ಮೂಡಿಗೆರೆ : ದಂಬದಹಳ್ಳಿ – ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಗೆ ಈಗಾಗಲೇ ೪೧೩ ಕೋಟಿ ರೂ ಬಿಡುಗಡೆಯಾಗಿದ್ದು, ಪ್ರಗತಿಯ ಬಗ್ಗೆ ಮಾಹಿತಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡುವಂತೆ ಲೋಕೋಪಯೋಗಿ ಇಲಾಖೆ ಸಚಿವ ಜಾರಕಿಹೊಳಿ ಸೂಚಿಸಿದರು
ಮೂಡಿಗೆರೆ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಾಗುವ ರಸ್ತೆಯಲ್ಲಿರುವ ಕೊಟ್ಟಿಗೆಹಾರದಲ್ಲಿರುವ ತೇಜಸ್ವಿ ಪ್ರತಿಷ್ಠಾನಕ್ಕೆ ಇಂದು ಭೇಟಿ ನೀಡಿ ಪೂಚಂತೇ ಅವರು ಬಳಸುತ್ತಿದ್ದ ಸ್ಕೂಟರ್, ಕ್ಯಾಮರ, ಕುರ್ಚಿ, ಕಂಪ್ಯೂಟರ್ ಗಳು ಸೇರಿದಂತೆ ಹಲವು ಪರಿಕರಗಳನ್ನು ಮತ್ತು ಅಂದಿನ ಕಾಲದಲ್ಲಿ ಬಳಸುತ್ತಿದ್ದ ಅಡುಗೆ ಕೃಷಿ ಉಪಕರಣಗಳನ್ನು ವೀಕ್ಷಿಸಿ ಮೂಕವಿಸ್ಮಿತರಾದರು. ಅಲ್ಲೆ ಅಧಿಕಾರಿಗಳೊಂದಿಗೆ ನೀಲನಕ್ಷೆ ಬಗ್ಗೆ ಚರ್ಚಿಸಿದರು.
ಈಗಾಗಲೇ ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಗಳ ಶಾಸಕರುಗಳಿಗೆ ಒಂದು ಕ್ಷೇತ್ರಕ್ಕೆ ೨೫ ಕೋಟಿ ಯಂತೆ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಗೊಳಿಸಿದ್ದು ಕೆಲಸಗಳು ಪ್ರಗತಿಯಲ್ಲಿವೆ ಎಂದರು.
ಬಹುಜನರ ಬೇಡಿಕೆಯಾದ ಶಿಶಿಲಾ- ಬೈರಾಪುರ ರಸ್ತೆಯ ಬಗ್ಗೆ ಬೆಳೆಗಾರರು ಸಚಿವರ ಗಮನಕ್ಕೆ ತಂದು ಈಗಾಗಲೇ ಪ್ರಸ್ತಾವನೆಗೆ ಸರ್ಕಾರದ ಬಳಿ ಹೋಗಿದೆ ಎಂದಾಗ ಸಚಿವರು ಅದನ್ನು ಪರಿಶೀಲಿಸುವುದಾಗಿ ತಿಳಿಸಿದರು.
ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್ .ಜೈರಾಂ ಮಾನವ ಮತ್ತು ಆನೆಗಳ ಸಂಘರ್ಷದ ಬಗ್ಗೆ ಶಾಶ್ವತ ಪರಿಹಾರದ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕೆಂದಾಗ ಸಚಿವರು ಅರಣ್ಯ ಮಂತ್ರಿಗಳನ್ನು ಭೇಟಿ ಮಾಡಿ ದಿನಾಂಕ ನಿಗದಿಪಡಿಸಿ ಬೆಳೆಗಾರರು, ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಭೆಯನ್ನು ಕರೆದು ಚರ್ಚಿಸುವುದಾಗಿ ತಿಳಿಸಿದರು.
ಅನಂತರ ಸಚಿವರು ಮೂಡಿಗೆರೆ, ಚಾರ್ಮಾಡಿಘಾಟ್-ಉಜಿರೆವರೆಗಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಅಶ್ವಿನಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಕಿರಿಯ ಅಭಿಯಂತರ ಚನ್ನಕೇಶವ ಬಿ.ಟಿ. ಮಾಜಿ ಸಚಿವರುಗಳಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮುಖಂಡರಾದ ಜಿ.ಹೆಚ್.ಹಾಲಪ್ಪಗೌಡ, ಸುರೇಂದ್ರ ಎಂ.ಎಸ್.ಅನಂತ್, ಸುಬ್ರಹ್ಮಣ್ಯ ಟಿ.ಎಂ., ಸಂತೋಷ್ ಮುಗ್ರಹಳ್ಲಿ, ಬೆಟ್ಟಗೆರೆ ಸಂತೋಷ್, ಉಪಸ್ಥಿತರಿದ್ದರು.
Jarkiholi was left speechless after visiting the Tejaswi Foundation.
Leave a comment