ಚಿಕ್ಕಮಗಳೂರು: ಚಿಕ್ಕಮಗಳೂರಿಗೆ ಜವಳಿ ಪಾರ್ಕ್ ತಂದು ಜನರಿಗೆ ಉದ್ಯೋಗ ಕೊಡುವೆ ಎಂದು ಕಳೆದ ಹತ್ತು ವರ್ಷಗಳಿಂದ ಪ್ರಚಾರ ಪಡೆದ ಮಾಜಿ ಶಾಸಕ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಜವಳಿ ಪಾರ್ಕ್ ಮಾಡಲಿಲ್ಲ. ಇದಕ್ಕೆ ಪತ್ರಕರ್ತ ನ ಒಳ ಸಂಬಂಧ ಕಾರಣವೇ ಎಂಬ ಚರ್ಚೆ ಶುರುವಾಗಿದೆ.
ಲಕ್ಯಾ ಹೋಬಳಿಯ ಹಿರೇಗೌಜ ಮತ್ತು ಕಡೂರು ತಾಲ್ಲೂಕಿನ ಚೀಲನಹಳ್ಳಿಯಲ್ಲಿ ಪ್ರಾರಂಭಿಸಲು ಸರ್ಕಾರ ಆದೇಶ ನೀಡಿದೆ ಇದರಿಂದ ಐದರಿಂದ ಹತ್ತು ಸಾವಿರ ಜನರಿಗೆ ಉದ್ಯೋಗ ಸಿಕ್ಕರೆ ಪರೋಕ್ಷವಾಗಿ ಲಕ್ಷಾಂತರ ಜನರು ಉಪ ಉದ್ಯೋಗ ಸೃಷ್ಟಿ ಯಾಗುತ್ತದೆ.ಆದರೆ ಚಿಕ್ಕಮಗಳೂರು ಜವಳಿ ಪಾರ್ಕ್ ಗೆ ಪತ್ರಕರ್ತ ಒಬ್ಬ ತಿರುಪತಿ ನಾಮ ಬಳಿಯುವ ಸಂಚು ನಡೆಸುತ್ತಿರುವುದು ಮಾತ್ರ ಏಕೆ ಎನ್ನುತ್ತಾರೆ.
ಹಿರೇಗೌಜ ಸರ್ವೆ ನಂಬರ್ ರಲ್ಲಿ 88 ಎಕರೆಯಷ್ಟು ಗೋಮಾಳದ ಜಾಗವಿದ್ದು ಇದರಲ್ಲಿ 15 ಎಕರೆ ಜಾಗ ಜವಳಿ ಪಾರ್ಕ್ ಸಾಕು. ಆದರೆ ಹೋಮ್ ಸ್ಟೇ ಮಾಡುವೆ ಎಂದು ಪತ್ರಕರ್ತನೊಬ್ಬ ಅರ್ಜಿ ಸಲ್ಲಸಿದ್ದು ಖಾಸಗಿಯವರಿಗೆ ಜಾಗ ನೀಡಲು ಬರುವುದಿಲ್ಲ ಎಂದು ಹಿಂದಿನ ಜಿಲ್ಲಾಧಿಕಾರಿ ರಮೇಶ್ ಆದೇಶ ಮಾಡಿದ್ದಾರೆ .ನನಗೆ ಹರಿಪ್ರಸಾದ್ ನೆಂಟ ಎಂದು ಹೇಳಿಕೊಂಡು ಒಳ ಸಂಚು ಮಾಡುತ್ತಿರುವುದರ ಜೊತೆಗೆ ಅವರೀವರಿಂದ ಅರ್ಜಿ ಕೊಡಿಸಿ ಕಿತಾಪತಿ ಮಾಡುತ್ತಿರುವುದು ನಿಂತಿಲ್ಲ.
ಈ ಹಿಂದೆ ನಗರ ಸಭೆಯ ಜಾಗ ಪಡೆದು ಮೂವತ್ತು ಲಕ್ಷರೂಗಳಿಗೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿದ್ದು ಇದೇ ರೀತಿ ಜಮೀನು ಪಡೆದು ತಿರುಪತಿ ನಾಮ ಹಚ್ಚಲು ಹೋಗಿ ಜನರಿಗೆ ಉದ್ಯೋಗ ತಪ್ಪಿಸುವುದು ಎಷ್ಟರ ಮಟ್ಟಿಗೆ ಸರಿ.
ಇದರ ಮಧ್ಯೆ ಕೆಲ ಜನ ಉಳುಮೆ ಮಾಡಿಕೊಂಡು ಸ್ವಾಧೀನದಲ್ಲಿದ್ದಾರೆ ಎಂಬ ತಕರಾರು ಬೇರೆ ಗೋಮಾಳ ಜಮೀನು ನೀಡಲು ಕೆಲ ನಿಭಂದನೆಗಳಿದ್ದು ಗೋಮಾಳ ಜಮೀನು ಪಡೆಯುವುದು ಸುಲಭವಿಲ್ಲ.ಇದರ ಮಧ್ಯೆ ಹಲವು ವರ್ಷಗಳಿಂದ ಕನಸು ನೆನಸು ಮಾಡವ ದಿಟ್ಟ ನಿರ್ಧಾರ ಮಾಡಿರುವ ಶಾಸಕ ತಮ್ಮಯ್ಯ ರ ಕೆಲಸಕ್ಕೆ ಶ್ಲಾಘನೀಯ ಎನ್ನುತ್ತಾರೆ ಜನ.
Is there a conspiracy to name survey number 111 of Textile Park after Tirupati?
Leave a comment