನೇಮಕಾತಿ...

ಸಿ.ಡಿ.ಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ …?

ಚಿಕ್ಕಮಗಳೂರು: ಮಾಜಿ ಸಚಿವ ಸಿ.ಟಿ.ರವಿ ಆಪ್ತ ಸುದರ್ಶನ್ ಬಲಗೈ ಬಂಟ ಹಾಲಿ ಮೂಗ್ತಿಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಆನಂದ್ ನ ರಸಲೀಲೆ ನಡೆಸುತ್ತಿದ್ದಾರೆ ಎಂದು ಕೆಲವರು ಹೋಮ್ ಸ್ಟೇಗೆ ನುಗ್ಗಿ ಗಲಾಟೆ...

Related Articles

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...

ಲಾಭಾಂಶ ಆಮಿಷ ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ

ಚಿಕ್ಕಮಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ...

ಸಿಡಿಎ ಅಧ್ಯಕ್ಷರಾಗಿ ಎಚ್‌.ಪಿ. ಮಂಜೇಗೌಡ ನೇಮಕ

ಚಿಕ್ಕಮಗಳೂರು: ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸಿಡಿಎ) ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ ಅವರನ್ನು...

ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ಕಾಂಗ್ರೆಸ್ ನಲ್ಲಿ ಸಿ.ಡಿ.ಎ. ಫೈಟ್ – ರಾಮಚಂದ್ರ ಬಿಗಿ ಪಟ್ಟು

ಚಿಕ್ಕಮಗಳೂರು: ಹಿರೇಮಗಳೂರು ರಾಮಚಂದ್ರ ಸಿ.ಡಿ.ಎ.ಅಧ್ಯಕ್ಷ ಸ್ಥಾನ ಪಡೆಯಲು ಬಿಗಿ ಪಟ್ಟು ಹಿಡಿದು ಒತ್ತಾಯ ಮಾಡುತ್ತಿದ್ದಾರೆ. ಕಳೆದ...